ಅಹಿಂಸೋ ಪರಮಧರ್ಮ ಎನ್ನುವ ಸಂದೇಶವನ್ನು ಸಾರಿದವರು ಮಹಾವೀರರು


ಸಂಜೆವಾಣಿ ವಾರ್ತೆ
ಸಂಡೂರು:ಏ: 5:  ಮನುಷ್ಯ ತನ್ನ ಜೀವನದಲ್ಲಿ ಬದುಕನ್ನು ಯಾವ ರೀತಿಯಲ್ಲಾದರೂ ಸಾಗಿಸಬಹುದು, ಜೀವಿತಾವಧಿಯಲ್ಲಿ ಬದುಕಲು ಜೀವಿಸಲು ಪ್ರತಿಯೋರ್ವರಿಗೆ ಹಕ್ಕಿದೆ, ಹಿಂಸೆಯ ಮಾರ್ಗವನ್ನು ಮನುಜ ಜೀವಿ ಅನುಸರಿಸಿದರೆ ಯಾವ ಪ್ರಯೋಜನವಿಲ್ಲ, ಧರ್ಮ ಧರ್ಮಗಳಲ್ಲಿ ಸಂಘರ್ಷಗಳು ಬೇಡ ಅವರ ರವರ ಧರ್ಮಗಳು ಅವರಿಗೆ ಶ್ರೇಷ್ಠ ಮಾನವ ಜನುಮ ಶ್ರೇಷ್ಠ ಜನುಮ 84 ಜೀವ ಕೋಟಿ ರಾಶಿಗಳಲ್ಲಿ ಮಾನವ ಜನುಮ ಶ್ರೇಷ್ಠವಾಗಿದ್ದು ಮಾನವ ಜನುಮದಲ್ಲಿ ಹುಟ್ಟಿಬಂದ ನಾವುಗಳು ವಾಮ ಮಾರ್ಗದಿಂದ ಬದುಕದೇ ಅಹಿಂಸೋ ಪರಮರ್ದರ್ಮ ಎನ್ನುವ 24ನೇ ತೀರ್ಥಂಕರ ಮಹಾವೀರರ ಸಂದೇಶದಂತೆ ನಾವು ಜೀವಿಸಬಹುದಾಗಿದೆ. ಪ್ರತಿಯೊಂದು ಧರ್ಮದಲ್ಲಿ ದಯೇ, ಪ್ರೀತಿ, ಅನುಕಂಪ, ಪರೋಪಕಾರ ಗುಣಗಳಿದ್ದಂತೆ ಜೈನ ಧರ್ಮದ ಮಹಾವೀರರು ಇಂತಹ ಸಂದೇಶಗಳನ್ನು ಸಾರುವುದರ ಜೊತೆಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸಮಾಜವನ್ನು ಸನ್ಮಾರ್ಗದಲ್ಲಿ ತೆಗೆದುಕೊಂಡು ಹೋದವರಲ್ಲಿ ಮಹಾವೀರರು ಒಬ್ಬರೂ ಜೈನ ಸಮಾಜದ ಅಧ್ಯಕ್ಷ ಹಿರಿಯ ಮುಖಂಡ ಮಾಂಗೀಲಾಲ್ ಶೇಠರವರು ತಮ್ಮ ಮನದಾಳದ ಮಾತುಗಳನ್ನಾಡಿದರು.
ಅವರು ಪಟ್ಟಣದ ಎಲ್.ಬಿ. ಕಾಲೋನಿಯ 11ನೇ ವಾರ್ಡಿನ ಜೈನ ಮಂದಿರದಲ್ಲಿ ಮಹಾವೀರರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಜೊತೆಗೆ ಮೆರವಣಿಗೆಗೆ ಚಾಲನೆ ನೀಡುವುದರ ಪೂರ್ವದಲ್ಲಿ ಮಹಾವೀರರ ಸಾಧನೆ ಮತ್ತು ಜೀವನ ಕುರಿತು ಮಾತನಾಡಿದರು. ಅವರು ಮುಂದುವರೆದು ಪ್ರತಿಯೊಬ್ಬರೂ ಕಾಯಕಜೀವಿಗಳಾಗಿ ಸೇವಾ ಮನೋಭಾವನೆ ಬೆಳೆಸಿಕೊಂಡು ಸಮಾಜದ ಉನ್ನತಿಗಾಗಿ ಶ್ರೀಮಿಸಬೇಕಾದುದು ಅತಿ ಅಗತ್ಯವಿದೆ, ಧರ್ಮಕ್ಕೆ ಚ್ಯುತಿಬಾರದ ಹಾಗೇ ಧರ್ಮವನ್ನು ರಕ್ಷಣೆ ಮಾಡುವುದರ ಜೊತೆಗೆ ಸಮಾಜದಲ್ಲಿ ಸೇವಾ ಮನೋಭಾವನೆ ಬೆಳೆಸಿಕೊಂಡು ಉನ್ನತ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಸಮಾಜಬಾಂಧವರಿಗೆ ಮನವಿ ಮಾಡಿದರು.
ಮೆರವಣಿಗೆ ಕಾರ್ಯಕ್ರಮದ ರಿಕಬ್ ಚಂದ್ರ ಶೇಠ್, ಹರಿಹಂತ ಟೆಕ್ಸಾಟೈಲ್ಸ್, ಮಲೀಕ ರಾಜೇಂದ್ರಕುಮಾರ್, ಡುಂಗರವಾಲ ಸೇಠ್, ಅಪ್ಪೂ ಗಾರ್ಮೆಂಟ್ಸ್ ಮಾಲೀಕ ರಾಜೇಂದ್ರ ಜೈನ್, ಅಲ್ಲದೆ ಅಪಾರವಾಗಿ ಮಹಿಳೆಯರು ಬಿಸಿಲನ ತಾಪ ಹೆಚ್ಚಾಗಿದ್ದರೂ ಲೆಕ್ಕಿಸದೇ ಮಹಾವೀರರ ಸಂದೇಶ ತತ್ವಪದಗಳನ್ನು ಹಾಡುತ್ತಾ ಮೆರವಣಿಗೆಯಲ್ಲಿ ಸಾಗಿತು. ಜೈ ಸಮಾಜದಿಂದ ಪ್ರಾರಂಭದಿಂದ ಪ್ರಾರಂಭವಾದ ಮೆರವಣಿಗೆ ಪುರಸಭಾ ಬಸ್ ನಿಲ್ದಾಣ, ವಿಜಯ ವೃತ್ತ, ವಾಲ್ಮೀಕಿ ವೃತ್ತ, ಮುಖ್ಯ ಬೀದಿ, ವಿಠೋಬ ದೇವಸ್ಥಾನ, ಮರಾಠ ಸಮಾಜದ, ಕೆ.ಇ.ಬಿ. ವೃತ್ತ, ನೂರಾನಿ ಮಸೀದಿ ಮೂಲಕ ಜೈನ ಮಂದಿರಕ್ಕೆ ಆಗಮಿಸಿ ವಿಸರ್ಜನೆ ಗೊಂಡಿತು, ಭೋವಿ ಸಮಾಜದ ಸಿದ್ದೇಶ ಹಲವಾರು ಗಣ್ಯಮಾನ್ಯರು ಉಪಸ್ಥಿತರಿದ್ದರು.