ಅಸ್ಸಾಂ ರೈಫಲ್ಸ್ ವಿರುದ್ಧ ಎಫ್‌ಐಆರ್

ಇಂಫಾಲ, ಆ.೯- ಕಳೆದ ವಾರ ಎರಡು ಗುಂಪುಗಳ ನಡುವೆ ವಾಗ್ವಾದ ಉಂಟಾದ ಸಂದರ್ಭದಲ್ಲಿ ತಮ್ಮ ವಾಹನವನ್ನು ತಡೆದಿರುವ ಸಂಬಂಧ ಮಣಿಪುರ ಪೊಲೀಸರು ಅಸ್ಸಾಂ ರೈಫಲ್ಸ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಮಣಿಪುರ ಪೊಲೀಸರು ಎಫ್‌ಐಆರ್ ನ್ನು ನ್ಯಾಯದ ಅಪಹಾಸ್ಯ ಎಂದು ಭದ್ರತಾ ಸಿಬ್ಬಂದಿಗಳು ಹೇಳಿದ್ದು, ಕುಕಿ ಮತ್ತು ಮೈತೇಯಿ ಪ್ರದೇಶಗಳ ನಡುವಿನ ಬಫರ್ ವಲಯಗಳಲ್ಲಿ ಕಾಮಂಡ್ ಕೇಂದ್ರ ಕಚೇರಿ ನೀಡಿದ್ದ ಕರ್ತವ್ಯ ನಿರ್ವಹಿಸಿದ್ದಾಗಿ ಹೇಳಿದ್ದಾರೆ.
ಆಗಸ್ಟ್ ೫ ರಂದು ಬಿಷ್ಣುಪುರ ಜಿಲ್ಲೆಯ ಕ್ವಾಕ್ತಾ ಗೋಥೋಲ್ ರಸ್ತೆಯಲ್ಲಿ ಅಸ್ಸಾಂ ರೈಫಲ್ಸ್ ಪೊಲೀಸ್ ವಾಹನಗಳನ್ನು ತಡೆದಿದೆ ಎಂದು ಪೊಲೀಸರು ಆರೋಪಿಸಿ ಎಫ್‌ಐಆರ್ ದಾಖಲಿಸಿದ್ದಾರೆ.
ಮತ್ತೊಂದೆಡೆ, ಮೇಲ್ವಿಚಾರಣೆಗೆ ಸುಪ್ರೀಂ ಕೋರ್ಟ್ ನಿಂದ ತ್ರಿ ಸದಸ್ಯ ಸಮಿತಿ ಕುಕಿ ಉಗ್ರಗಾಮಿಗಳ ಹುಡುಕಾಟದಲ್ಲಿ ಶಸ್ತ್ರಾಸ್ತ್ರ ಕಾಯ್ದೆಯ ಪ್ರಕರಣದಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಲು ರಾಜ್ಯ ಪೊಲೀಸರು ಕ್ವಾಕ್ಟಾದಲ್ಲಿರುವ ಫೋಲ್ಜಾಂಗ್ ರಸ್ತೆಯಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
೯ ಅಸ್ಸಾಂ ರೈಫಲ್ಸ್ ತಮ್ಮ ಕ್ಯಾಸ್ಪರ್ ವಾಹನವನ್ನು, ಸಿಬ್ಬಂದಿಯನ್ನು ರಸ್ತೆಯಲ್ಲಿ ತಡೆದು ನಿಲ್ಲಿಸಿದರು ಎಂದು ಪೊಲೀಸರು ಹೇಳಿದ್ದಾರೆ.