ಅಹಿಂದ ಪ್ರಜಾಶಕ್ತಿ ಕೇಂದ್ರ ಕಚೇರಿಯಲ್ಲಿ ಸಾವಿತ್ರಿಬಾಪುಲೆ ಜನ್ಮದಿನಾಚರಣೆ

ದಾವಣಗೆರೆ.ಜ.೪; ಅಹಿಂದ ಪ್ರಜಾಶಕ್ತಿ  ಕೇಂದ್ರ ಕಛೇರಿಯಲ್ಲಿ ಅಕ್ಷರದ ಅವ್ವ ಶ್ರೀಮತಿ ಸಾವಿತ್ರಿ ಬಾಯಿ ಪುಲೆ ಅವರ ಜನ್ಮ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಹಿಂದ ಪ್ರಜಾಶಕ್ತಿ ರಾಜ್ಯಾಧ್ಯಕ್ಷರಾದ ಗೋವಿಂದರಾಜು ಜಿ.ಎಂ ವಹಿಸಿದ್ದರು. ಜಿಲ್ಲಾಧ್ಯಕ್ಷರಾದ ಮಾಲತೇಶ್ ಜೆ.ಆರ್  ಸಾವಿತ್ರಿ ಬಾಯಿ ಪುಲೆಯವರ ಸಾಧನೆಯನ್ನು ಮೆಲಕು ಹಾಕಿದರು. ಹಿಂದುಳಿದ ದಲಿತ ವರ್ಗದ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ಪಡೆಯಲು ಅವರು ಪಟ್ಟಕಷ್ಟ ಹಾಗೂ ಎದುರಿಸಿದ ಅವಮಾನ ಎಲ್ಲವೂ ಶ್ಲಾಘನೀಯ ಎಂದು ಸ್ಮರಿಸಿದರು. ಹೆಣ್ಣು ಮನಸ್ಸು ಮಾಡಿದರೆ ಯಾವುದೇ ಸಾಧನೆ ಕಷ್ಟವಲ್ಲ ಅಂತ ಆಗಿನ ಕಾಲದಲ್ಲೇ ಸಾಧಿಸಿ ತೋರಿಸಿದ ಧೀರ ಮಹಿಳೆ ಸಾವಿತ್ರಿ ಬಾಯಿ ಪುಲೆಯವರು ಎಂದು ಅಹಿಂದ ಪ್ರಜಾ ಶಕ್ತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಎಸ್.ಕೆ. ರವರು ಸ್ಮರಿಸಿದರು.ಸಾಮಾಜಿಕ ಜಾಲತಾಣ ರಾಜ್ಯ ಸಂಚಾಲಕರಾದ ಮೊಹಮ್ಮದ್ ಜಿಕ್ರಿಯಾ ಹಾಗೂ ಕುಮಾರ್, ಮೊಹಮ್ಮದ್ ಅಯಾನ್  ಮತ್ತು ಇತರರು ಭಾಗವಹಿಸಿದ್ದರು.