ಅಹಿತಕರ ಘಟನೆಗಳು ನಡೆಯದಂತೆ ಹೋಳಿ ಆಚರಿಸಿ

ಗದಗ24 : ಪರಸ್ಪರ ಬಾಂಧವ್ಯ ಬೆಸೆಯುವ ಹೋಳಿ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹೋಳಿ ಹಬ್ಬ ಆಚರಿಸಿ ಎಂದು ಗಜೇಂದ್ರಗಡ ಪಿಎಸ್‍ಐ ಗುರುಶಾಂತ ದಾಶ್ಯಾಳ ಹೇಳಿದರು.

ಗದಗ ಜಿಲ್ಲೆಯ ಗಜೇಂದ್ರಗಡ ನಗರದ ಪೆÇಲೀಸ್ ಠಾಣೆಯಲ್ಲಿ ಸೋಮವಾರ ಹೋಳಿ ಹಬ್ಬದ ಪ್ರಯುಕ್ತ ವಿವಿಧ ಸಮುದಾಯಗಳ ಮುಖಂಡರ ಸಮ್ಮುಖದಲ್ಲಿ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ಮಹಿಳೆಯರಿಗೆ, ಮಕ್ಕಳಿಗೆ ಒತ್ತಾಯ ಮಾಡಿ ಬಣ್ಣ ಎರಚಬೇಡಿ. ರಾಸಾಯನಿಕ ಬಣ್ಣಗಳ ಬಳಕೆ ಬೇಡ. ಹೋಳಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ. ಯಾವುದೇ ತೊಂದರೆಗಳು ಕಂಡು ಬಂದರೆ ಕೂಡಲೇ ಪೆÇಲೀಸ್ ಠಾಣೆಯ ಗಮನಕ್ಕೆ ತನ್ನಿ. ಹಬ್ಬದಲ್ಲಿ ಕಾನೂನು ಬಾಹಿರವಾಗಿ ನಡೆದುಕೊಂಡಲ್ಲಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಎ.ಡಿ.ಕೋಲಕಾರ, ಉಮೇಶ ರಾಠೋಡ, ಕೆ.ಆರ್.ಡೊಳ್ಳಿನ, ಆರ್.ವಿ.ಚಿನ್ನೂರ, ಶಿವಪ್ಪ ಮಾಳೋತ್ತರ, ಎಸ್.ಎಸ್.ಸಂಕನೂರ, ರಂಗನಾಥ ಚಿನ್ನೂರ, ಆರ್.ಎಸ್.ಪೆÇಲೀಸಪಾಟೀಲ, ಮಂಜುನಾಥ ಕಡಬಲಕಟ್ಟಿ, ಎಂ.ಎಸ್.ಮೇಟಿ, ಎಫ್.ಎಫ್.ತೋಟದ ಹಾಗೂ ಪೆÇಲೀಸ್ ಸಿಬ್ಬಂದಿಗಳು ಇದ್ದರು.