ಅಹಿತಕರ ಘಟನೆ ಹಂಚಿಕೊಂಡ ನಟಿ ಪ್ರೀತಿ

ಮುಂಬೈ, ಏ. ೯- ಒಂದೇ ವಾರದಲ್ಲಿ ತಮ್ಮೊಟ್ಟಿಗೆ ನಡೆದ ಎರಡು ಆಘಾತಕಾರಿ ಘಟನೆಗಳ ಬಗ್ಗೆ ಬಾಲಿವುಡ್‌ನಟಿ ಪ್ರೀತಿ ಜಿಂಟಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ .
ಪ್ರೀತಿ ಜಿಂಟಾ ಇತ್ತೀಚೆಗೆ ಪಾರ್ಕ್ ಒಂದರಕ್ಕೆ ತಮ್ಮ ದೊಡ್ಡ ಮಗಳು ಗಿಯಾ ಅನ್ನು ಕರೆದೊಯ್ದಿದ್ದರಂತೆ. ಅಲ್ಲಿ ಮಹಿಳೆಯೊಬ್ಬರು ಗಿಯಾ ಜೊತೆ ಫೋಟೊ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಆದರೆ ಪ್ರೀತಿ ಅದಕ್ಕೆ ಒಪ್ಪಿಗೆ ನೀಡಿಲ್ಲ. ಬಳಿಕ ಸುಮ್ಮನಾದ ಆ ಮಹಿಳೆ ಸ್ವಲ್ಪ ಹೊತ್ತಿನ ಬಳಿಕ ಬಲವಂತವಾಗಿ ಗಿಯಾಳ ತುಟಿಯ ಬಳಿ ಮುತ್ತಿಟ್ಟು ಓಡಿ ಹೋದಳಂತೆ. ಇದು ಪ್ರೀತಿಗೆ ಆಘಾತ ತಂದಿದೆ. ಮಗಳಿಗೆ ಮುತ್ತಿಟ್ಟು ಓಡಿಹೋದ ಮಹಿಳೆ ಐಶಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಾರೆ ಎಂದಿರುವ ಪ್ರೀತಿ, ‘ನಾನು ಸೆಲೆಬ್ರಿಟಿ ಆಗದೇ ಇದ್ದಿದ್ದರೆ ಅಲ್ಲಿ ಬೇರೆಯದೇ ಘಟನೆ ನಡೆಯುತ್ತಿತ್ತು, ಆದರೆ ಅಲ್ಲಿ ಸೀನ್ ಕ್ರಿಯೇಟ್ ಮಾಡಲು ನನಗೆ ಇಷ್ಟವಿರಲಿಲ್ಲ’ ಎಂದು ಬರೆದುಕೊಂಡಿದ್ದಾರೆ.
ಇನ್ನೊಂದು ಘಟನೆ ನಡೆದಿರುವುದು ಮುಂಬೈನಲ್ಲಿಯೇ. ವಿಮಾನ ನಿಲ್ದಾಣಕ್ಕೆ ಹೋಗಲು ಸಜ್ಜಾಗಿದ್ದ ಪ್ರೀತಿ ಕಾರು ಹತ್ತಲು ಬಂದಾಗ ಅಂಗವಿಕಲ ವ್ಯಕ್ತಿಯೊಬ್ಬ ಬಂದು ಅವರನ್ನು ಹಣ ಕೇಳಿದ್ದಾನೆ. ಈ ಹಿಂದೆ ಹಲವು ಬಾರಿ ಆ ವ್ಯಕ್ತಿ ನನ್ನನ್ನು ಹಣ ಕೇಳಿದ್ದ ಸಾಕಷ್ಟು ಬಾರಿ ನಾನು ಅವನಿಗೆ ಹಣ ಕೊಟ್ಟಿದ್ದೇನೆ. ಆದರೆ ಈ ಬಾರಿ ಆತ ಹಣ ಕೇಳಿದಾಗ ‘ನನ್ನ ಬಳಿ ನಗದು ಇಲ್ಲ ಕಾರ್ಡ್ ಮಾತ್ರವೇ ಇದೆ’ ಎಂದು ಹೇಳಿ ಹೊರಟುಬಿಟ್ಟೆ. ಆದರೆ ಆ ಅಂಗವಿಕಲ ವ್ಯಕ್ತಿ ನನ್ನ ಕಾರನ್ನು ಹಿಂಬಾಲಿಸುತ್ತಾ ಬಂದ, ನಾನು ಅವನಿಗೆ ಹಣ ಕೊಡದೇ ಇದ್ದುದ್ದಕ್ಕೆ ಬೈಯ್ಯಲು ಆರಂಭಿಸಿದ. ಬಳಿಕ ಕಾರಿನಲ್ಲಿ ನನ್ನ ಜೊತೆಗಿದ್ದ ಮಹಿಳೆ ಅವನಿಗೆ ತಮ್ಮ ಪರ್ಸ್ನಲ್ಲಿದ್ದ ಸ್ವಲ್ಪ ಹಣ ಕೊಟ್ಟರು, ಆದರೆ ಆ ಹಣವನ್ನು ಅವನು ಎಸೆದುಬಿಟ್ಟ, ಇಷ್ಟು ಹಣ ಸಾಕಾಗುವುದಿಲ್ಲ, ಇನ್ನಷ್ಟು ಹಣ ಕೊಡುವಂತೆ ಪೀಡಿಸಲು ಆರಂಭಿಸಿದ, ಬೈಯ್ಯಲು ಆರಂಭಿಸಿದ. ಆದರೆ ಇದನ್ನೆಲ್ಲ ನೋಡುತ್ತಿದ್ದ ಪಾಪರಾಟ್ಜಿಗಳು ನಗುತ್ತಲಿದ್ದರು, ಯಾರೂ ಸಹ ಸಹಾಯಕ್ಕೆ ಬರಲಿಲ್ಲ, ಆ ಅಂಗವಿಕಲ ವ್ಯಕ್ತಿಗೆ ಬುದ್ಧಿವಾದವನ್ನೂ ಹೇಳಲಿಲ್ಲ” ಎಂದು ಬರೆದುಕೊಂಡಿದ್ದಾರೆ.
ಪ್ರಿಯಾಂಕಾ ಚೋಪ್ರಾ, ಹೃತಿಕ್ ರೋಷನ್, ಅರ್ಜುನ್ ರಾಂಪಾಲ್ ಮತ್ತು ಮಲೈಕಾ ಅರೋರಾ ಸೇರಿದಂತೆ ಹಲವರು ಪ್ರೀತಿ ಜಿಂಟಾ ಅವರ ಇತ್ತೀಚಿನ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ.
ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಹೃತಿಕ್ ರೋಷನ್, “(ಕೆಂಪು ಹೃದಯದ ಎಮೋಜಿ) ಚೆನ್ನಾಗಿದೆ ಪ್ರೀ” ಎಂದು ಕಾಮೆಂಟ್ ಮಾಡಿದ್ದಾರೆ. ಅರ್ಜುನ್ ರಾಂಪಾಲ್, “ಮುಂದಿನ ಬಾರಿ ನನಗೆ ಕರೆ ನೀಡಿದರೆ ಅವುಗಳನ್ನು ಪರಿಹರಿಸುತ್ತದೆ (ಕೆಂಪು ಹೃದಯದ ಎಮೋಜಿ)” ಎಂದು ಹೇಳಿದ್ದಾರೆ. ಮಲೈಕಾ ಅರೋರಾ ನೀವು ಅದನ್ನು ಜೋರಾಗಿ ಮತ್ತು ಸ್ಪಷ್ಟವಾಗಿ ಹೇಳಿದ್ದೀರಿ ಬರೆದಿದ್ದಾರೆ, ಪ್ರಿಯಾಂಕಾ ಚೋಪ್ರಾ ಅವರು ಸಂಭ್ರಮಾಚರಣೆಯಲ್ಲಿ ಎರಡೂ ಕೈಗಳನ್ನು ಮೇಲಕ್ಕೆತ್ತಿ, ತೆರೆದ ಬಾಯಿಯೊಂದಿಗೆ ಮುಖ ಮತ್ತು ಚಪ್ಪಾಳೆ ತಟ್ಟುವ ಎಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ.