ಅ.12, 13ರಂದು ಸಿ.ಎ.ಗಳ ಪ್ರಾದೇಶಿಕ ಸಮ್ಮೇಳನ


ಸಂಜೆವಾಣಿ ವಾರ್ತೆ
ಹೊಸಪೇಟೆ ಅ10: ಭಾರತೀಯ ಚಾರ್ಟಡ್ ಅಕೌಂಟೆಂಟ್ಸ್ ಸಂಸ್ಥೆಯ (ಐಸಿಎಐ) ದಕ್ಷಿಣ ಭಾರತ ಪ್ರಾಂತೀಯ ಪರಿಷತ್ತಿನ (ಎಸ್‌ಐಆರ್‌ಸಿ) ವತಿಯಿಂದ ಬಳ್ಳಾರಿ ಶಾಖೆಯ ಆಶ್ರಯದಲ್ಲಿ 2023ರ ಅಕ್ಟೋಬರ್ 12 ಮತ್ತು 13ರಂದು ಎರಡು ದಿನಗಳ 55ನೇ ದಕ್ಷಿಣ ಭಾರತ ಮಟ್ಟದ ಚಾರ್ಟಡ್ ಅಕೌಂಟೆಂಟ್‌ಗಳ ಸಮಾವೇಶ- “ಜ್ಞಾನ ಸಂಪನ್ನ ಅರಿವಿನಿಂದ ವಿಕಾಸದೆಡೆಗೆ” – ಹೊಸಪೇಟೆಯಲ್ಲಿ ಏರ್ಪಡಿಸಲಾಗಿದೆ ಎಂದು ಎಸ್‌ಐಆರ್‌ಸಿ ಅಧ್ಯಕ್ಷರಾದ ಸಿಎ ಪನ್ನರಾಜ್ ಎಸ್‌ ತಿಳಿಸಿದರು.
ಹೊಸಪೇಟೆಯ ಪತ್ರಿಕಾಭವನದಲ್ಲಿ ಹಮ್ಮಿಕೊಂಡಿದ್ದ ಸುದ್ಧಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು
ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನವನ್ನು ಅಕ್ಟೋಬರ್ 12ರಂದ ಉದ್ಘಾಟಿಸಲಿದ್ದಾರೆ. ಬೃಹತ್ ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ್, ಪ್ರವಾಸೋದ್ಯಮ ಸಚಿವರಾದ ಎಚ್‌.ಕೆ.ಪಾಟೀಲ್, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರಾದ ಶರಣಬಸಪ್ಪ ದರ್ಶನಾಪುರ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ, ಕಾರ್ಮಿಕ ಸಚಿವರಾದ ಸಂತೋಷ ಲಾಡ್, ಮತ್ತು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಎಲ್ಲ ಶಾಸಕರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ. ಹೊಸಪೇಟೆ ಶಾಸಕರಾದ ಎಚ್.ಆರ್. ಗವಿಯಪ್ಪ ಅಧ್ಯಕ್ಷತೆ ವಹಿಸುವರು, ಐಸಿಎಐ ಅಧ್ಯಕ್ಷರಾದ ಸಿಎ ಅನಿಕೇತ್ ಎಸ್. ತಲಾಟಿ ಮತ್ತು ಉಪಾಧ್ಯಕ್ಷರಾದ ಸಿಎ ರಂಜಿತ್ ಅಗರವಾಲ್ ಅವರೂ ಪಾಲ್ಗೊಳ್ಳುವರು ಎಂದು  ತಿಳಿಸಿದರು.
ಎಸ್‌ಐಆರ್‌ಸಿಯು ಪ್ರಾದೇಶಿಕ ಸಮ್ಮೇಳನವನ್ನು ಪ್ರತಿ ವರ್ಷ ಆಯೋಜಿಸುತ್ತಿದ್ದು, ದಕ್ಷಿಣ ಭಾರತ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಸುಮಾರು ಮೂರು ಸಾವಿರ ಮಂದಿ ನೋಂದಾಯಿತ ಚಾರ್ಟಡ್‌ ಅಕೌಂಟೆಂಟ್‌ಗಳು ಭಾಗವಹಿಸುತ್ತಿದ್ದಾರ. ವರ್ಚುವಲ್‌ ಆಗಿ ಏಳು ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಜಿಎಸ್‌ಟಿ, ಫೆಮಾ, ಆದಾಯ ತೆರಿಗೆ, ಮಾಹಿತಿ ತಂತ್ರಜ್ಞಾನ, ಕಂಪನಿ ಕಾಯ್ದೆ ಮತ್ತು ನೇರ ತೆರಿಗೆ ಇತ್ಯಾದಿ ವಿಷಯಗಳ ಬಗ್ಗೆ ದೇಶದ ವಿವಿಧ ಕಡೆಗಳಿಂದ ವಿಶೇಷ ತಜ್ಞರು ಹಲವು ತಾಂತ್ರಿಕ ಗೋಷ್ಠಿಯಲ್ಲಿ ಉಪನ್ಯಾಸ ನೀಡಲಿದ್ದಾರೆ.
ಸಂಸ್ಥೆಯ ಏಳು ದಶಕಗಳ ಇತಿಹಾಸದಲ್ಲಿ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನಿಂದಾಚೆಗೆ ಗ್ರಾಮೀಣ ಪ್ರದೇಶವೊಂದರಲ್ಲಿ ಈ ಸಮ್ಮೇಳನ ನಡೆಯುತ್ತಿದೆ ಗ್ರಾಮೀಣ ಪ್ರದೇಶದಲ್ಲಿ ಸೇವಾ ವಿಸ್ತೀರ್ಣದ, ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣ ಮಾಡಲು ಸರ್ಕಾರವೂ ಮುಂದಾಗಬೇಗು ಎಂದು ಆಗ್ರಹಿಸಿದರ.
ಈ ಮೂಲಕ ಹಂಪಿಯ ಇತಿಹಾಸ, ಐತಿಹಾಸಿಕ ಸ್ಥಳಗಳನ್ನು ಪ್ರತಿನಿಧಿಗಳಿಗೆ ಪರಿಚಯಿಸುವ ಉದ್ದೇಶವನ್ನೂ ಸಹ ಸಂಸ್ಥ ಹೊಂದಿದೆ. ಸಮ್ಮೇಳನದ ಅವಧಿಯಲ್ಲಿ ಆರೋಗ್ಯ ಗೋಷ್ಠಿ ಮತ್ತು ಮನೋರಂಜನಾ ಕಾರ್ಯಕ್ರಮಗಳೂ ನಡೆಯಲಿವೆ ಎಂದರು.
ಗೋಷ್ಠಿಯಲ್ಲಿ ಸುನೀಲ ಕುಮಾರ, ಎ.ಜಿ.ಗೀತಾ, ಕೆ.ನಾಗನೂರು, ಕೆ.ಪುರುಷೋತ್ತಮ ರೆಡ್ಡಿ, ಸಿ.ವೆಂಟನಾರಾಯಣ. ಗಜರಾಜ್, ಸೈಯದ್ ಮಹಮ್ಮದ್ ಹಾಜರಿದ್ದರು.

One attachment • Scanned by Gmail