ಅ.೩೦ ಕ್ಕೆ ಉಚಿತ ನೇತ್ರ ತಪಾಸಣೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಅ.29: ಚನ್ನಗಿರಿ ತಾ. ಬೆಳಗೆರೆ ಪೋಸ್ಟ್, ಚಿಕ್ಕಕುರುಬರ ಹಳ್ಳಿಯ ಗ್ರೇಸ್ ಗಾಸ್ಪೆಲ್ ಮಿನಿಸ್ಟ್ರೀಸ್ ಚಾರಿಟೇಬಲ್ ಮತ್ತು ಎಸ್.ಎಸ್. ಕೇರ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಅ.೩೦ ರ ಬೆಳಗ್ಗೆ ೧೦ ರಿಂದ ಮಧ್ಯಾಹ್ನ ೨ ಗಂಟೆಯವರೆಗೆ  ಚಿಕ್ಕಕುರುಬರಹಳ್ಳಿ ಯೇಸು ಪ್ರಾರ್ಥನಾ ಮಂದಿರದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳುವುದು ಎಂದು ಟ್ರಸ್ಟ್ ನಾ ಕಾರ್ಯದರ್ಶಿ ಟಿ. ಕಿಶೋರ್ ಕುಮಾರ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಬಿರವನ್ನು ಅಲ್ಲಿನ ಗ್ರಾಮಪಂಚಾಯತ್ ಅಧ್ಯಕ್ಷರು ಉದ್ಘಾಟಿಸಲಿದ್ದು, ಎಸ್.ಎಸ್.ವೈದ್ಯಕೀಯ ಮಹಾವಿದ್ಯಾಲಯದ  ನುರಿತ ವೈದ್ಯರ ಹಾಗೂ ಸಿಬ್ಬಂದಿ ತಂಡವು ಶಿಬಿರ ನಡೆಸಿಕೊಡಲಿದೆ. ಶಿಬಿರದ   ಸದುಪಯೋಗವನ್ನು ಸುತ್ತ ಮುತ್ತಲ ಹಳ್ಳಿಯವರು ಸದುಪಯೋಗ ಪಡಿಸಿಕೊಳ್ಳುವಂತೆ  ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷರಾದ ವೈ. ಅಬ್ರಾಹಂ, ಉಪಾಧ್ಯಕ್ಷ ಎಂ. ರಾಮಕೃಷ್ಣ, ಖಜಾಂಚಿ ವೈ. ಪ್ರಕಾಶ್ ಹಾಗೂ ರಾಘವೇಂದ್ರ ಉಪಸ್ಥಿತರಿದ್ದರು.