ಅ.೨೯ : ನಗರದ ಶ್ರೀ ಕನಕದಾಸ ಪುತ್ಥಳಿ ಅನಾವರಣಕ್ಕೆ ನಿರ್ಧಾರ

ರಾಯಚೂರು.ಸೆ.೨೨- ನಗರದ ಶ್ರೀಕನಕದಾಸ ಪುತ್ಥಳಿ ಅನಾವರಣಕ್ಕೆ ಅಕ್ಟೋಬರ್ ೨೯ ಮುಹೂರ್ತ ನಿಗದಿ ಪಡಿಸಲಾಗಿದೆ. ಅಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರು ಈ ಕಾರ್ಯಕ್ರಮಕ್ಕೆ ಆಗಮಿಸಲು ಒಪ್ಪಿಗೆ ಸೂಚಿಸಿದ್ದಾರೆ.
ಜಿಲ್ಲಾ ಕುರುಬರ ಸಂಘ, ತಾಲೂಕು ಕುರುಬರ ಸಂಘ ಹಾಗೂ ನಗರ ಕುರುಬರ ಸಂಘದ ಪ್ರತಿನಿಧಿಗಳು ನಿನ್ನೆ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಭೈರತಿ ಬಸವರಾಜ, ಎಂಟಿಬಿ ನಾಗರಾಜ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವರಾದ ಹೆಚ್.ವಿಶ್ವನಾಥ, ವರ್ತೂರು ಪ್ರಕಾಶ ಸೇರಿದಂತೆ ಎಲ್ಲರನ್ನೂ ಭೇಟಿಯಾಗಿ ಪುತ್ಥಳಿ ಅನಾವರಣಕ್ಕೆ ಆಗಮಿಸುವಂತೆ ಮನವಿ ಮಾಡಿದರು. ಎಲ್ಲಾ ಸಮಾಜದ ಮುಖಂಡರು ಅಕ್ಟೋಬರ್ ೨೯ ರಂದು ಕನಕ ಪುತ್ಥಳಿ ಅನಾವರಣಕ್ಕೆ ಆಗಮಿಸುವ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಕುರುಬರ ಸಂಘ, ತಾಲೂಕು ಕುರಬರ ಸಂಘ ಹಾಗೂ ನಗರ ಕುರುಬರ ಸಂಘ ಮತ್ತು ಮುಖಂಡರು ಕಾರ್ಯಕ್ರಮ ಅದ್ಧೂರಿಯಾಗಿ ನಿರ್ವಹಿಸಲು ಸಿದ್ಧತೆ ನಡೆಸಿದ್ದಾರೆ.
ಕುರಬರ ಸಂಘದ ನಿಯೋಗಕ್ಕೆ ಮುಖಂಡರನ್ನು ಭೇಟಿ ಮಾಡಿಸುವಲ್ಲಿ ಶಾಸಕರಾದ ಡಾ.ಶಿವರಾಜ ಪಾಟೀಲ್, ದದ್ದಲ್ ಬಸವನಗೌಡ, ಮಾಜಿ ಸಂಸದರಾದ ಕೆ.ವಿರೂಪಾಕ್ಷಪ್ಪ ಹಾಗೂ ಕಾಂಗ್ರೆಸ್ ಯುವ ಮುಖಂಡರಾದ ರವಿ ಬೋಸರಾಜು ಅವರು ಸಾತ್ ನೀಡಿದರು.
ಈ ನಿಯೋಗದಲ್ಲಿ ಜಿಲ್ಲಾಧ್ಯಕ್ಷರಾದ ಕೆ.ಬಸವಂತಪ್ಪ, ಸೇರಿದಂತೆ ವಿವಿಧ ಮುಖಂಡರಾದ ಬಿ.ಬಸವರಾಜ, ನಾಗೇಂದ್ರಪ್ಪ, ವೇಣುಗೋಪಾಲ, ಹನುಮಂತಪ್ಪ, ನೀಲಕಂಠ ಬೇವಿನ್, ಮಾಸದೊಡ್ಡಿ ನರಸಿಂಹಲು, ಶೇಖರ್ ವಾರದ್, ಭೀರಪ್ಪ, ನರಸಿಂಹಲು ತೊರಸಿ, ನಾಗರಾಜ, ಲಕ್ಷ್ಮಣ ಗಾಣದಾಳ, ನಾಗನಗೌಡ
ಸೇರಿದಂತೆ ಅನೇಕರು ಉಪಸ್ಥಿತರಿದ್ದರು.