ಅಹಿಂಸಾತತ್ವದಿಂದಲೇ ಎಲ್ಲವನ್ನು ಸಾಧಿಸಲು ಸಾಧ್ಯ- ಡಾ. ಶೆಟ್ಟರ


ಧಾರವಾಡ,ಎ.19:ನಮ್ಮ ದೇಶದ ಸ್ವಾತಂತ್ರ್ಯ ಅಹಿಂಸಾ ತತ್ತ್ವದ ಕೊಡುಗೆ ಅಪಾರ. ಅದು ಎಲ್ಲರಿಗೂ ಒಪ್ಪಿತವಾದ ವಿಷಯ ಗಾಂಧಿ ಅಂದು ಆ ಅಹಿಂಸಾತತ್ವದಿಂದಲೇ ಎಲ್ಲವನ್ನು ಸಾಧಿಸಿದ್ದಾರೆ. ಉತ್ತರಕನ್ನಡ ಸ್ವಾತಂತ್ರ ಹೊರಾಟಗಾರರು ಸಹ ಅಹಿಂಸಾ ಮಾರ್ಗದಿಂದಲೆ ಸ್ವಾಂತತ್ರ್ಯಕ್ಕ ಮಹತ್ವದ ಕೊಡುಗೆ ಕೊಟ್ಟಿರುವುದನ್ನು ನಾವು ಮರೆಯಬಾರದು ಎಂದು ಕವಿವಿಯ ಗಾಂಧಿ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಶಿವಾನಂದ ಶೆಟ್ಟರ ಅಭಿಪ್ರಾಯ ಪಟ್ಟರು.
ಅವರು ಧಾರವಾಡದ ಪಂ ಪುಟ್ಟರಾಜ ಗವಾಯಿಗಳ ಕಲಾ ಪ್ರತಿμÁ್ಠನ, ಹಾವೇರಿಯ ಕಲಾ ಸ್ಪಂದನ ಮತ್ತು ಸ್ಪೂರ್ತಿ ಶಾಲೆ ದಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸಾಹಿತ್ಯಾವಲೋಕನ ಮಾಲೆ-2ನೇಯ ಭಾಗದಲ್ಲಿ ಡಾ. ರಾಜಶೇಖರ ಮಠಪತಿ (ರಾಗಂ) ಇವರ ‘ದಂಡಿ’ ಕಾದಂಬರಿ ಬಿಡುಗಡೆ ಮತ್ತು ಅವಲೋಕನ ಕಾರ್ಯಕ್ರಮದಲ್ಲಿ ಸಾಹಿತ್ಯ ಕೃತಿಯಾಗಿ ದಂಡಿ ಎಂಬ ವಿಷಯದ ಕುರಿತು ಮಾತನಾಡುತ್ತಾ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಉತ್ತರಕನ್ನಡ ಜಿಲ್ಲೆಯೂ ಮಹತ್ವದ ಪಾತ್ರವನ್ನ ವಹಿಸಿದ್ದು, ಸ್ವಾತಂತ್ರ್ಯ ಹೋರಾಟಕ್ಕೆ ತನ್ನದೇ ಆದ ಕೊಡುಗೆಯನ್ನ ನೀಡಿದೆ. ಅದರಲ್ಲಿಯೂ ಉಪ್ಪಿನ ಸತ್ಯಾಗ್ರಹ ಸಂದರ್ಭದಲ್ಲಿ ಸಾಮೂಹಿಕ ಹೋರಾಟದ ಮೂಲಕ ಸ್ವಾತಂತ್ರ್ಯದ ಕಿಚ್ಚನ್ನ ಹೊತ್ತಿಸಿದ್ದು ಅಂದಿನ ಹೋರಾಟವನ್ನು ರಾಗಂ ಅವರ ‘ದಂಡಿ’ ಕಾದಂಬರಿ ವಿವರಿಸಿದೆ. ರಾಗಂ ಅವರು ಬಹಳ ಸುಂದರವಾಗಿ ಅಹಿಂಸಾ ತತ್ತ್ವವನ್ನು ದಂಡಿ ಎನ್ನುವ ಕಾಲ್ಪನಿಕ ಪಾತ್ರದ ಮೂಲಕ ಉಪ್ಪಿನ ಸತ್ಯಾಗ್ರಹ ಕಾಲಘಟ್ಟವನ್ನು ಕಟ್ಟಿ ಕೊಡುತ್ತಾರೆ. ಚಾರಿತ್ರಿಕವಾದ ದಂಡಿಯ ಈ ಚರಿತ್ರೆ ಇನ್ನೊಂದು ಅರ್ಥದಲ್ಲಿ ಇಡೀ ಕರಾವಳಿ ಕರ್ನಾಟಕದ ಉಪ್ಪಿನ ಸತ್ಯಾಗ್ರಹದ ಸುತ್ತಲಿನ ಚರಿತ್ರೆಯೇ ಆಗಿದೆ ಈ ಮಹತ್ವದ ಸಂದರ್ಭದಲ್ಲಿ ಇಲ್ಲಿಯ ಅಗೇರ, ಮೊಗೇರ, ಹಾಲಕ್ಕಿ, ಗೌಡಸಾರಸ್ವತ, ಹವ್ಯಕ ಮತ್ತು ದೇಶಾವರಿ ಬ್ರಾಹ್ಮಣ ಸಮುದಾಯಗಳು, ನಾಡವರು, ಕಾರ್ವಿ ಹಾಗೂ ಕುಣಬಿ ಸಮುದಾಯಗಳು ತಮ್ಮ ಹೋರಾಟದ ರೀತಿಯನ್ನು ಚಳುವಳಿಯ ಆಶಯದಂತೆ ರೂಪಿಸಿಕೊಂಡ ಕಥನವನ್ನು ಕಾದಂಬರಿಯು ಎಳೆಎಳೆಯಾಗಿ ವಿವರಿಸುತ್ತಾ ಹೋಗುತ್ತದೆ ಎಂದು ಹೇಳಿದರು.
ಚಲನಚಿತ್ರವಾಗಿ ದಂಡಿ ಎಂಬ ವಿಷಯದ ಕುರಿತು ಮಾತನಾಡಿದ ಪೆÇ್ರೀ. ಜಿ ಕೆ ಬಡಿಗೇರ ಅವರು ದಂಡಿ ಚಲನ ಚಿತ್ರ ತುಂಬಾ ನೈಜವಾಗಿ ಕಾದಂಬರಿಕಾರರ ಚಿಂತನೆಗೆ ಹತ್ತಿರವಾಗಿ ಮೂಡಿ ಬಂದಿದೆ. ಸ್ವಾತಂತ್ರ್ಯ ಚಳುವಳಿಗೆ ಜಿಲ್ಲೆ ನೀಡಿದ್ದ ಕೊಡುಗೆಯನ್ನು ಸಾಕ್ಷೀಕರಿಸುವ ನಿಟ್ಟಿನಲ್ಲಿ ಚಿತ್ರ ಯಶಸ್ವಿಯಾಗಿದೆ. ಅದರಲ್ಲೂ ಅಹಿಂಸಾ ಮಾರ್ಗದ ಹೋರಾಟ ಎನಿಸಿಕೊಂಡಿದ್ದ ಉಪ್ಪಿನ ಸತ್ಯಾಗ್ರಹ ಕುರಿತು ಈ ಚಿತ್ರ ನೀಡಿದೆ ಎಂದು ತಿಳಿಸಿದರು.
ಕಾದಂಬರಿಕಾರ ರಾಗಂ ಅವರು ಪ್ರತಿಷ್ಠಾನದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಈ ಕಾದಂಬರಿ ರಚನೆಯ ಹಿಂದಿನ ಅನುಭವ ಮತ್ತು ಚಲನಚಿತ್ರದ ಚಿತ್ರಿಕರಣದ ಸನ್ನಿವೇಶದ ಹಿನ್ನೆಲೆಯ ಶ್ರಮವನ್ನು ಸ್ಮರಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಲ್ಲಿಕಾರ್ಜುನ ಚಿಕ್ಕಮಠ ಧಾರವಾಡದಿಂದ ಉನ್ನರಕನ್ನಡದ ವರೆಗಿ ದಂಡಿ ಅನ್ನುವ ಕುರಿತು ಅದರ ಮಹತ್ವದ ಹಿನ್ನಲೆಯ ಅಂಶದ ಬಗ್ಗೆ ಮಾತನಾಡಿದರು.
ಸಾಹಿತಿ, ಸಂಘಟಕರಾದ ಮಾರ್ತಾಂಡಪ್ಪ ಎಮ್ ಕತ್ತಿ ಮಾತನಾಡಿ ರಾಗಂ ಅವರ ಮಾತೃಹೃದಯ ಅಂಶಗಳ ಹಾಗೂ ದಂಡಿ’ ಕಾದಂಬರಿ ಏಕೆ ಭಿನ್ನತೆಯಾಗಿ ನಿಲ್ಲುತ್ತದೆ. ಇದರಲ್ಲಿ ದಂಡಿ ಒಂದು ನಾಯಕನ ಹೆಸರು. ಈತ ಭಾರತದ ಸ್ವಾತಂತ್ರ್ಯ ಹೋರಾಟಗಳಲ್ಲಿ ಉಪ್ಪಿನ ಸತ್ಯಾಗ್ರಹದ ಸುತ್ತಲಿನ ಮಹತ್ವದ ಪ್ರಮುಖ ನಾಯಕರುಗಳ ಚಟುವಟಿಕೆ ಮತ್ತು ವ್ಯಕ್ತಿತ್ವಗಳಿಂದ ತೀವ್ರವಾಗಿ ಪ್ರಭಾವಿತನಾದವನು. ಅವರೆಲ್ಲರ ಸಾರಸತ್ವಗಳನ್ನು ಹೀರಿಕೊಳ್ಳಲು ಹೊರಟವನು. ಆದರೆ ಎಲ್ಲೋ ದಾರಿ ತಪ್ಪಿದ್ದಾನೆ. ತಪ್ಪಿದ ಈ ದಾರಿಯನ್ನು ಆತ ದಕ್ಕಿಸಿಕೊಳ್ಳಬೇಕಾಗಿದೆ. ಹೀಗಾಗಿ, ಈ ದಾರಿಯ ಶೋಧವೇ ಕಾದಂಬರಿ ವಸ್ತು ಎಂದು ಹೇಳಿದರು.
ಸ್ನೇಹಿತರು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಮ್.ಜಿ.ಮಠಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಭಾ ಮತ್ತು ವಿವೇಕ ಪಟ್ಟಣಕೋಡಿ ಪ್ರಾರ್ಥಿಸಿದರು. ಶ್ರೀಶೈಲ ಚಿಕನಳ್ಳಿ ಮತ್ತು ಮಾರ್ತಾಂಡಪ್ಪ ಕತ್ತಿ ಕಾರ್ಯಕ್ರಮ ನಿರೂಪಿಸಿದರು. ಸುರೇಶ ಬೆಟಗೇರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಪದ್ಮಾ ರಾಜಶೇಖರ ಮಠಪತಿ, ಸಾಹಿತಿಗಳಾದ ಅಶ್ಪಾಕ್ ಪೀರಜಾಧೆ, ರಂಗಪರಿಸರದ ಅಧ್ಯಕ್ಷರಾದ ವಿಠ್ಠಲ ಕೊಪ್ಪದ, ಸೋಮು ರೆಡ್ಡಿ, ಚಂದ್ರಶೇಖರ ಮಾಡಲಗೇರಿ, ಆರ್.ಕೆ.ಬಡಿಗೇರ, ಯಕ್ಕೇರಪ್ಪ ನಡುವಿನಮನಿ, ಡಾ.ಪ್ರಕಾಶ ಮಲ್ಲಿಗವಾಡ, ಶಿವಾನಂದ ಅಮರಶೆಟ್ಟಿ, ಎಸ್.ಐ.ಭಾವಿಕಟ್ಟಿ, ಮಾಹಾಂತೇಶ ನರೇಗಲ್ಲ, ವಿಜಯಕುಮಾರ ದೊಡಮನಿ, ಚೇತನಕುಮಾರ ಕುಲಕರ್ಣಿ, ಬಸವರಾಜ ಗುಡ್ಡಪ್ಪನವರ, ಸೋಮು, ಸಂತೋಷ, ನವಿಲುಗರಿ ಸಾಹಿತ್ಯ ವೇದಿಕೆಯ ಸದಸ್ಯರು, ಸ್ಪೂರ್ತಿ ಶಾಲೆಯ ಶಿಕ್ಷಕ ವೃಂದದವರು ಹಾಗೂ ಸಾಕಷ್ಟು ಸಾಹಿತ್ಯಾಭಿಮಾನಿಗಳು ಭಾಗವಹಿಸಿದ್ದರು.