ರಾಯಚೂರು.ಅ.೨೭- ಎಡೆದೊರೆ ನಾಡು ರಾಯಚೂರಿನಲ್ಲಿ ಸಾಂಸ್ಕೃತಿಕ ರಾಯಭಾರಿಯಾಗಿ ಸೇವೆ ಸಲ್ಲಿಸುವ ದೃಷ್ಟಿಯಿಂದ ಕನ್ನಡ ಸಂಘ ರಚಿಸಲು ಮುಂದಾಗಿದೆ ಎಂದು ಸಾಹಿತಿ ಪಲುಗುಲ ನಾಗರಾಜರವರು ತಿಳಿಸಿದರು.
ರವಿವಾರ ಬೆಳಿಗ್ಗೆ ೧೧ ಘಂಟೆಗೆ ಕರ್ನಾಟಕ ಸಂಘದಲ್ಲಿ ಸಭೆ ಕರೆಯಲಾಗಿದ್ದು ಈ ಸಭೆಗೆ ಆಸಕ್ತರು ,ಸೇವೆ ಸಲ್ಲಿಸುವ ಮನೋಭಾವ ಇರುವ ಕನ್ನಡಿಗರು ಆಗಮಿಸಿ ಕನ್ನಡ ಸಂಘದಲ್ಲಿ ತೊಡಗಿಸಿಕೊಳ್ಳುವವರು ಆಗಮಿಸಿ ನೂತನ ಸಂಘಟನೆಯನ್ನು ಹುಟ್ಟು ಹಾಕಿ ಕಲೆ, ಸಾಹಿತ್ಯ, ಸಂಗೀತ ಜೊತೆಗೆ ದೇಸಿ ಸೊಗಡು ಪ್ರತಿಭೆಗಳಿಗೆ ಅವಕಾಶ ಕೊಡುವ ಉತ್ತಮ ವೇದಿಕೆಯನ್ನು ನಿರ್ಮಿಸೋಣ ಜೊತೆಗೆ ಕವಿಗೋಷ್ಠಿ, ಗಜಲ್ ಗೋಷ್ಠಿ, ಶರಣ ಚಿಂತನೆಗಳು, ದಾಸ ಪದಗಳು ಮತ್ತು ಜಾನಪದ ಕಲಾ ಪ್ರದರ್ಶನಗಳ ಹೂರಣವನ್ನೇ ಕನ್ನಡ ಸಂಘದಲ್ಲಿ ಸೇರಿಸೋಣ ಎಂದು ಪಲುಗುಲ ನಾಗರಾಜ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.