ಅ, ೧೪ ಎಲ್ಲಾ ಸೇರೋಣ ಬನ್ನಿ ಮಾತನಾಡೋಣ

ರಾಯಚೂರು,ಅ.೧೨- ಆಮ್ ಆದ್ಮಿ ಪಕ್ಷ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ನೇತೃತ್ವದಲ್ಲಿ ಅಕ್ಟೋಬರ್ ೧೪ ರಂದು ನಗರದಲ್ಲಿ ಕಾರ್ಯಕರ್ತರ ಸಭೆ ಹಾಗೂ ಎಲ್ಲ ಸೇರೋಣ ಬನ್ನಿ ಮಾತನಾಡೋಣ ಶೀರ್ಷಿಕೆಯಡಿ ಮುಕ್ತ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಉತ್ತರ ಕರ್ನಾಟಕ ವಿಭಾಗದ ಉಸ್ತುವಾರಿ ಅರ್ಜುನ್ ಹಲಿಗೆಗೌಡರು ಹಾಗೂ ರಾಜ್ಯ ಉಪಾಧ್ಯಕ್ಷ ರುದ್ರಯ್ಯ ನವಲಿ ಹಿರೇಮಠ, ರಾಜ್ಯ ಮಹಿಳೆ ಅಧ್ಯಕ್ಷೆ ಕುಶಾಲಸ್ವಾಮಿ, ಆಮ್ ಆದ್ಮಿ ಪಕ್ಷ ಮುಖಂಡ ಕೆ. ಬಸವರಾಜ, ರಾಜ್ಯ ಜಂಟಿ ಕಾರ್ಯದರ್ಶಿ ರಾಜ ಶ್ಯಾಂ ಸುಂದರ ನಾಯಕ್ ಇವರು ಸಾರ್ವಜನಿಕರೊಂದಿಗೆ ಮುಕ್ತ ಸಂವಾದ ನಡೆಸಲಿದ್ದಾರೆ ಎಂದು ಎಎಪಿ ಜಿಲ್ಲಾಧ್ಯಕ್ಷ ಡಿ.ವೀರೇಶ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,
ಕಾರ್ಯಕ್ರಮ ಅಂಬೇಡ್ಕರ್ ವೃತ್ತದಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ಮಧ್ಯಾಹ್ನ ೧ ಗಂಟೆಗೆ ಆರಂಭವಾಗಲಿದ್ದು, ಪಕ್ಷದ ಕಾರ್ಯಕರ್ತರು ಪದಾಧಿಕಾರಿಗಳ ಪ್ರಮಾಣ ವಚನ ಸ್ವೀಕಾರ ನಂತರ ಸಂವಾದ ಕಾರ್ಯಕ್ರಮ ಆರಂಭಗೊಳ್ಳಲಿದೆ. ೪.೩೦ಕ್ಕೆ ದೇವಸೂಗರು ಗ್ರಾಮ ನಡೆಯಲಿದ್ದು, ಭ್ರಷ್ಟಾಚಾರ ರಹಿತ ಆಡಳಿತ ಮತ್ತು ರಾಜಕೀಯ ಬಯಸಿ, ಉತ್ತಮ ಸಮಾಜ ನಿರ್ಮಿಸಿ, ಶ್ರಮಿಸಲು ಕಾರ್ಯಕರ್ತರು ಸಭೆ ನಡೆಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಜಿಲ್ಲೆ, ತಾಲ್ಲೂಕು ಮತ್ತು ಹೋಬಳಿ ಹಾಗೂ ಗ್ರಾಮಮಟ್ಟದ ಪದಾಧಿಕಾರಿಗಳು ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಸೈಯದ್ ನುಸ್ರತ್ ಅಲಿ, ನಗರಾಧ್ಯಕ್ಷ ವಿಷ್ಣುಯಾದವ್, ನಗರ ಕಾರ್ಯದರ್ಶಿ, ಮಕ್ಬುಲ್ ಪಾಷ, ಸೈಯದ್, ಶೆಕ್ಷಾವಲಿ ಇದ್ದರು.