ಅ.13, ತ್ರಿವೇಣಿ ಸಂಗಮದಲ್ಲಿ ಕುಂಭಮೇಳ

ಮಂಡ್ಯ, ಸೆ. ೭- ಕೆ.ಆರ್.ಪೇಟೆ ತಾಲ್ಲೂಕು ಅಂಬಿಗರಹಳ್ಳಿ ಹತ್ತಿರ ತ್ರಿವೇಣಿ ಸಂಗಮದಲ್ಲಿ ಕುಂಭಮೇಳ ಅ.೧೩ ರಿಂದ ೧೬ ರವರೆಗೆ ಅದ್ಧೂರಿಯಾಗಿ ನಡೆಯಲಿದೆ. ಈ ಬೃಹತ್ ಕುಂಭಮೇಳ ಕಾರ್ಯಕ್ರಮಕ್ಕೆ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಎಸ್. ಅಶ್ವತಿರವರು ತಿಳಿಸಿದರು.
ಜಿಲ್ಲಾಪಂಚಾಯತ್‌ನ ಕಾವೇರಿ ಸಭಾಂಗಣದಲ್ಲಿ ಕೆ.ಆರ್.ಪೇಟೆ ತಾಲ್ಲೂಕು ಅಂಬಿಗರಹಳ್ಳಿ ಹತ್ತಿರ ತ್ರಿವೇಣಿ ಸಂಗಮದಲ್ಲಿ ಕುಂಭಮೇಳ ಆಚರಿಸುವ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಮೂರು ನದಿಗಳ ತ್ರಿವೇಣಿ ಸಂಗಮದಲ್ಲಿ ಕಾವೇರಿ ನದಿ ಪೂಜೆ ಹಾಗೂ ಬಾಗಿನ ಸಮರ್ಪಣೆ ಮಾಡಲಾಗುತ್ತದೆ. ಸಾಧು ಸಂತರು ಹಾಗೂ ಗಣ್ಯರಿಂದ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.
ಮೂಲ ಸೌಕರ್ಯಗಳಾದ ರಸ್ತೆ, ಶೌಚಾಲಯ, ವಾಹನ ನಿಲ್ದಾಣ, ಕುಡಿಯುವ ನೀರು, ಉಪಹಾರ, ನೈರ್ಮಲ್ಯ, ತಂಗುದಾಣಗಳು, ವೈದ್ಯಕೀಯ ಸೇವೆಗಳು ಮತ್ತು ತುರ್ತುಚಿಕಿತ್ಸೆ, ಅಗ್ನಶಾಮಕದಳ, ರಕ್ಷಣಾ ಕಾರ್ಯ, ವಿದ್ಯುತ್ ದೀಪಾಲಂಕಾರ, ಮಾಹಿತಿ ಕೇಂದ್ರ ಗಳ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಿ ಎಂದರು.
ಅಪರ ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಎಲ್ ನಾಗರಾಜು ರವರು ಮಾತನಾಡಿ ಅಕ್ಟೋಬರ್ .೬ ರಂದು ಶ್ರೀ ಮಲೈ ಮಹದೇಶ್ವರ ಬೆಟ್ಟದಲ್ಲಿ ವಿಶೇಷವಾಗಿ ಜ್ಯೋತಿ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಗುತ್ತದೆ. ಮಹದೇಶ್ವರ ಜ್ಯೋತಿ ಯಾತ್ರೆ ಮೈಸೂರು, ಚಾಮರಾಜನಗರ ಮಂಡ್ಯ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಚರಿಸಿ ಕೆ.ಆರ್ ಪೇಟೆಯ ತ್ರಿವೇಣಿ ಸಂಗಮಕ್ಕೆ ಜ್ಯೋತಿ ರಥ ಬರಲಿದೆ ಎಂದರು.