ಅಹವಾಲು ಸ್ವೀಕಾರ

ಲಕ್ಷ್ಮೇಶ್ವರ,ಮಾ29: ಇಲ್ಲಿನ ತಹಶೀಲ್ದಾರ್ ಕಾರ್ಯಾಲಯದಲ್ಲಿ ಗದಗ ಜಿಲ್ಲಾ ಲೋಕಾಯುಕ್ತ ವತಿಯಿಂದ ಲಕ್ಷ್ಮೇಶ್ವರ ತಾಲೂಕಿನ ಸಾರ್ವಜನಿಕರ ಕುಂದು ಕೊರತೆ ಅಹವಾಲುಗಳನ್ನು ಸ್ವೀಕರಿಸಿದರು.
ಲೋಕಾಯುಕ್ತ ಡಿವೈಎಸ್ಪಿ ಶಂಕರ್ ರಾಗಿಯವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಆರು ಅರ್ಜಿಗಳು ಸಾರ್ವಜನಿಕರಿಂದ ಸ್ವಿಕೃತವಾಗಿವೆ ಇದರಲ್ಲಿ ವಾರ್ಸ ಆದಾಯ ಜಾತಿ ಸರ್ಟಿಫಿಕೇಟ್ ಗಳನ್ನು ಪಡೆಯಲು ಕಳೆದ ಎಂಟು ತಿಂಗಳಿನಿಂದ ಎಡಪಾಕುತ್ತಿರುವದಾಗಿ ಲೋಕಾಯುಕ್ತರಿಗೆ ದೂರು ನೀಡಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಶಂಕರ್ ರಾಗಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಂಡು ಕಾನೂನು ಬದ್ಧವಾಗಿ ನೀಡಲು ಸಾಧ್ಯವಿದ್ದರೆ ಅವುಗಳು ಸಂಬಂಧ ಪಟ್ಟ ಅರ್ಜಿ ದಾರಿಗೆ ನೀಡುವಂತೆ ಸೂಚಿಸಿದರಲ್ಲದೆ ಸಮರ್ಪಕವಾಗಿ ಉತ್ತರಿಸಿ ಕಚ್ಚೆರಿಗೆ ಎಡ್ತಾಕುವುದನ್ನು ತಪ್ಪಿಸಬೇಕು ಎಂದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಸಿಬ್ಬಂದಿಗಳು ತಹಶೀಲ್ದಾರ್ ಕಾರ್ಯಾಲಯದ ಸಿಬ್ಬಂದಿಗಳು ಹಾಜರಿದ್ದರು.