ಅ.೧ ಜಾಗೃತಿ ಕರ್ನಾಟಕ ಸಮಾವೇಶ – ಅನಿಲ್ ರಾಜ್

ರಾಯಚೂರು, ಸೆ.೧೬- ಜಾತ್ಯಾತೀತ ಜನತಾ ಪರಿವಾರ ವತಿಯಿಂದ ಅಕ್ಟೋಬರ್ ೧ ರಂದು ಜಾಗೃತ ಕರ್ನಾಟಕ ಸಮಾವೇಶ ಆಯೋಜಿಸಲಾಗಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಅನಿಲ್ ರಾಜ್ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಜಾತ್ಯಾತೀತ ಜನತಾದಳದ ಅಂಗವಾಗಿರುವ ಜಾತ್ಯತೀತ ಪರಿವಾರವು ಹೆಚ್.ಡಿ. ಕುಮಾರಸ್ವಾಮಿ ಅವರನ್ನು ೨೦೨೩ರ ಚುನಾವಣೆಯಲ್ಲಿ ಗೆಲ್ಲಿಸಿ ಮುಖ್ಯಮಂತ್ರಿಯಾಗಿಸುವ ಉದ್ದೇಶದಿಂದ ಕಾರ್ಯಕ್ರಮಗಳನ್ನು ರೂಪಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಅಕ್ಟೋಬರ್ ೧೫ ರಂದು ಮಹಿಳಾ ಸಬಲೀಕರಣ ಸಮಾವೇಶವನ್ನು ತುಮಕೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಹೀಗೆ ರಾಜ್ಯಾದ್ಯಂತ ವಿವಿಧೆಡೆ ಸಮಾವೇಶಗಳನ್ನು ಆಯೋಜಿಸಿ ಜೆಡಿಎಸ್ ಪಕ್ಷದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಜನರಲ್ಲಿ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಹಾಗೂ ರಾಜ್ಯಕ್ಕೆ ಅದರ ಪ್ರಯೋಜನ ಹಾಗೂ ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದಾಗ ಮಾಡಿದಂತಹ ಜನಮಾನಸದಲ್ಲಿ ಹಚ್ಚಹಸಿರಾಗಿರುವಂತಹ ನಾನಾ ಜನಪರ ಕಾರ್ಯಗಳನ್ನು ಜನರಿಗೆ ತಲುಪಿಸುವ ಮೂಲಕ ೨೦೨೩ ರಲ್ಲಿ ಜೆಡಿಎಸ್ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುವ ಘಟಕದ ಅಧ್ಯಕ್ಷ ಅಮಿತ್ ಸುಂಕಾರಿ, ಆಂಜನೇಯ ಗಾಳದಾಳ, ರಾಮು, ವೆಂಕಟಸ್ವಾಮಿ ಇದ್ದರು.