ಅ.೬: ತಿಂಥಣಿ ಹಾಲುಮತ ಪೀಠದಲ್ಲಿ ಬ್ರಹತ್ ಸಮಾವೇಶ

ಲಿಂಗಸುಗೂರು,ಜು.೩೦-
ಹಾಲುಮತ ಸಮುದಾಯದ ಶಕ್ತಿ ಕೇಂದ್ರವಾಗಿರುವ ಕನಕ ಗುರುಪೀಠ ತಿಂಥಣಿಯ ಮಹಾಸಂಸ್ಥಾನದಲ್ಲಿ ಅ.೬ ರಂದು ರಶರಣಯ್ಯ ಹಾಲುಮತ ನೌಕರರ ಬೃಹತ್ ಸಮಾವೇಶ ಜರುಗಲಿದೆ ಎಂದು ಹಾಲುಮತ ನೌಕರರ ಸಂಘದ ತಾಲೂಕ ಅಧ್ಯಕ್ಷ ನೀಲಪ್ಪ ಹೊಸಮನಿ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಕಾಗಿನೆಲೆ ಕನಕ ಗುರು ಪೀಠ ಸಮುದಾಯದ ಬೆಳವಣಿಗೆಗೆ ಪ್ರೋತ್ಸಾಹದೊಂದಿಗೆ ಸದಾ ಶ್ರಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ಜನವರಿಯಲ್ಲಿ ಮೂರು ದಿನಗಳ ಕಾಲ ಹಾಲುಮತ ಸಂಸ್ಕೃತಿಕ ವೈಭವ ನಡೆಸುವ ಮೂಲಕ ಅಂತರ್ ರಾಜ್ಯದಲ್ಲಿಯೇ ವಿಶೇಷವಾಗಿ ಗುರುತಿಸಿಕೊಂಡಿದೆ.
ಅದರಂತೆ ಅ.೬ ರಂದು ಮಹಾಸಂಸ್ಥಾನದ ಪೀಠಾದೀಶರಾದ ಶ್ರೀ ಸಿದ್ದರಾಮನಂದ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಯಾದಗಿರಿ ಮತ್ತು ರಾಯಚೂರು ಜಿಲ್ಲಾ ಹಾಲುಮತ ನೌಕರರ ಸಂಘದ ಸಹಯೋಗದಲ್ಲಿ ಹಾಲುಮತ ನೌಕರರ ಸಮಾವೇಶ ಜರುಗಲಿದೆ.
ಈ ಸಮಾವೇಶದಲ್ಲಿ ರಾಜ್ಯ ಸರ್ಕಾರದ ಸಚಿವರಾದ ಬೈರತಿ ಸುರೇಶರವರು (ನಗರಾಭಿವೃದ್ಧಿ ಸಚಿವರು), ಶರಣಪ್ರಕಾಶ ಪಾಟೀಲ್ (ವೈದ್ಯಕೀಯ, ಶಿಕ್ಷಣ ಸಚಿವರು), ಶರಣಬಸಪ್ಪ ದರ್ಶಾನಪೂರು (ಸಣ್ಣ ಕೈಗಾರಿಕೆ, ಕೌಶಲ್ಯ ಅಭಿವೃದ್ಧಿ ಸಚಿವರು)& ಎನ್.ಎಸ್.ಬೋಸರಾಜ್ (ಸಣ್ಣ ನೀರಾವರಿ ಸಚಿವರು) ಹಾಗೂ ಸಂಸದರಾದ ರಾಜ ಅಮರೇಶ್ವರ ನಾಯಕ, ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣನವರು ಮತ್ತು ರಾಯಚೂರು, ಯಾದಗಿರಿ ಮತ್ತು ಕೊಪ್ಪಳ, ಬಾಗಲಕೋಟ ಜಿಲ್ಲೆಯ ಚುನಾಯಿತ ಶಾಸಕರು ಭಾಗವಹಿಸಲಿದ್ದಾರೆ.
ಬೆಳಗ್ಗೆ ಸರ್ಕಾರಿ ವಿವಿಧ ಇಲಾಖೆಯ ಅಧಿಕಾರಿಗಳ ಸಮಾವೇಶ ಮತ್ತು ಮಧ್ಯಾಹ್ನ ಸಚಿರು ಹಾಗೂ ಶಾಸಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು ಸಮುದಾಯದವರು ಹಾಗೂ ಸರ್ಕಾರಿ ಹಾಲುಮತ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಸ್.ಎನ್.ಮುಕ್ಕಣ್ಣವರು, ಬನ್ನೆಪ್ಪ ಪೂಜಾರಿ, ಮಂಜುನಾಥ ಪೂಜಾರಿ, ಶಂಕ್ರಗೌಡ, ಹೊನ್ನಪ್ಪ ದಫೆದಾರ, ಮಾನಪ್ಪ ಬಳಬಟ್ಟೆ, ಮಂಜುನಾಥ ಬನ್ನಿಗೋಳ್ಕರ್, ಕನಕ ಗುರುಪೀಠದ ಮಾಧ್ಯಮ ಸಂಚಾಲಕ ಶರಣಯ್ಯ ಒಡೆಯರ್ ಇದ್ದರು.