ಅಸ್ಪøಶ್ಯತೆ ನಿರ್ಮೂಲನೆಯಾಗದೆ ಸ್ವಾಸ್ಥ್ಯ ಸಮಸಮಾಜ ಅಸಾಧ್ಯ: ಡಾ. ಶಿವಾನಂದ

ಆಳಂದ:ಜ.20: ಅಸ್ಪೃಶ್ಯತೆ ಎನ್ನುವುದು ಒಂದು ಸಮಾಜದ ಪಿಡುಗಾಗಿದ್ದು ಅದನ್ನು ತೊಲಗಿಸದ ಹೊರತು ಸಂವಿಧಾನದ ಆಸೆಯವಾದ ಎಲ್ಲರಿಗೂ ಸಮಬಾಳು ಎಲ್ಲರಿಗೂ ಸಮಪಾಲು ಎಂಬ ಆಸೆಯದಂತೆ ಸಮಸಮಾಜ ನಿರ್ಮಾಣ ಅಸಾಧ್ಯವಾದದ್ದು ಎಂದು ಡಾ. ಶಿವಾನಂದ ಎಂ ಭೂಸನೂರ ಹೇಳಿದರು.

ತಾಲೂಕಿನ ಪಡಸಾವಳಿ ಗ್ರಾಮದಲ್ಲಿ ಕರ್ನಾಟಕ ಸರ್ಕಾರ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಹಾಗೂ ಸ್ಫೂರ್ತಿ ಗ್ರಾಮೀಣಾಭಿವೃದ್ದಿ ಮತ್ತು ಶಿಕ್ಷಣ ಸೇವಾ ಸಂಸ್ಥೆ (ರಿ ) ಕಡಗಂಚಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಸ್ಪøಶ್ಯತಾ ನಿಮೂರ್ಲನೆ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷ ಅಂದಪ್ಪ ವಾಯ್ ಡೋಣಿ ಪ್ರಾಸ್ತವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಸವರಾಜ್ ಕಾಕಾ. ಅಶೋಕ ತೊಂಬ್ರೆ, ತುಕಾರಾಮ ಜಮಾದಾರ, ಲಕ್ಷ್ಮಣ ಪೆÇೀತೆ, ರಮೇಶ ಹತ್ತಗಲೇ, ಸೈಪಾನ್ ಪಟೇಲ್, ರಮೇಶ ಪಾಟೀಲ, ಖಂಡು ವಾಗಮೋರೇ, ತುಕಾರಾಮ ಜಮಾಧಾರ ಮತ್ತು ಗ್ರಾಮದ ಹಿರಿಯರು ಮುದ್ದು ಮಕ್ಕಳು ಅನೇಕ ಜನ ಪಾಲ್ಗೊಂಡಿದ್ದರು.

ಶ್ರೀ ಓಂ ಸಾಯಿ ಜನಜಾಗೃತಿ ಕಲಾ ಸಂಘ ಆಳಂದ ಅವರಿಂದ ಬೀದಿ ನಾಟಕ ಪ್ರದರ್ಶನ ಮಾಡಲಾಯಿತು. ಗಂಗೂಬಾಯಿ ಕಾರ್ಯಕ್ರಮ ನಿರೂಪಿಸಿದರು. ಶಶಿಕಾಂತ ವಂದಿಸಿದರು.