ಅಸ್ಪøಶ್ಯತೆ ನಿವಾರಣೆ ಮಾನಸಿಕ ಬದಲಾವಣೆಯಿಂದ ಸಾಧ್ಯ

ಕಲಬುರಗಿ,ಮಾ.16:ಜಾತಿ, ಅಸ್ಪøಶ್ಯತೆ ಕೇವಲ ಕಾನೂನಿನಿಂದ ನಿವಾರಣೆ ಮಾಡಲು ಸಾಧ್ಯವಿಲ್ಲ ಅದರ ಜೊತೆಗೆ ಮಾನಸಿಕ ಬದಲಾವಣೆ ಮುಖ್ಯವೆಂದು ಹಿರಿಯ ಸಿವಿಲ್ ನಾಯ್ಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸುಶಾಂತ ಚೌಗಲೆ ಅವರು ಹೇಳಿದರು.

  ಗುರುವಾರದಂದು ನಗರದ ಸರಕಾರಿ ಪದವಿ (ಸ್ವಾಯತ್ತತೆ) ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ನಡೆದ ಅಸ್ಪøಶ್ಯತೆ ನಿವಾರಣೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ದೌರ್ಜನ್ಯ ಪ್ರತಿಬಂಧ ಅಧಿನಿಯಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸಮಾನತೆಯ ತತ್ವವನ್ನು ಮನೆಯಿಂದಲೇ ಪ್ರಾರಂಭಿಸಬೇಕು. ಪೆÇೀಷಕರು, ಶಿಕ್ಷಕರು ಮಕ್ಕಳಿಗೆ ಈ ದಿಸೆಯಲ್ಲಿ ಅಗತ್ಯ ಮಾರ್ಗದರ್ಶನ ಮಾಡಬೇಕು.ವರದಕ್ಷಿಣೆ, ಪೆÇಕ್ಸೊ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದು ಕಳವಳಕಾರಿ. ವಿದ್ಯಾರ್ಥಿ ಸಮುದಾಯ ದುಶ್ಚಟಗಳಿಂದ ದೂರವಿರಬೇಕು. ಪೆÇೀಷಕರು ಕಟ್ಟಿಕೊಂಡ ಕನಸು ನನಸುಮಾಡಲು ನಿರಂತರವಾಗಿ ಓದಬೇಕೆಂದು ತಿಳಿಸಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ ಮಾತನಾಡಿ, ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳು ಗತಿಸಿದರೂ ಜಾತಿ, ಅಸ್ಪøಶ್ಯತೆ ಇನ್ನೂ ಜೀವಂತ ಇದೆ. ವಿದ್ಯಾವಂತರಲ್ಲಿಯೇ ಅಸ್ಪøಶ್ಯತೆ ಆಚರಣೆ ಕಂಡುಬರುತ್ತಿದೆ. ಇಂದಿಗೂ ಕೆಲವೆಡೆ ದೇವಾಲಯ, ಹೊಟೇಲ್, ಕೆರೆ, ಬಾವಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ದಲಿತರಿಗೆ ಪ್ರವೇಶ ಇಲ್ಲ. ಬುದ್ದ, ಬಸವ, ಗಾಂಧಿ, ಫುಲೆ ಸೇರಿದಂತೆ ಅನೇಕ ಮಹಾತ್ಮರು ಸಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ್ದಾರೆ. ಆದರೂ ಅವರ ಕನಸು ನನಸಾಗಿಲ್ಲ ವಿಶೇಷ ಉಪನ್ಯಾನ ನೀಡಿದರು.

ಮುಖ್ಯ ಅತಿಥಿಗಳಾಗಿ ಸರಕಾರಿ ಪದವಿ ಮಹಾವಿದ್ಯಾಲಯ ಪ್ರಾಂಶುಪಾಲರು ಡಾ. ಶಂಕರಪ್ಪ ಹತ್ತಿ, ಮುಖ್ಯ ಅತಿಥಿಗಳಾಗಿ ಡಿ.ವೈ.ಎಸ್.ಪಿ. ಉಮೇಶ ಚಿಕ್ಕಮಠ, ಜಾಗೃತಿ ಸಮಿತಿ ಸದಸ್ಯರಾದ ಡಾ.ಜಿ. ಗೋಪಾಲರಾವ ತೇಲಂಗಿ, ಚೆನ್ನಪ್ಪ ಸುರಪುರಕರ, ಅನೀಲ ಜಾಧವ, ಸಿದ್ಧಾರೂಢ ಸಮತಾ ಜೀವನ್À ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ. ಶುಭ ಸ್ವಾಗತಿಸಿದರು. ಕೋಡ್ಲಿ ವಸತಿ ಶಾಲೆ ಪ್ರಾಂಶುಪಾಲ ಡಾ. ರಾಜಶೇಖರ ಮಾಂಗ್ ನಿರೂಪಿಸಿದರು.