ಅಸ್ಸಾಂ ೬೩ ಮಂದಿ ಉಗ್ರರು ಶರಣಾಗತಿ

ಗುವಾಹಟಿ,ಡಿ.೨೨- ನಾಲ್ಕು ಉಗ್ರಗಾಮಿ ಸಂಘಟನೆಗಳಿಗೆ ಸೇರಿದ್ದ ೬೩ ಮಂದಿ ಭಯೋತ್ಪಾಕದರು ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ಶರಣಾಗತರಾಗಿದ್ದಾರೆ.
ಮುಖ್ಯಮಂತ್ರಿ ಸರಬಾನಂದ ಸೋನಾವಾಲ್ ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಭಾಸ್ಕರ್ ಜ್ಯೋತಿ ಮಹಾಂತ ಸಮ್ಮುಖದಲ್ಲಿ ಶರಾಣಾಗಿದ್ದಾರೆ.
ಮುಖ್ಯಮಂತ್ರಿ ಸರಬಾನಂದ ಸೋನಾವಾಲ್ ಅವರ ನಾಯಕತ್ವ ರಾಜ್ಯಕ್ಕೆ ಹೊಸ ಭಾಷ್ಯ ಬರೆಯಲಿದೆ ಎಂದು ಶರಣಾಗತರಾಗಿರುವ ಉಗ್ರರು ತಿಳಿಸಿದ್ದಾರೆ.
ಕಳೆದ ಮೂರು ದಶಕಗಳಿಂದಲೂ ಅಸ್ಸಾಂನಲ್ಲಿ ಉಗ್ರಗಾಮಿ ಚಟುವಟಿಕೆಗಳಿಗೆ ಅಂತ್ಯ ಹಾಡಲಾಗಿದ್ದು, ಅಸ್ಸಾಂ ರಾಜ್ಯವನ್ನು ಉಗ್ರರಿಂದ ಮುಕ್ತಗೊಳಿಸಿ ಅವರಲ್ಲಿ ವಿಶ್ವಾಸ ವೃದ್ಧಿಸಲು ಮುಖ್ಯಮಂತ್ರಿಗಳು ಮುಂದಾಗಿದ್ದಾರೆ ಎಂದು ಡಿಜಿಪಿ ಟ್ವೀಟ್ ಮಾಡಿದ್ದಾರೆ.
ಶರಣಾಗತರಾಗಿರುವ ವಿವಿಧ ಉಗ್ರಗಾಮಿ ಸಂಘಟನೆಗಳ ೬೩ ಮಂದಿ ಸಮಾಜದ ಮುಖ್ಯ ವಾಹಿನಿಯಲ್ಲಿ ಬೆರೆತು ಉತ್ತಮ ವ್ಯಕ್ತಿಗಳಾಗಿ ಸಾಬೀತುಪಡಿಸಲಿ ಎಂದು ಮಹಾಂತ ಟ್ವಟರ್‌ನಲ್ಲಿ ಹಾರೈಸಿದ್ದಾರೆ.