
ಲಿಂಗಸುಗೂರು,ಮಾ.೦೪- ತಾಲೂಕಿನ ಮೀಸಲು ಕ್ಷೇತ್ರದಲ್ಲಿ ಬಲಿತ ದಲಿತ ನಾಯಕರು ಸೋಗಲಾಡಿ ರಾಜಕಾರಣಿಗಳು ಅಸ್ಪೃಶ್ಯರ ಹೆಸರಿನಲ್ಲಿ ಮನುವಾದಿ ರಾಜಕೀಯ ನಾಯಕರಿಗೆ ಮುಂಬರುವ ೨೦೨೩ ವಿಧಾನಸಭಾ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕು ಎಂದು ನೇರವಾಗಿ ಬಲಿತ ದಲಿತ ನಾಯಕರಿಗೆ ಟಾಂಗ್ ನಿಡುವ ಮೂಲಕ ಮಾರ್ಮಿಕವಾಗಿ ಹೇಳಿದರು.
ಲಿಂಗಸುಗೂರು ತಾಲೂಕಿನಲ್ಲಿ ನಿನ್ನೆ ನಡೆದ ಛಲವಾದಿ ಜಿಲ್ಲಾ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಕ್ಷೇತ್ರದಲ್ಲಿ ಮೀಸಲಾತಿ ಬಲಾಢ್ಯರು ಕಬಳಿಸುವ ಹಂತದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಎಡಗೈ ಬಲಗೈ ಸಮುದಾಯದ ನಾಯಕರು ಮನಗಂಡು ಅನ್ಯಾಯ ಮಾಡುವ ನಮ್ಮ ಮೀಸಲಾತಿ ನಾವು ತೆಗೆದು ಕೊಂಡು ರಾಜಕೀಯ ಅಧಿಕಾರ ಚುಕ್ಕಾಣಿ ಹಿಡಿಯಲು ಮುಂದಾಗಬೇಕು ಎಂದು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಎಚ್.ಬಿ ಮುರಾರಿ ಇವರು ತಮ್ಮದೇ ಆದಂತಹ ವಿಶಿಷ್ಟ ರೀತಿಯಲ್ಲಿ ವಿಚಾರಗಳು ಹಂಚಿಕೊಂಡರು.
ಬಲಿತ ದಲಿತರ ಮಧ್ಯೆ ಅಸ್ಪೃಶ್ಯರ ರಾಜಕೀಯ ನಲುಗಿದೆ ಏಕೆಂದರೆ ಇಲ್ಲಿರುವ ಬಲಿತ ದಲಿತರು ಹಣದ ದರ್ಪದಿಂದ ಚುನಾವಣೆ ಎದುರಿಸಲು ಚಿಂತನೆ ನಡೆಸಿದ್ದಾರೆ ಎಂದು ತಿಳಿದಿದ್ದರೂ ಕೂಡ, ನಮ್ಮ ಸಮುದಾಯದ ಜನಾಂಗಕ್ಕೆ ಅನ್ಯಾಯ ಆಗುತ್ತಿದರು ಮಾದಿಗ ಛಲವಾದಿ ಬಂಧುಗಳು ಕಣ್ಣು ಮುಚ್ಚಿಕೊಂಡು ಕುಳಿತು ಕೊಳ್ಳುವ ಮೂಲಕ ಅಧಿಕಾರ ಚುಕ್ಕಾಣಿ ಹಿಡಿಯಲು ವಿಫಲರಾಗಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.
ಮುಂಬರುವ ೨೦೨೩ ರ ವಿಧಾನಸಭಾ ಚುನಾವಣೆಯಲ್ಲಿ ಮಾದಿಗ ಛಲವಾದಿ ಬಂಧುಗಳು ಅಂಬೇಡ್ಕರರ ಎರಡು ಕಣ್ಣುಗಳು ಇದ್ದಂತೆ ಅದಕ್ಕಾಗಿ ಎರಡು ಸಮುದಾಯಗಳ ಮುಖಂಡರು ರಾಜಕೀಯ ನಾಯಕರು ಒಗ್ಗಟ್ಟಿನಿಂದ ಹೋರಾಟ ಮಾಡಿ ನಮ್ಮ ಹಕ್ಕನ್ನು ಕಿತ್ತುಕೊಳ್ಳುವ ಮುಖಾಂತರ ನಮ್ಮ ಸಮಾಜಕ್ಕೆ ರಾಜಕೀಯ ಸ್ಥಾನಮಾನ ಅಧಿಕಾರ ಪ್ರಬಲರಾಗಿ ಬೆಳೆಯಬೇಕು ಎಂದು ಕರೆ ನೀಡುವ ಮುಖಾಂತರ ಮೆಲುಕು ಹಾಕಿದರು.
ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾದ ರಾಜ್ಯ ಅಧ್ಯಕ್ಷ ಕೆ. ಶಿವರಾಂ, ಜಿಲ್ಲಾ ಅಧ್ಯಕ್ಷ ಕೆ. ನಾಗಲಿಂಗ ಸ್ವಾಮಿ, ರವಿಂದ್ರನಾಥ ಪಟ್ಟಿ, ರಾಮಕೃಷ್ಣ, ಬಿ. ರಮೇಶ್, ಲಿಂಗಪ್ಪ ಪರಂಗಿ, ಸಂಜೀವ ಛಲವಾದಿ, ಪಂಪಾಪತಿ ಪರಂಗಿ, ವಕೀಲರು ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.