ಅ.೧೫ ಬಳ್ಳಾರಿ ವಿಭಾಗ ಶೋಭಾಯಾತ್ರೆಯ ಸಮಾರೋಪ ಸಮಾರಂಭ

ಮಾನ್ವಿ ಅ ೩೦ :- ಭಾರತಾದ್ಯಂತ ನಡೆಯುತ್ತಿರುವ ಶೋಭಾಯಾತ್ರೆಯು ಬಳ್ಳಾರಿ ವಿಭಾಗಕ್ಕೆ ಸಂಬಂಧಿಸಿದಂತೆ ಅ ೧೫ ರಂದು ಮಾನ್ವಿ ತಾಲೂಕಿನಲ್ಲಿ ಶೌರ್ಯ ಜಾಗರಣ ರಥಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದ್ದು ನಮ್ಮ ಜಿಲ್ಲಾ ಸೇರಿದಂತೆ ಬಳ್ಳಾರಿ ವಿಭಾಗದ ಹಿಂದೂಗಳ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿಶ್ವಹಿಂದೂ ಪರಿಷತ್ ಬಜರಂಗದಳದ ತಾಲೂಕ ಅಧ್ಯಕ್ಷ ವಿಜಯಕುಮಾರ ಇಬ್ರಾಂಪುರ ಹೇಳಿದರು.
ಪಟ್ಟಣದ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು ನಮ್ಮ ಭಾಗದ ಶೋಭಾಯಾತ್ರೆಯೂ ಸೆ ೩೦ ಅಂಜನಾದ್ರಿ ಬೆಟ್ಟದಿಂದ ಆರಂಭವಾಗಿ ಅ ೧೫ ರಂದು ಮಾನ್ವಿಯಲ್ಲಿ ಅಂತಿಮ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಅಂದು ಮದ್ಹ್ಯಾನ ಧ್ಯಾನಮಂದಿರದಿಂದ ಆರಂಭವಾಗಿ ಮೆರವಣಿಗೆ ಮೂಲಕ ಟಿ ಎ ಪಿ ಎಂ ಎಸ್ ಆವರಣದಲ್ಲಿ ಸಂಜೆ ನಾಲ್ಕು ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಇದರಲ್ಲಿ ಹಿಂದೂ ಪರಿಷತ್ತಿನ ರಾಷ್ಟ್ರೀಯ ಸಹ ಕಾರ್ಯದರ್ಶಿ ಹಾಗೂ ರಾಮಮಂದಿರ ನಿರ್ಮಾಣದ ಉಸ್ತುವಾರಿಗಳಾದ ಗೋಪಾಲ ನಾಗರಕಟ್ಟೆ ಇವರು ಹಿಂದುತ್ವದ ಕುರಿತು ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದ ಇವರು ವಿಷಯಕ್ಕೆ ಸಂಬಂಧಿಸಿದಂತೆ ಕರಪತ್ರವನ್ನು ಬಿಡುಗಡೆ ಮಾಡಿದರು ಆದರಿಂದ ತಾಲೂಕಿನ ಎಲ್ಲಾ ಹಿಂದೂ ಬಾಂಧವರು ಆಗಮಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಖಜಾಂಚಿ ಅರುಕುಮಾರ ಚಂದಾ, ರವಿಕುಮಾರ, ರತನ್ ದಾನಿ, ನಾಗರಾಜ ಶೆಟ್ಟಿ, ಬಸನಗೌಡ ಆಲ್ದಾಳ್, ಆನಂದಸ್ವಾಮಿ ನಕ್ಕುಂದಿ, ಹನುಮೇಶ ಕರಡಿಗುಡ್ಡ ಸೇರಿದಂತೆ ಇತರರು ಇದ್ದರು.