ಅ.1 ರಿಂದ ಚಿತ್ರಮಂದಿರಗಳಿಗೆ ಪೂರ್ಣ ಸಾಮರ್ಥ್ಯ ಅವಕಾಶ

ಬೆಂಗಳೂರು, ಸೆ.24- ರಾಜ್ಯದಲ್ಲಿ ಕೊರೊನಾ‌‌ ಸೋಂಕಿನ ಪಾಸಿಟಿವಿ ಪ್ರಮಾಣ ಶೇ. 1ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಸಾಮರ್ಥ್ಯ ಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಶೇ.1ಕ್ಕೆ ಮೇಲ್ಪಟ್ಟು ಪಾಸಿವಿಟಿ ಪ್ರಮಾಣ ಇರುವ ಜಿಲ್ಲೆಗಳಲ್ಲಿ ಶೇ.50 ರಷ್ಟು ಮತ್ತು ಶೇ 2 ರಷ್ಟು ಮತ್ತು ಅದಕ್ಕೂ ಹೆಚ್ಚು ಸಾಮರ್ಥ್ಯ ಇರುವ ಜಿ್ಳಲ್ಲೆಗಳಲ್ಲಿ ಚಿತ್ರಮಂದಿರ ಬಂದ್ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಕೊರೊನಾ ಸೋಂಕು ನಿಯಂತ್ರಣ ಕುರಿತ ಹಿರಿಯ ಅಧಿಕಾರಿಗಳು ಮತ್ತು ಸಚಿವರ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದರು.

ಚಿತ್ರ ‌ಮಂದಿರಗಳಿ್ಗೆ ಪ್ರವೇಶ ಬಯಸುವ ಮಂದಿ ಕಡ್ಡಾಯವಾಗಿ ಮೊದಲ ಸಲಿಕೆ ಪಡೆದಿರಬೇಕು ಎನ್ನುವ ಷರತ್ತು ವಿಧಿಸಲಾಗಿದೆ‌. ಗರ್ಭಿಣಿಯರು, ಮಕ್ಕಳಿಗೆ ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ‌

ಪಬ್ ಗೆ ಅ.3 ರಿಂದ ಅವಕಾಶ:

ರಾಜ್ಯಾದ್ಯಂತ ಅಕ್ಟೋಬರ್ 3 ರಿಂದ ಪಬ್ ಗೆ ಅವಕಾಶ ಮಾಡಿಕೊಡಲಾಗಿದೆ. ಶೇ.1 ರಷ್ಟು ಪಾಸಿಟಿವಿ‌ ಪ್ರಮಾಣ ಇರುವ ಜಿಲ್ಲೆಯ ಇದು ಅನ್ವಯ ವಾಗಲಿದೆ ಎಂದರು.

ಪಾಸಿಟಿವಿಟಿ ಪ್ರಮಾಣ ಹೆಚ್ವಿರುವ ಜಿ್ಲಲ್ಲೆಯಲ್ಲಿ ಇದೇ ಪಾಲಿಸಿ ಅನುಸರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ ‌

ವಾರದಲ್ಲಿ ಐದು ದಿನ ಶಾಲೆ:

ರಾಜ್ಯದಲ್ಲಿ ಸೋಮವಾರರಿಂದ ಶುಕ್ರವಾರದ ವರೆಗೆ ಶಾಲೆಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.

ಕೊರೊನಾ ಪಾಸಿಟಿವಿಟಿ ದರ ಕಡಿಮೆ ಇರುವ ಕಡೆ ಈ ನಿಯಮ ಅನ್ವಯ ವಾಗಲಿದೆ ಎಂದು ಹೇಳಿದರು.

ಮೈಸೂರು, ಕೊಪ್ಪಳ ಸೇರಿದಂತೆ ಲಸಿಕೆ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳಲ್ಲಿ ಲಸಿಕೆ ನೀಡಿಕೆ ಹೆಚ್ಚು ಮಾಡುವಂತೆ ಸೂಚಿಸಲಾಗಿದೆ. ಇದಕ್ಕಾಗಿ ಡಾ. ಸಿ ಎನ್ ಅಶ್ವಥ್ ನಾರಾಯಣ್ , ಡಾ.ಸುಧಾಕರ್ ಅವರಿಗೆ ಜವಬ್ದಾರಿ ವಹಿಸಗಿದೆ ಎಂದು ಹೇಳಿದರು.