ಅಹ್ಮದಿಯಾ ಮುಸ್ಲೀಮರಿಂದ ಪವಿತ್ರ ಕುರ್‍ಆನ್ ಜ್ಞಾನಿ “ಮುಸ್ಲೇಮೌದ್” ದಿನಾಚರಣೆ

ಕಲಬುರಗಿ,ಫೆ.ಡ21- ಈ ಭೂಮಿಯ ಮೇಲೆ 1.24 ಲಕ್ಷ ಜನ ದೈವಿ ಮಹಾಪುರುಷರು, ಧರ್ಮ ಸುದಾರಕ ಸಂತ ಋಷಿ ಮುನಿಯರು ಅವತರಿಸಿದ್ದಾರೆ ಯಾವೆಲ್ಲ ಧರ್ಮ, ಸಮುದಾಯ ಮತ್ತು ಜಾತಿಜನಾಂಗಳಲ್ಲಿ ಅವತರಿಸಿದ ಸತ್ಯಪುರುಷರ ಸತ್ಯತೆಯನ್ನು ಸ್ವಯಂ ಅಲ್ಲಾಹನು ನೆಲೆನಿಲ್ಲಿಸಿದ್ದಾನೆ ಎಂದು ಅಹ್ಮದಿಯಾ ನೂರ ಉಲ್ ಇಸ್ಲಾಂ ವಿಭಾಗದ ಉಪಾಧ್ಯಕ್ಷ ನೆಮತುಲ್ಲಾ ನವಾಜ್ ಹೇಳಿದರು.
ತಾರಫೈಲ್ ರಹಮತ ನಗರದ ಅಹ್ಮದಿಯಾ ದಾರ್ ಉಲ್ ಝಿಕ್ಕರ್ ಮಿಷನ್ ಹೌಸ್ ನಲ್ಲಿ ಫೆ.20ರಂದು ಆಯೋಜಿಸಿದ್ದ ಮುಸ್ಲೇ ಮೌದ್ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪವಿತ್ರ ಕುರ್‍ಆನ್ ಶಿಕ್ಷಣ ಮತ್ತು ಅದರ ಸಂಪೂರ್ಣ ಜ್ಞಾನವನ್ನು ಸ್ವಯಂ ಅಲ್ಲಾಹನು ಮುಸ್ಲೇ ಮೌದ್ ಅವರಿಗೆ ನೀಡುವ ಮೂಲಕ ನೈಜ ಇಸ್ಲಾಮಿನ ಮಾರ್ಗದರ್ಶನ ನಮ್ಮೆಲ್ಲರಿಗೂ ಸಿಗುವಂತೆ ಮಾಡಿದ್ದಾನೆ ಎಂದರು.
ದೈವಿಕ ಗ್ರಂಥವಾದ ಪವಿತ್ರ ಕುರ್‍ಆನ್ ನಲ್ಲಿರುವ 700 ಆದೇಶಗಳನ್ನು ಚಾಚುತಪ್ಪದೇ ನಾವೆಲ್ಲರೂ ಮೈಗುಡಿಸಿಕೊಂಡಲ್ಲಿ ದೇವನ ಸಾಮಿಪ್ಯ ಪಡೆಯುವ ದಾರಿ ತೆರೆದುಕೊಳ್ಳುತ್ತದೆ. ಪ್ರವಾದಿಯ ಕೃಷಿ ಭೂಮಿಯಲ್ಲಿ ಬಿತ್ತನೆಯ ಬೆಳಗಳಿಗೆ ರಸಗೊಬ್ಬರವಾಗುವ ಮನದಾಸೆಯನ್ನು ಹೊಂದಿದ ಮುಸ್ಲೇ ಮೌದ್ ಅವರು, ಅಲ್ಲಾಹನು ಈ ಯುಗದ ಕಲ್ಕಿ ಅವತಾರ ಮಸಿಹ ಮಾವೂದ ಅವರಿಗೆ ನೀಡಿರುವ ಭವಿಷ್ಯವಾಣಿಯ ಪ್ರಕಾರ ಮುಸ್ಲೇಮೌದ್‍ರು ಜನ್ಮತಾಳಿದರು, ತಮ್ಮ ಭಾಲ್ಯ ಮತ್ತು 52 ವರ್ಷಗಳ ಖಿಲಾಫತ್ ಸೇವೆಯಲ್ಲಿ ವಿಶ್ವದ ಎಲ್ಲಕಡೆ ಅಹ್ಮದಿಯಾ ಮಿಷನರಿಗಳನ್ನು ಸ್ಥಾಪಿಸಿ ನೈಜ ಇಸ್ಲಾಮ ಧರ್ಮ ಮತ್ತು ಪವಿತ್ರ ಕುರ್‍ಆನ್ ಶಿಕ್ಷಣವನ್ನು ಪ್ರಚಾರ ಪಡಿಸಿದರು.
ದೈವಿಕ ಸಂದೇಶ ಪ್ರಚಾರಕ ಸೈಯದ ಫಹಿಮ ಅದಹ್ಮ ಅವರು ಮಾತನಾಡಿ, ಶಾಲೆಗೆ ಗೈರು ಹಾಜರಿ ಇರುವ ಮತ್ತು ಕಣ್ಣಿನ ತೊಂದರೆ ಹೊಂದಿರುವ ಮಗು ಮುಸ್ಲೇ ಮೌದ್ ಅವರಿಗೆ, ಪವಿತ್ರ ಕುರ್‍ಆನ್ ಕಲಿಸುವ ಗುರುಗಳಾದ ಹಜರತ ಹಾಫಿಜ ಹಕೀಮ ನೂರುದ್ದೀನ ಸಾಹೇಬರು, ತಮ್ಮ ಖುರ್ಚಿಯಲ್ಲಿ ಅವರನ್ನು ಕೂಡಿಸಿ ತಾವು ಕೆಳಗಡೆ ಕುಳಿತುಕೊಳ್ಳುತ್ತಿದ್ದರು. ಈ ಮಗುವಿನ ತಲೆಯ ದಿಂಬಿನ ಪಕ್ಕದಲ್ಲಿ ಕುಳಿತುಕೊಂಡು ಅಲ್ಲಾಹನ ವಾಹಕ ಜಿಬರಿಯಿಲ್ ಅವರು, ಕುರ್‍ಆನ್ ಭೂದಿಸುತ್ತಿದ್ದರು. ಈ ಹಿನ್ನಲೆಯಲ್ಲಿ ಪವಿತ್ರ ಕುರ್‍ಆನ್ ಭಾಷಾಂತರ ಮಾಡುವ ಮೂಲಕ ನೂರಾರು ಸಂಪುಟಗಳಲ್ಲಿ ಅದರ ಅರ್ಥ ಸಾರವನ್ನು ಬರೆದು ವಿಶ್ವಕ್ಕೆ ಅವರು ನೀಡಿದ್ದಾರೆ. ಹಲವು ಪಂಗಡಗಳಾಗಿರುವ ಮುಸ್ಲೀಮ ಸಮುದಾಯಕ್ಕೆ ಮುಸ್ಲೇಮೌದ್ ಅವರು ರಚಿಸಿದ ಕುರ್‍ಆನ್ ಗ್ರಂಥದ ಭಾಷಾಂತರ ಅದ್ಯಾಯನ ಮಾಡಿದ್ದಲ್ಲಿ ನೈಜ ಇಸ್ಲಾಮೀನ ದರ್ಶನ ಆಗುವುದಲ್ಲದೇ ಸ್ವಯಂ ಅಲ್ಲಾಹನ ಸಾಮಿಪ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಅಹ್ಮದಿಯಾ ಮಿಷನರಿ ಮೌಲ್ವಿ ರಿಯಾಜ್ ಅಹ್ಮದ ಅವರು, ಮಾತನಾಡಿ, ಪವಿತ್ರ ಕುರ್‍ಆನ್ ದೈವಿಕ ಗ್ರಂಥಾಗಿದ್ದು, ಈ ಗ್ರಂಥದ ಕುರಿತು ಅನುಮಾನ, ಗೊಂದಲಗಳಿವೆ ಎಂದು ಯಾವುದೇ ಕ್ಷೇತ್ರದ ಮತಪಂಡಿತರು, ಜ್ವಾನಿಗಳು ವಿಚಾರವಾದಿಗಳು ಮುಂದೆ ಬಂದಲ್ಲಿ ಅವರ ಪ್ರಶ್ನೆಗಳ ಪರಿಹಾರ ಮತ್ತು ಸಮದಾನವನ್ನು ನೀಡುವ ಶಕ್ತಿ ತಮಗಿಗೆ ಎಂದು ಮುಸ್ಲೇ ಮೌದ್ ಅವರು ಘೋಷಿಸಿದ್ದಾರೆ. ಸುಳ್ಳು ಎಂದು ಸಾಬಿತು ಪಡಿಸುವವರಿಗೆ ಅಂದಿನ ಕಾಲದಲ್ಲಿ 10 ಸಾವಿರ ರೂ.ಗಳ ಬಹುಮಾನವನ್ನು ಸಹ ಇವರು ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಹ್ಮದಿಯಾ ಮುಸ್ಲೀಮ ಸಮಾಜದ ಅಧ್ಯಕ್ಷ ಮತ್ತು ಹಿರಿಯ ನ್ಯಾಯವಾದಿ ಲಿಯಾಖತ್ ಫರೀದ ಉಸ್ತಾದ ವಹಿಸಿದ್ದರು. ಮೌಲ್ವಿ ಜುನೈದ್ ಅಹ್ಮದ, ಮೊಹ್ಮದ ಅಬ್ದುಲ್ಲ ಉಸ್ತಾದ, ಪ್ರೊ.ಅಬ್ದುಲ ರಬ್ ಉಸ್ತಾದ, ಡಾ.ರಶಿದ ಉಸ್ತಾದ, ಮೊಹ್ಮದ ವಸೀಮ ಅಹ್ಮದ ನೂರ, ತಾರಿಖ ಅಹ್ಮದ ಮುಸ್ತಕೀಮ್, ಯಾಸರ್ ನಜೀರ ಖುರೇಷಿ, ಅಬ್ದುಲ ಶೆಜ್ಜಿ ಸೇರಿದಂತೆ ಹಲವರಿದ್ದರು. ಪವಿತ್ರ ಕುರ್‍ಆನ್ ಪಠಣದೊಂದಿಗೆ ಪ್ರಾರಂಭವಾದ ಈ ಸಮಾವೇಶ ಕೊನೆಗೆ ಸಾಮನೊಹಿಕ ಮೌನ ಪ್ರಾರ್ಥನೆಯೊಂದಿಗೆ ಮಂಗಲ ಗೊಂಡಿತು.