ಅಹಿಂದ ಮತ್ತು ರೈತ ವಿರೋಧಿ ಬಜೆಟ್

ಕಲಬುರಗಿ:ಫೆ.17: ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಒಂದು ರೈತ ವಿರೋಧಿ ಬಜೆಟ್ ಆಗಿದೆ ಎಂದು ಮಹಾಗಾಂವ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ ಆಕ್ರೋಶ ವ್ಯಕ್ತಪಡಿಸಿದ್ದರು.

   ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಇದೊಂದು ಶೂನ್ಯ ಬಜೆಟ್. ಕರ್ನಾಟಕ ರಾಜ್ಯವನ್ನು ಈ ಬಜೆಟ್ 20 ವರ್ಷಗಳ ಹಿಂದಕ್ಕೆ ತೆಗೆದುಕೊಂಡು ಹೋಗಿದೆ.ಇದು ಅಭಿವೃದ್ಧಿಗೆ ವಿರೋಧ ಆಗಿದೆ. ಅಭಿವೃದ್ಧಿಗೆ ಹಣ ನೀಡಿಲ್ಲ. ರೈತರ ಬಡವರ ಹಾಗೂ ಅಭಿವೃದ್ಧಿಯ ವಿರೋಧಿಯಾಗಿದೆ ಎಂದು ಅವರು ಟೀಕಿಸಿದರು.ಬರಗಾಲದ ಸಂದರ್ಭದಲ್ಲೂ ಕೃಷಿ ಮತ್ತು ಬೆಳೆ ಸಾಲದ ಮನ್ನಾ ಕುರಿತು ಉಲ್ಲೇಖ ಮಾಡಿಲ್ಲ. ಸರಕಾರಿ ನೌಕರರ ಮೂಗಿಗೆ ತುಪ್ಪ ಹಚ್ಚುವ ಕೆಲಸವನ್ನು ಮಾಡಲಾಗಿದೆ. ಬರಗಾಲದ ಸಂದರ್ಭದಲ್ಲಿ ಯಾವುದೇ ರೀತಿಯ ಅನುಕೂಲ ಆಗದ ಬಜೆಟ್ ಇದಾಗಿದೆ ಎಂದರು.ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿರುವುದರಿಂದ ಜನಸಾಮನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಈ ಹಿನ್ನಲೆಯಲ್ಲಿ ರಾಜ್ಯ ಸರಕಾರ ಬಜೆಟ್ ನಲ್ಲಿ ರೈತರ ಸಾಲ ಹಾಗೂ ಮಹಿಳಾ ಸಂಘಗಳ ಸಾಲ ಮನ್ನಾ ಘೋಷಣೆ ಮಾಡಬೇಕೆನ್ನುವ ಒತ್ತಾಯ ಕೇಳಿ ಬಂದಿತ್ತು.ಆದರೆ ಸರಕಾರ  ಇಂತಹ ಘೊಷಣೆ ಮಾಡದಿರುವುದು ನಿರಾಸೆ ಮೂಡಿಸಿದ್ದಾರೆ ಎಂದರು.
         ತಮ್ಮ 15ನೇ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಗ್ಯಾರಂಟಿಗಳ ಅರ್ಥವಿಲ್ಲದ ಆರ್ಥಿಕ ರೂಪದಲ್ಲಿ ಬಿದ್ದಿರುವುದು ಎದ್ದು ಕಾಣುತ್ತಿದೆ.ತಮ್ಮ ತಪ್ಪಿಗೆ ತೇಪೆ ಹಾಕಲು ಕೇಂದ್ರದೆಡೆಗೆ ಬೆಟ್ಟು ಮಾಡಿ ಸುಳ್ಳನ್ನೇ ನಂಬಿಸಲು ಹೊರಟ್ಟಿದ್ದಾರೆ.ಹಿಂದುಗಳಿಗೆ ಬಿಡುಗಾಸು ನೀಡದೆ ತಮ್ಮ ಅಚ್ಚುಮೆಚ್ಚಿನ ಪಂಗಡಕ್ಕೆ ಅಪಾರ ಅನುದಾನ ಘೋಷಿಸಿದ್ದಾರೆ ಎಂದು ಅವರು ಕಿಡಿಕಾರಿದ್ದರು.