ಅಸ್ವಸ್ಥ ಹದ್ದಿನ ಗಂಟಲು ದ್ರವ ಪ್ರಯೋಗಾಲಯಕ್ಕೆ ರವಾನೆ


ಉಡುಪಿ, ಜ.೧೪- ಅಸ್ವಸ್ಥಗೊಂಡು ಹಾರಲಾಗದೆ, ಅಸಹಾಯಕ ಸ್ಥಿತಿಯಲ್ಲಿ ಬ್ರಹ್ಮಗಿರಿಯಲ್ಲಿ ಬುಧವಾರ ಪತ್ತೆಯಾದ ಹದ್ದಿನ ಗಂಟಲು ದ್ರವವನ್ನು ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಮಂಗಳೂರು ಪ್ರಯೋಗಲಾಯಕ್ಕೆ ರವಾನಿಸಲಾಗಿದೆ.
ಹದ್ದು ಪತ್ತೆಯಾದ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಹದ್ದು ಪಕ್ಷಿಯನ್ನು ರಕ್ಷಿಸಿ, ಬೈಲೂರು ಪಶು ಚಿಕಿತ್ಸಾಲಯದಲ್ಲಿ ಚಿಕಿತ್ಸೆಗೆ ಒಳಪಡಿಸಿದ್ದರು. ಬಳಿಕ ಹದ್ದನ್ನು ಅರಣ್ಯ ರಕ್ಷಕ ಕೇಶವ ಪೂಜಾರಿ ಅವರಿಗೆ ಹಸ್ತಾಂತರಿಸಿದರು. ಹದ್ದಿಗೆ ಹಕ್ಕಿಜ್ವರದ ಯಾವುದೇ ಲಕ್ಷಣಗಳಿಲ್ಲ. ರೆಕ್ಕೆಗೆ ಆಗಿರುವ ಗಾಯದಿಂದ ಹಾರಲಾಗದೆ ಮತ್ತು ಆಹಾರ ಸಿಗದೆ ನಿತ್ರಾಣಗೊಂಡು ಅಸ್ವಸ್ಥಗೊಂಡಿದೆ. ಮುನ್ನೆಚ್ಚರಿಕೆಗಾಗಿ ಹದ್ದಿನ ಗಂಟಲು ದ್ರವವನ್ನು ಮಂಗಳೂರು ಪ್ರಯೋಗಲಯಕ್ಕೆ ರವಾನಿಸಲಾಗುವುದು ಎಂದು ಪಶುವೈದ್ಯ ಡಾ.ಮಹೇಶ್ ಶೆಟ್ಟಿ ತಿಳಿಸಿದ್ದಾರೆ.