ಅಸ್ಸಾಂ ಬಿಜೆಪಿ ಮುಖ್ಯಮಂತ್ರಿ ವಜಾಕ್ಕೆ ಆಸ್ಸಾಂ ರಾಜ್ಯಪಾಲರಿಗೆ ಒತ್ತಾಯ

ವಿಜಯಪುರ,24:ಕಾಂಗ್ರೆಸ್ ಪಕ್ಷದ ಯುವ ನಾಯಕ, ಸಂಸದ ಸದಸ್ಯ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ‘ಭಾರತ ಜೋಡೋ ನ್ಯಾಯಯಾತ್ರೆ’ ಮೂಲಕ ನ್ಯಾಯಕ್ಕಾಗಿ, ಬಡವರ ಏಳ್ಗೆಗಾಗಿ, ಯುವಕರ ಭವಿಷ್ಯಕ್ಕಾಗಿ ಹಾಗೂ ಬಲಿಷ್ಠ ಭಾರತದ ನಿರ್ಮಾಣಕ್ಕಾಗಿ ಜನರ ಧ್ವನಿ ಆಲಿಸಲು ರಾಹುಲ್ ಗಾಂಧಿ ಅವರು ‘ಭಾರತ ಜೋಡೋ ನ್ಯಾಯಯಾತ್ರೆ’ಯನ್ನು ಮಣಿಪುರದಿಂದ ಪ್ರಾರಂಭಿಸಿ ಆಸ್ಸಾಂನಲ್ಲಿ ಪ್ರವೇಶ ಮಾಡಿದಾಗ ಅಲ್ಲಿಯ ಬಿಜೆಪಿ ಸರಕಾರದ ಮುಖ್ಯಮಂತ್ರಿ ಇದನ್ನು ಸಹಿಸದೇ ಗೂಂಡಾ ಪ್ರವೃತ್ತಿಯ ಬಿಜೆಪಿ ಕಾರ್ಯಕರ್ತರನ್ನು ಛೂಬಿಟ್ಟು ರ್ಯಾಲಿಯ ಮೇಲೆ ಕಲ್ಲು ತೂರಾಟ ನಡೆಸಿ ಹಲ್ಲೆ ಮಾಡಿರುವುದನ್ನು ಖಂಡಿಸಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ವಿಜಯಪುರ ನಗರದ ಡಾ.ಬಾಬಾಸಾಹೇಬ ಅಂಬೇಡ್ಕರ ವೃತ್ತದಲ್ಲಿ ಬಲವಾಗಿ ಖಂಡಿಸಿ ಪ್ರತಿಭಟನೆ ಮಾಡಲಾಯಿತು..

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಅಬ್ದುಲ್‍ಹಮೀದ ಮುಶ್ರೀಫ್, ಕೇಂದ್ರದ ಬಿಜೆಪಿ ಸರಕಾರ ಜನವಿರೋಧಿಯಾಗಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿ ಎದುರಿಸುತ್ತಿದ್ದು, ಹತಾಶ ಮನೋಭಾವದಿಂದ ದ್ವೇಷ ರಾಜಕಾರಣ ಮಾಡಲು ಹೊರಟಿದೆ. ಆಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮುಖಾಂತರ ಬಿಜೆಪಿಯ ಗೂಂಡಾ ಕಾರ್ಯಕರ್ತರನ್ನು ಬಿಟ್ಟು ‘ಭಾರತ ಜೋಡೋ ನ್ಯಾಯಯಾತ್ರೆ’ಯ ನೇತೃತ್ವ ವಹಿಸಿರುವ ನಮ್ಮ ನಾಯಕ ರಾಹುಲ್ ಗಾಂಧಿ ಮೇಲೆ ಕಲ್ಲು ತೂರಾಟ ನಡೆಸಿ ಹಲ್ಲೆ ಮಾಡಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಜನ ನಿಮ್ಮ ಮುಖವಾಡವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ತಕ್ಕಪಾಠ ಕಲಿಸಿ ಮನೆಗೆ ಕಳುಹಿಸುವುದು ಶತಸಿದ್ಧವಾಗಿದೆ. ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಎಂದಿಗೂ ಈ ನಿಮ್ಮ ಗೊಡ್ಡು ಬೆದರಿಕೆಗೆ ಅಂಜುವುದಿಲ್ಲ. ಬಿಜೆಪಿ ಈ ಹಿಂದೆಯೂ ಇಂತಹ ಗೂಂಡಾಗಿರಿ ಮಾಡಿಯೇ ಅಧಿಕಾರಕ್ಕೆ ಬಂದಿದ್ದು, ದ್ವೇಷದ ರಾಜಕಾರಣವೇ ಇವರ ಪ್ರವೃತ್ತಿಯಾಗಿದೆ. ನೀವು ಎಷ್ಟೇ ಪ್ರಯಾಸಪಟ್ಟರೂ ನಮ್ಮ ನಾಯಕರನ್ನು ತಡೆಯಲು ಹಾಗೂ ಈ ಅಲೆಯನ್ನು ತಡೆಯಲು ಸಾಧ್ಯವಿಲ್ಲ. ಇಷ್ಟು ದಿನ ಸರಕಾರದ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಜನರಿಗೆ ಹಾಗೂ ವಿರೋಧ ಪಕ್ಷಗಳನ್ನು ತುಳಿಯುತ್ತಾ ಹೊರಟಿದ್ದಾರೆ. ಇವರು ಅಧಿಕಾರಕ್ಕೆ ಬಂದು 10 ವರ್ಷಗಳಾದರೂ ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ಭ್ರಷ್ಟಾಚಾರದಲ್ಲಿ ಮುಳುಗಿ ಇಡೀ ದೇಶದ ಸಂಪತ್ತನ್ನು ಖಾಸಗಿ ವ್ಯಕ್ತಿಗಳ ಪಾಲಾಗುವಂತೆ ಮಾಡಿದ್ದು, ಕೇಂದ್ರದ ಬಿಜೆಪಿ ಸರಕಾರ ಎಲ್ಲಾ ರಂಗದಲ್ಲಿ ವಿಫಲವಾಗಿದ್ದು, ಸ್ವತಃ ಬಿಜೆಪಿಯವರೇ ರಾಹುಲ್ ಗಾಂಧಿ ಅವರ ಜನಪ್ರಿಯತೆ ಹಾಗೂ ಜನಪರ ಕಾಳಜಿ ಕಂಡು ಭಯಭೀತರಾಗಿ ಇಂತಹ ಕೃತ್ಯಗಳನ್ನು ಎಸಗುತ್ತಿದ್ದು, ಅವರ ಸ್ವಂತ ಬುದ್ಧಿ ಕೆಲಸ ಮಾಡುತ್ತಿಲ್ಲ. ಆಸ್ಸಾಂನ ಮುಖ್ಯಮಂತ್ರಿ ಹಾಗೂ ಅವರ ಪರಿವಾರ ಕಡುಭ್ರಷ್ಟರಿದ್ದು, ಜನವಿರೋಧಿಯಾಗಿದ್ದಾರೆ. ಇಂತಹ ಜನವಿರೋಧಿ ಮುಖ್ಯಮಂತ್ರಿ ವಿರುದ್ಧ ಅಲ್ಲಿನ ರಾಜ್ಯಪಾಲರು ತಕ್ಷಣ ಸೂಕ್ತ ಕ್ರಮ ಕೈಗೊಂಡು ಅವರನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ಇಂತಹ ನೂರು ಬಿಜೆಪಿ ಮುಖ್ಯಮಂತ್ರಿಗಳು ಬಂದರೂ ಜನರ ಹೃದಯದಿಂದ ಕಾಂಗ್ರೆಸ್ ಪಕ್ಷವನ್ನು ಹಾಗೂ ರಾಹುಲ್ ಗಾಂಧಿ ಅವರನ್ನು ತೆಗೆಯಲು ಸಾಧ್ಯವಿಲ್ಲ. ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ‘ಇಂಡಿಯಾ’ ಒಕ್ಕೂಟವು ಅಧಿಕಾರಕ್ಕೆ ಬರಲಿದ್ದು, ಸರ್ವಜನ ಸುಖಿಭವೋ ಎಂಬ ಭಾವನೆಯ ಸರಕಾರ ರಚನೆಯಾಗಲಿದ್ದು, ಸರ್ವರಿಗೂ ನ್ಯಾಯ ಸಿಗಲಿದೆ ಎಂದು ಕಿಡಿಕಾರಿ ಬಲವಾಗಿ ಖಂಡಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಡಾ. ಗಂಗಾಧರ ಸಂಬಣ್ಣಿ, ಆಜಾದ ಪಟೇಲ, ವಿದ್ಯಾವತಿ ಅಂಕಲಗಿ, ಬಲರಾಮ ನಾಯಕ, ಆರತಿ ಶಹಾಪೂರ, ಶಬ್ಬೀರ ಜಾಗೀರದಾರ ಮುಂತಾದವರು ಮಾತನಾಡಿದರು.

ಈ ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ಡಾ. ರವಿ ಬಿರಾದಾರ, ಪ್ರಧಾನ ಕಾರ್ಯದರ್ಶಿಗಳಾದ ವಸಂತ ಹೊನಮೊಡೆ, ಹೊನಮಲ್ಲ ಸಾರವಾಡ, ಅಶ್ಫಾಕ ಮನಗೂಳಿ, ಬಿ.ಸಿ. ಸಾವುಕಾರ, ಶರಣಪ್ಪ ಯಕ್ಕುಂಡಿ, ಚನಬಸಪ್ಪ ನಂದರಗಿ, ಹಾಜಿಲಾಲ ದಳವಾಯಿ, ಅಬುಬಕರ ಬಿಜಾಪುರ, ಅಂಗ ಘಟಕಗಳ ಅಧ್ಯಕ್ಷರಾದ ವಿದ್ಯಾರಾಣಿ ತುಂಗಳ, ನಿಂಗಪ್ಪ ಸಂಗಾಪೂರ, ಲಾಲಸಾಬ ಕೊರಬು, ಬೀರಪ್ಪ ಜುಮನಾಳ, ಎಸ್.ವ್ಹಿ. ಹಜೇರಿ, ರಾಜೇಶ್ವರಿ ಚೋಳಕೆ, ಫಯಾಜ್ ಕಲಾದಗಿ, ಫಿರೋಜ ಶೇಖ, ಮಹಾನಗರಪಾಲಿಕೆ ಸದಸ್ಯರಾದ ಅಪ್ಪು ಪೂಜಾರಿ, ಸದ್ದಾಂ ನಾಡೆವಾಲೆ, ಶಫೀಕ ಮನಗೂಳಿ, ಬಂದೆನವಾಜ ಬೀಳಗಿ, ಅಬ್ದುಲ್‍ಪೀರಾ ಜಮಖಂಡಿ, ಅಂಬಣ್ಣ ಕಲಮನಿ, ಇಕ್ಲಾಸ್ ಸುನ್ನೆವಾಲೆ, ಶಕೀಲ ಸುತಾರ, ಸುಂದರಪಾಲ ರಾಠೋಡ, ಈರಪ್ಪ ಜಕ್ಕನ್ನವರ, ಸೈಫನಸಾಬ ಡಾಂಗೆ, ಸಂತೋಷ ಬಾಲಗಾಂವಿ, ಮಹ್ಮದ ಮುಲ್ಲಾ, ಸಲೀಮ್ ಕಲಾದಗಿ, ಅಕ್ರಂ ಮಾಶಾಳಕರ, ಕೆ.ಬಿ. ಲೋಣಿ, ರಜಾಕಸಾಬ ಕಾಖಂಡಕಿ, ಅಕ್ಬರ ಗೋಕಾವಿ, ಧನರಾಜ ಎ., ಗುಲಾಬ ಭಂಡಾರಿ, ಕೆ.ಸಿ. ಪಾರಶೆಟ್ಟಿ, ಎಂ.ಎ. ಬಕ್ಷಿ, ತುಳಸಿ ಪಂಡಿತ್ ಹರಿಜನ, ಮಂಜುನಾಥ ನಿಡೋಣಿ, ಆಸ್ಮಾ ಕಾಲೆಬಾಗ, ಸವಿತಾ ಧನರಾಜ, ವರ್ಷಾ ಭೋವಿ, ಹಮೀದಾ ಪಟೇಲ, ನಾಗಮ್ಮಾ ಪಾಟೀಲ, ಜಯಶ್ರೀ ಭಾರತೆ, ಗಂಗೂಬಾಯಿ ಧುಮಾಳೆ, ರುಬೀನಾ ಹಳ್ಳೂರ, ಎಂ.ಎಂ. ನಾವಿ, ಪ್ರದೀಪ ಸೂರ್ಯವಂಶಿ, ಮುತ್ತಣ್ಣ ಭೋವಿ, ಈರಪ್ಪ ಕುಂಬಾರ, ಅಬುಬಕರ ಕಂಬಾಗಿ, ಮಹೇಶ ಶಹಾಪೂರ, ಮಹೆಬೂಬ ಚೌಧರಿ, ಚನ್ನಬಸಪ್ಪ ಹರಿಜನ, ಪಿ.ಜಿ. ಕ್ಯಾತನ್, ಸರಫರಾಜ ಮಿರ್ದೆ, ಪ್ರಸಾದ ಚವ್ಹಾಣ, ನಬಿಲಾಲ ಮುಲ್ಲಾ, ಸಿದ್ದುಕುಮಾರ ಮುನ್ನಾಗೋಳ, ಅರ್ಜುನ ಪಟೇಲ್, ಸನಿ ಗವಿಮಠ, ಪ್ರತಾಪ ಚಿಕ್ಕಲಕಿ, ಮಹೇಶ ತಳಕೇರಿ, ರಮೇಶ ಮಂಗಳೂರ, ಷಣ್ಮುಖ ನಡುವಿನಕೇರಿ, ಮಹ್ಮದಯಾಸೀನ್ ಇನಾಮದಾರ, ಅನಿಲ ಸುರಗಿಹಳ್ಳಿ, ಶಾಕಿರ ಖಾಜಿ ಮುಂತಾದವರು ಉಪಸ್ಥಿತರಿದ್ದರು.