ಅಹಂಕಾರದ ಪರದೆ ಕಳಚಿದಾಗ ದೇವನೊಲಿಮೆ ಸಾಧ್ಯ : ಹಾರಕೂಡ ಶ್ರೀ

Oplus_131072

ಬೀದರ್:ಮೇ.2: ಮಮಕಾರ ಮತ್ತು ಅಹಂಕಾರದ ಪರದೆ ಕಳಚಿದಾಗ ದೇವನೊಲಿಮೆ ಸಾಧ್ಯವಾಗುತ್ತದೆ.
ಮೋಹದ ಮಾಯಯಿಂದ ಅಹಂಕಾರದ ಬೀಗುವಿಕೆಯಿಂದ ಬದುಕಿನಲ್ಲಿ ಅಮೃತಯಾನ ಫಲಿಸುವುದಿಲ್ಲ ಎಂದು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಜೋಗೆವಾಡಿ ಗ್ರಾಮದಲ್ಲಿ ಶ್ರೀ ಮಹದೇವ ಜಾತ್ರಾ ಮಹೋತ್ಸವ ನಿಮಿತ್ಯವಾಗಿ ಆಯೋಜಿಸಿರುವ ಅಖಂಡ ಹರಿನಾಮ ಸಪ್ತಾಹ ಹಾಗೂ ಕಾಲ ಕಾರ್ಯಕ್ರಮದ ಪಾವನ ಸನ್ನಿಧಾನ ವಹಿಸಿ ಮಾತನಾಡಿದ ಹಾರಕೂಡ ಪೂಜ್ಯರು, ಆಧ್ಯಾತ್ಮ ಜಲಧಾರೆಯಿಂದ ವ್ಯಕ್ತಿತ್ವದ ವಿಕಾಸವಾಗುತ್ತದೆ, ವ್ಯಕ್ತಿತ್ವ ವಿಕಾಸದಿಂದ ಬದುಕಿನ ಮೌಲ್ಯವರ್ಧನೆಯಾಗಿ ಶಾಂತಿ, ಸಮಾಧಾನ ಲಭಿಸುತ್ತದೆ.
ಹರಿ, ಹರ, ವಿಷ್ಣು, ಮಹದೇವ, ವಿಠಲ, ಪಾಂಡುರಂಗ ಎಂಬಿತ್ಯಾದಿ ನಾಮಂಕಿತಗಳು ಬೇರೆ ಬೇರೆ ಎನಿಸಿದರೂ ತಾಯಿ ಬೇರು ಒಂದೇ ಮೂಲ ಸತ್ವದಲ್ಲಿ ಇರುವಂತಹದು.
ಮನಸ್ಸಿನ ನಿರ್ಮಲತೆ ಹಾಗೂ ಶುಭ್ರವಾದ ನಡತೆಯೇ ಮಹಾದೇವನ ನಿಜವಾದ ಪೂಜೆ.
ಅಖಂಡ ಹರಿನಾಮ ಸಪ್ತಾಹ, ಕಾಲ ಹೀಗೆ ವೈವಿಧ್ಯಮಯ ಧಾರ್ಮಿಕ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುವಲ್ಲಿ ಜೋಗೆವಾಡಿ ಗ್ರಾಮದ ಜನತೆ ತಮ್ಮ ವಿಶೇಷತೆಯನ್ನು ಕಾಯ್ದುಕೊಂಡು ಬರುತ್ತಿರುವುದು ಸ್ತುತ್ಯರ್ಹವಾಗಿದೆ.
ಹಾಗಾಗಿ ಭಗವಂತನ ಕೃಪಹಸ್ತ ಶಾಶ್ವತ ಶ್ರೀರಕ್ಷೆಯಾಗಿ ಕಾಪಾಡಲಿ ಎಂದು ಶುಭ ಹಾರೈಸಿದರು.
ಗೋವಿಂದ ಗುರೂಜಿ ಸ್ವಾಗತಿಸಿದರು.
ಅಣ್ಣೆಪ್ಪ ಚಿತ್ತಂಪಲ್ಲೆ ನಿರೂಪಿಸಿದರು.
ಗುರುಪ್ರಸಾದ ಚಿತ್ತಂಪಲ್ಲೆ ವಂದಿಸಿದರು.
ಇದಕ್ಕೂ ಮೊದಲು ಹಾರಕೂಡ ಪೂಜ್ಯರು ಕಾಲ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಭಕ್ತರಿಗೆ ದರ್ಶನ ದಯಪಾಲಿಸಿದರು.