ಅ ವರ್ಗಕ್ಕೆ 4 ತಾಪಂ ಸ್ಥಾನ ನೀಡಲು ಮನವಿ

ಚಿಂಚೋಳಿ ಮೇ 3:ಚುನಾವಣಾ ಆಯೋಗವು ಚಿಂಚೋಳಿ ತಾಲೂಕಿನ ತಾಪಂ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಿದ್ದು, ಒಂದೇ ಒಂದು ಸ್ಥಾನ ಹಿಂದುಳಿದ “ಅ ” ವರ್ಗಕ್ಕೆ ನೀಡದಿರುವದು ಹಿಂದುಳಿದ ಕೋಲಿ ಸಮಾಜಕ್ಕೆ ಮಾಡಿದ ಅನ್ಯಾಯವಾಗಿದೆ.ಆದ್ದರಿಂದ ಅ ವರ್ಗಕ್ಕೆ ಕನಿಷ್ಠ 4 ತಾಪಂ ಸ್ಥಾನ ನೀಡಲು ಚಿಂಚೋಳಿ ಕೋಲಿ ಸಮಾಜ ತಾಲೂಕು ಅಧ್ಯಕ್ಷ ಗಿರಿರಾಜ ನಾಟೀಕಾರ ಮತ್ತು ಹಿರಿಯ ಮುಖಂಡರಾದ ಕಾಶೀನಾಥ ನಾಟೀಕಾರ ಮತ್ತು ಮುಖಂಡರಾದ ಮಲ್ಲಿಕಾರ್ಜುನ ಕೊಟಪಳ್ಳಿ,ರಾಮಲಿಂಗ ನಾಟೀಕಾರ,ಭೀಮರಾವ ಬಡಿಗೇರ,ಜಗನ್ನಾಥ ನಾಟೀಕಾರ,ಭೀಮರಾವ ವಜ್ಜರಗಾಂವ,ಅಣ್ಣಾರಾವ ನಾವದಗಿ ಸುರೇಶ ಭಂಟಾ ಮನವಿ ಮಾಡಿದ್ದಾರೆ.
ಆಯೋಗವು ಅಧಿಸೂಚನೆಯನ್ನು ಹಿಂಪಡೆದು ಹಿಂದುಳಿದ ಅ ವರ್ಗಕ್ಕೆ ಸೂಕ್ತ ಮೀಸಲಾತಿ ಕಲ್ಪಿಸದಿದ್ದರೆ, ಬೀದಿಗಿಳಿದು ಹೋರಾಟ ನಡೆಸಿ, ಕೋಲಿ ಸಮಾಜದಿಂದ ಚುನಾವಣೆ ಬಹಿಷ್ಕರಿಸಲಾಗುವದು ಎಂದು ತಿಳಿಸಿದ್ದಾರೆ.