ಅಸ್ಸಫಾ ಟ್ರಸ್ಟ್ ವತಿಯಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ

ಕೊಲ್ಹಾರ:ಮಾ.17: ಪಟ್ಟಣದ ಸಮಾಜ ಸೇವಕ, ಯುವ ಉದ್ಯಮಿ ಚಾಂದ್ ಗಿರಗಾಂವಿ ತಮ್ಮ ಸ್ನೇಹಿತರೊಂದಿಗೆ ಜೊತೆಗೂಡಿ ಸಮಾಜ ಸೇವೆಯ ತುಡಿತದೊಂದಿಗೆ ಅಸ್ಸಫಾ ಟ್ರಸ್ಟ್ ಸ್ಥಾಪಿಸುವ ಮೂಲಕ ಜನಪರ ಹಾಗೂ ಸಮಾಜಕ್ಕೆ ಪೂರಕವಾಗುವಂತಹ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.
ಪ್ರಸ್ತುತ ಬೇಸಿಗೆಯ ಪ್ರಾರಂಭದ ಕಾರಣ ಪ್ರಯಾಣಿಕರ ಹಾಗೂ ಜನರ ನೀರಿನ ಬವಣೆ ನೀಗಿಸಲು ಅಸ್ಸಫಾ ಟ್ರಸ್ಟ್ ವತಿಯಿಂದ ಶುಕ್ರವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಯಿತು.
ಈ ಸಂದರ್ಭದಲ್ಲಿ ಡೋಂಗ್ರಿಸಾಬ ಗಿರಗಾಂವಿ, ರಪೀಕ ಪಕಾಲಿ, ಹಸನಡೋಂಗ್ರಿ ಹೊನ್ಯಾಳ, ಸಲೀಂ ಅಹಮದಾಬಾದ, ದಸ್ತಗೀರ ಕಾಖಂಡಕಿ, ಅಸ್ಸಫಾ ಟ್ರಸ್ಟ್ ಅಧ್ಯಕ್ಷ ಚಾಂದ ಗಿರಗಾಂವಿ, ಸಲೀಂ ಸಾರವಾಡ, ಜಾವೀದ ಬೀಳಗಿ, ನಜೀರ ಕಾಜಿ, ಅಬ್ಬು ಪಕಾಲಿ, ರಿಯಾಜ ಕಂಕರಪೀರ, ಜಹೀರ ಕಡ್ಡಾ ಹಾಗೂ ಇತರರು ಇದ್ದರು.