ಅ 1ರಿಂದ ಹತ್ತು ದಿನ ಎಲ್ಲಾ ಜಿಲ್ಲೆಗಳಲ್ಲಿ
ಕಾಂಗ್ರೆಸ್ ಪಕ್ಷದ ಪಾದಯಾತ್ರೆ: ಉಗ್ರಪ್ಪ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.23: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಾಂಗ್ರೆಸ್ ಪಕ್ಷ ಅಗಷ್ಟ್ 1 ರಿಂದ 10 ರೊಳಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 75 ಕಿಲೋ ಮೀಟರ್ ಪಾದಯಾತ್ರೆ ಮಾಡಿ. ಸ್ವಾತಂತ್ರ್ಯದ ಆಶಯಗಳಿಗೆ ಧಕ್ಕೆ ತಂದಿರುವ ಪ್ರಕರಣಗಳನ್ನು  ಜನರಿಗೆ ತಿಳಿಸಲಿದೆಂದು ಕೆಪಿಸಿಸಿ ವಕ್ತಾರ ವಿ‌.ಎಸ್.ಉಗ್ರಪ್ಪ ಹೇಳಿದ್ದಾರೆ‌
ಅವರು ಇಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡುತ್ತಿದ್ದರು. ಸ್ವಾತಂತ್ರ್ಯ ಹೋರಾಟದ ಪ್ರಮುಖ ಸ್ಥಳಗಳಲ್ಲಿ ಜನಜಾಗೃತಿ, ಸ್ವಾತಂತ್ರ್ಯ ಚಳುವಳಿಯ ಆಶಯಗಳ ಬಗ್ಗೆ ತಿಳಿಸಲಿದೆ.
ಅಗಷ್ಟ್ 15 ರಂದು  ಬೆಂಗಳೂರಿನ‌ರೈಲ್ವೇ ನಿಲ್ದಾಣದ ಮುಂಭಾಗದ ಸಂಗೊಳ್ಳಿ ರಾಯಣ ಪ್ರತಿಮೆ ಬಳಿಯಿಂದ ನ್ಯಾಷನಲ್ ಹೈಸ್ಕೂಲ್ ಮೈದಾನಕ್ಕೆ ಕನಿಷ್ಟ ಒಂದು‌ಲಕ್ಷ ಜನರಿಂದ ರಾಷ್ಟ್ರಧ್ವಜ  ಹಿಡಿದು ಪಾದಯಾತ್ರೆ ನಡೆಸಲಿದೆ. ನಂತರ ಬಹಿರಂಗ ಕಾರ್ಯಕ್ರಮ ನಡೆಯಲಿದೆಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ತನ್ನದೇ ಆದ ಪಾತ್ರವಹಿಸಿದೆ. ನಂತರ ರಾಷ್ಟ್ರಗೀತೆ, ರಾಷ್ಟ್ರಧ್ವಜ ನೀಡಿ ವಿಶ್ವವೇ ಮೆಚ್ಚುವಂತೆ ಮಾಡಿದ್ದು ಕಾಂಗ್ರೆಸ್ ಪಕ್ಷ.
ಯಾರು ಸ್ವಾತಂತ್ರ್ಯ ಚಳುವಳಿ ಸಂದರ್ಭದಲ್ಲಿ ಬ್ರಿಟೀಷರೊಂದಿಗೆ ರಾಜೀಮಾಡಿಕೊಂಡವರು ಇಂದು ಈ ದೇಶ ಆಳುತ್ತಿದ್ದಾರೆ. ಅವರಿಗೆ ದೇಶದ ಆಶಯಗಳು ಗೊತ್ತಿಲ್ಲ. ತ್ಯಾಗ ಬಲಿದಾನದ ಬಗ್ಗೆ ಗೊತ್ತಲ್ಲ. ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ ಭಗತ್ ಸಿಂಗ್ ಅಂತಹವರನ್ನೇ ಪಠ್ಯದಿಂದ ಬಿಟ್ಟಿರು ಇವರು.
ರಾಷ್ಟ್ರ ಧ್ವಜ ಖಾದಿಯದ್ದಾಗಿರಬೇಕು. ಅಧುನಿಕ ದುರ್ಯೋಧನ ಮನೋ ಪ್ರವೃತ್ತಿಯ ಪ್ರಧಾನಿ ಮೋದಿ ಅವರು ರಾಷ್ಟ್ರ ಧ್ವಜ ಪ್ಲಾಸ್ಟೀಕ್ ನಲ್ಲಿದ್ದರೂ ಪರವಾಗಿಲ್ಲ ಎಂದಿದ್ದಾರೆಂದು ಆರೋಪಿಸಿದರು.
ರಾಷ್ಟ್ರ ಧ್ವಜಕ್ಕೆ ಅಪಚಾರ ಎಸಗುವ ಪ್ರಯತ್ನ ನಡೆದಿದೆ. ಸಂಘಪರಿವಾರದವರಿಗೆ ಸಂವಿಧಾನದ ಎಂದರೆ ಮನೋಧರ್ಮ, ರಾಷ್ಟ್ರದ್ವಜ ಎಂದರೆ ಭಗವಾಧ್ವಜ. ಆದರೆ ಈಗ ಮನೆ ಮನೆಗೆ ಹೋಗಿ ರಾಷ್ಟ್ರಧ್ವಜ ಹಂಚಲು ಹೊರಟಿರುವುದು ವಿಪರ್ಯಾಸವಾಗಿದೆಂದರು.
ಮತ್ತೆ ಮೋದಿ ವಿರುದ್ದ ವಾಗ್ದಾಳಿ ನಡೆಸಿದ ಅವರು ಭ್ರಷ್ಟಾಚಾರ ನಿಲ್ಲಲಿಲ್ಲ. ಕಪ್ಪು ಹಣ ತರಲಿಲ್ಲ.
ಉದ್ಯೋಗ ಸೃಷ್ಟಿ ಮಾಡಲಿಲ್ಲ.
ದೇಶದಲ್ಲಿ ಈ ಮೊದಲು ಪ್ರತಿ ವರ್ಷ 55 ಸಾವಿರಕ್ಕಿಂತಲೂ ಹೆಚ್ಚು ಸೈನಿಕರ ನೇಮಕ ಮಾಡಲಾಗುತ್ತಿತ್ತು. ಆದರೆ ಅದನ್ನು ಬಿಟ್ಟು 17 ವರ್ಷ ಮುಗಿಸಿದ  46 ಸಾವಿರ ಜನರನ್ನು ಅಗ್ನಿ ಫಥದಲ್ಲಿ ನೇಮಕ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಬಡ ಮಕ್ಕಳ ಭವಿಷ್ಯ ಹಾಳು ಮಾಡುತ್ತಿದ್ದಾರೆಂದರು.
ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಬಗ್ಗೆನೂ ಪ್ರಸ್ತಾಪಿಸಿ ಮೊಸರು ಮಜ್ಜಿಗೆ ಮೇಲೆ ಜಿಎಸ್ ಟಿ ವಿಧಿಸಿರುವುದನ್ನು ಖಂಡಿಸಿದರು.
ಮಾಜಿ ಸಚಿವ ರಮೇಶ್ ಕುಮಾರ್‌‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಹೇಳಿದ್ದು ಸರಿ ಇದ್ದರೆ ತನಿಖೆಯಾದರೆ ಗೊತ್ತಾಗುತ್ತೆ. ಶಾಸಕರಾದವರ ಆಸ್ತಿ ಎಷ್ಟು ಹೆಚ್ಚಾಗಿದೆ ಎಂಬ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ತನಿಖೆ ಆಗಲಿ ಎಂದರೆ.
ಬಿಜೆಪಿಯವರು ದಪ್ಪ ಚರ್ಮದವರು. ಸಿದ್ದರಾಮಯ್ಯ ವಿರುದ್ದ ನಾನೇ ನಿಲ್ತೇನೆ ಎಂದು ಸಚಿವ ಶ್ರೀರಾಮುಲು ಹೇಳ್ತಿದ್ದಾರೆ. ನಿಮ್ಮ ವಿರುದ್ದನೂ ಬಹಳ ಜನ ರೆಡಿ ಇದ್ದಾರೆ.
ಸುದ್ದಿಗೋಷ್ಟಿಯಲ್ಲಿ ಪಕ್ಷದ ಮುಖಂಡರುಗಳಾದ ಮುಂಡ್ಲೂರು ಹನಮ ಕಿಶೋರ್, ಅಸುಂಡಿ ನಾಗರಾಜಗೌಡ,  ಲೋಕೇಶ್, ಅಲುವೇಲು ಸುರೇಶ್ ಮೊ ದಲಾದವರು ಇದ್ದರು.

ಬಾಕ್ಸ್:
ಆರ್ ಎಸ್ ಎಸ್ ಏನ್ಮಾಡ್ತಿದೆ:
ಭೂ ಖರೀದಿ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಶ್ರೀರಾಮುಲು ಅವರ ಮೇಲೆ ಚಾರ್ಜ್ ಶೀಟ್ ಹಾಕಲಾಗಿದೆ. ಈ ಬಗ್ಗೆ ಆರ್.ಎಸ್.ಎಸ್. ಏನು ಮಾಡ್ತಿದ್ದಾರೆಂದರು.

Attachments area