ಅಹಂನಿರಸನ ಜೀವನವೇ ಸಾರ್ಥಕ ಬದುಕಿಗೆ ಪ್ರೇರಣೆ : ಶಿವಕುಮಾರ ಕಟ್ಟೆ

ಔರಾದ :ಡಿ.4: ಪ್ರಕೃತಿಗೆ ಅಹಂಕಾರವಿರುವುದಿಲ್ಲ, ಆದರೆ ಮನುಷ್ಯರಿಗೆ ಮಾತ್ರ ಅಹಂಕಾರವಿರುತ್ತದೆ. ಆದ್ದರಿಂದ ಅಹಂನಿರಸನ ಜೀವನವೇ ಸಾರ್ಥಕ ಬದುಕಿಗೆ ಪ್ರೇರಣೆÀ ಯಾಗುತ್ತದೆಂದು ಸಾಹಿತಿ ಶಿವಕುಮಾರ ಕಟ್ಟೆ ನುಡಿದರು.

ಅವರು ಶರಣ ಮಲ್ಲಶೆಟ್ಟೆಪ್ಪ ಉದಗಿರೆಯವರ ಸ್ಮರಣೋತ್ಸವ ಸಮಿತಿ ಬಲ್ಲೂರ ಆಯೋಜಿತ ಎರಡನೆಯ ಸ್ಮರಣೋತ್ಸವ ಹಾಗೂ ಸಾಹಿತ್ಯ ಉತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡುತ್ತ ಪ್ರತಿ ಜೀವಿಯ ಬದುಕಿಗೂ ಒಂದು ಅರ್ಥವಿರುತ್ತದೆ. ಆದರೆ ಜೀವನಕ್ಕೆ ಅರ್ಥಬರುವಂತೆ ಬದುಕುವವರು ವಿರಳ. ಪರೋಪಕಾರಿಯಾಗಿ ಸಾಮಾಜಿಕ ಮೌಲ್ಯಗಳನ್ನು ಬದುಕಿದ ಶರಣ ಮಲ್ಲಶೆಟ್ಟೆಪ್ಪ ಉದಗಿರೆಯವರ ಜೀವನ ಮುಂದಿನ ಜನಾಂಗಕ್ಕೆ ಮಾದರಿಯಾಗಿದೆ ಎಂದು ನುಡಿದರು.

ಜಿಲ್ಲಾ ಬಸವಕೇಂದ್ರ, ಅಧ್ಯಕ್ಷರಾದ ಶರಣಪ್ಪ ಮಿಠಾರೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡುತ್ತ ಸಮಾಜದಲ್ಲಿ ಕೆಲವರು ಸಾವಿಗೂ ಒಂದು ಅರ್ಥ ತಂದುಕೊಡುವುದರ ಮೂಲಕ ಸಾವಿನಾಚೇಗೂ ಬದುಕುಳಿಯುತ್ತಾರೆ ಅಂಥ ಹಿರಿಯರ ಸ್ಮರಣೆ ನಮ್ಮ ಬದುಕಿಗೆ ಸತ್ಪ್ರೇರಣೆಯಾಗಬೇಕು, ಜೊತೆಗೆ ಸಾಮಾಜಿಕ ಸೇವೆ ನಮ್ಮ ಬದುಕಿನ ಭಾಗವಾಗಬೇಕು ಅಂದಾಗ ನಮ್ಮ ಜೀವನಕ್ಕೂ ಅರ್ಥಬರುತ್ತದೆಂದು ಅಭಿಪ್ರಾಯ ಪಟ್ಟರು.

ಮಲ್ಲಿಕಾರ್ಜುನ ಬಂಬುಳಗೆ ಲಾಧಾ ಅವರು ಅನುಭಾವ ನುಡಿ ನುಡಿಯುತ್ತ ಮಲ್ಲಶೆಟ್ಟೆಪ್ಪ ಅವರ ಜೀವನ ಆದರ್ಶಮಯವಾಗಿದ್ದು ಅನೇಕರ ಬದುಕಿಗೆ ನೆರವಾಗುವ ಮೂಲಕ ಸಾರ್ಥಕ ಜೀವನ ನಡೆಸಿ ನಮಗೆಲ್ಲ ಆದರ್ಶಪ್ರಾಯವಾಗಿದ್ದರೆಂದು ನುಡಿದರು. ಹುಮನಾಬಾದ ತಾಲ್ಲೂಕು ಡಿ.ಸಿ.ಸಿ ಬ್ಯಾಂಕಿನ ಅಭಿವೃದ್ಧಿ ಅಧಿಕಾರಿಗಳಾದ ಶರಣಬಸವ ಚಲುವಾ, ಉದ್ಯ್ದಮಿ ಬಸವರಾಜ ಕೆ. ಪಾಟೀಲ ಪುಣೆ ಮೊದಲಾದವರು ಮಾತನಾಡಿದರು. ಬೀದರ ಎನ್.ಜಿ.ಒ. ಗೃಹ ನಿರ್ಮಾಣ ಮಂಡಳಿ, ನಿರ್ದೇಶಕರಾದ ಸಿದ್ದಾರೆಡ್ಡಿ ನಾಗೋರಾ, ಹಿರಿಯ ಮುಖಂಡರಾದ ಕಲ್ಯಾಣರಾವ ಸಂಗಾಪಾಟೀಲ, ಗ್ರಾಮ ಪಂಚಾಯತ ಸದಸ್ಯರಾದ ಶಿವರಾಜ ಪಾಟೀಲ, ಪ್ರಭು ಬಳತೆ, ಶಿಲ್ಪಾ ರೆವಣಪ್ಪ, ಪಂಡಿತ ಮಾಣಿಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಸಾದಿಕರಾದ ಶಿವಕುಮಾರ ತರನಾಳೆ ಹಾಗೂ ಸಿದ್ದಗಂಗಾ ಮಠದ ಹಳೆ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿಗಳಾದ ದೇವೇಂದ್ರ ಕರಂಜೆ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷರಾದ ಕಸ್ತೂರಿ ಪಟಪಳ್ಳಿ, ವಿದ್ಯಾವತಿ ಬಲ್ಲೂರ, ಡಾ. ಬಂಡಯ್ಯ ಸ್ವಾಮಿ, ಡಾ. ರಾಜಕುಮಾರ ಅಲ್ಲೂರೆ, ಡಾ. ಈಶ್ವರಯ್ಯ ಕೊಡಂಬಲ್, ಡಾ. ಶಿವರಾಜ ಪಾಟೀಲ, ಡಾ. ಮನ್ಮಥ ಡೋಳೆ, ಜಗನ್ನಾಥ ಮೂಲಗೆ, ಓಂಪ್ರಕಾಶ ದಡ್ಡೆ, ಶರಣಬಸವಪ್ಪ ಕಾರೆಮುಂಗೆ, ಶರಣಪ್ಪ ಬಿರಾದಾರ ಮುಸ್ತಾಪುರ, ಶಿವಪುತ್ರ ಪಟಪಳ್ಳಿ, ರಾಜಕುಮಾರ ಉದ್ಗೀರೆ, ಗಂಗಶೆಟ್ಟಿ ಪಾಟೀಲ, ಸಂಗಶೆಟ್ಟಿ ಉದ್ಗಿರೆ, ಶಿವರಾಜ ಚಿಲ್ಲಾಳೆ, ಪ್ರಭಾಕರ ದೇಸಾಯಿ, ಅಮರೇಶ ನಿಡೋದೆ ಮೊದಲಾದವರಲ್ಲದೆ ಬಲ್ಲೂರ, ಕೌಠಾ, ಕೌಡಗಾವ ಹೀಗೆ ಸುತ್ತಲಿನ ಅನೇಕ ಗ್ರಾಮಸ್ತರು ಭಾಗವಹಿಸಿದ್ದರು. ಡಾ. ಬಸವರಾಜ ಬಲ್ಲೂರ ಪ್ರಾಸ್ತಾವಿಕ ನುಡಿ ನುಡಿದರು. ಶಿವಶಂಕರ ಟೋಕರೆ ಸ್ವಾಗತಿಸಿದರೆ, ಜಗನ್ನಾಥ ಕಮಲಾಪುರೆ ನಿರೂಪಿಸಿದರು. ಟಿ.ಎಂ. ಮಚ್ಚೆ ವಂದಿಸಿದರು.