ಅಸ್ಪಶ್ರ್ಯತಾ ನಿವಾರಣೆ ಅರಿವು ಕಾರ್ಯಕ್ರಮದ ತರಬೇತಿ ಕಾರ್ಯಗಾರ ಉದ್ಘಾಟನೆ

ಬೀದರ: ಡಿ.1:ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೀದರ ವತಿಯಿಂದ 2021-22ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಹಾಗೂ ಗಿರಿಜನ ಉಪಯೋಜನೆಯಡಿ ಸಾಮಾಜಿಕ ಅರಿವು ಸಾಂಸ್ಕøತಿಕ ಕಾರ್ಯಕ್ರಮದ ಅಸ್ಪಶ್ಯತಾ ನಿವಾರಣೆ ಅರಿವು ಕಾರ್ಯಕ್ರಮ 2-3 ಬೀದಿ ನಾಟಕಗಳ ಪ್ರದರ್ಶನದ ತರಬೇತಿ ಕಾರ್ಯಗಾರ ಇಂದು ಪೂಜ್ಯ ಚನ್ನಬಸವ ಪಟ್ಟದೇವರು ರಂಗಮಂದಿರ ಬೀದರದಲ್ಲಿ ದೀಪ ಬೆಳಗಿಸುವದರೊಂದಿಗೆ ಉದ್ಘಾಟನೆ ಮಾಡಲಾಯಿತು.
ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆಯವರು ಮಾತನಾಡಿದರು
ತರಬೇತಿ ಕಾರ್ಯಗಾರದ ಉದ್ಘಾಟನಕಾರರಾಗಿ ಆಗಮಿಸಿದ ಹಿರಿಯ ರಂಗಭೂಮಿ ಕಲಾವಿದರಾದ ಚಂದ್ರಗುಪ್ತ ಚಾಂದಕವಾಟೆಯವರು ದೀಪ ಬೆಳೆಗಿಸುವುದರೊಂದಿಗೆ ಉದ್ಘಾಟನೆ ಮಾಡಿ ಮಾತನಾಡುತ್ತ ನಾಟಕಗಳು ಇತ್ತಿಚಿಗೆ ನೆನಗುದಿಗೆ ಬಿದ್ದಿರುತ್ತವೆ. ನಾಟಕಗಳು ಮತ್ತೆ ಸಮಾಜ ಪರಿವರ್ತನೆಗಾಗಿ ಅವಶ್ಯಕವಾಗಿವೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಸಂಗ್ರಾಮ ಇಂಗಳೆಯವರು ಮಾತನಾಡುತ್ತ ದಲಿತರನ್ನು ಮೊದಲು ಸಮಾಜದಲ್ಲಿ ಬಹಳಕೀಳಾಗಿ ನೋಡಿಕೊಳ್ಳುತ್ತಿದ್ದರು. ಸಮಾಜದಲ್ಲಿ ಎರಡೆ ಜಾತಿ ಇರುತ್ತವೆ ಅವುಗಳೆಂದರೆ ಒಂದು ಗಂಡು ಮತ್ತೊಂದು ಹೆಣ್ಣು ಸಮಾಜದಲ್ಲಿ ಇರುವ ಎಲ್ಲರೂ ಒಂದೇ ಎಂದು ಸಂದೇಶ ಹೇಳಿದರು.
ಹಿರಿಯ ಜಾನಪದ ಕಲಾವಿದರಾದ ಶಂಭುಲಿಂಗ ವಾಲ್ದೊಡ್ಡಿಯವರು ಮಾತನಾಡುತ್ತ ಜೀವ ಕುಲಕ್ಕೆ ಜನ್ಮ ಕೊಡುವ ಜೀವಕ್ಕೆ ಅಪವಿತ್ರ ಎನ್ನುವುದು ತಪ್ಪು ಭಾರತೀಯರು ನಾವು ಎಂದೆದಿಗೂ ಒಂದೇ ಎನ್ನುವ ಹಾಡುಗಳನ್ನು ಹಾಡಿ ಕಾರ್ಯಗಾರದಲ್ಲಿರುವ ಎಲ್ಲರಿಗೂ ಮನಮುಟ್ಟುವಂತೆ ಮಾಹಿತಿ ನೀಡಿದರು.
ರಂಗಭೂಮಿ ಕಲಾವಿದರರಾದ ಎಸ್.ಎಂ ಜನವಾಡಕರ ಅವರು ಮಾತನಾಡುತ್ತ ಮನಷ್ಯರಿದ್ದರೂ ಆದರೆ ಜಾತಿಗಳಿರಲಿಲ್ಲ. ಜಾತಿ ಅನ್ನೋ ಭಾವನೆ ಕಾನೂನಿನಿಂದ ತೆಗೆಯುವ ಕೂಡ ಕಷ್ಟ ಸಾದ್ಯ ಇತ್ತಿಚಿಗೆ ಜನರು ಮೋಬೈಲ್ ಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಅದನ್ನು ಬಿಟ್ಟು ನಾಟಕಗಳಲ್ಲಿ ಹೆಚ್ಚು ಸಮಯ ಕಳೆಯಬೇಕು ಎಂದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಹಿರಿಯ ಸಾಹಿತಿ ಪಾರ್ವತಿ ಸೋನಾರೆ, ಕಲಾವಿದರಾದ ಸುನೀಲ ಕಡ್ಡೆ ನಾಟಕ ತಂಡದ ಸಂಘಟಕರಾದ ದೇವದಾಸ ಚೀಮಕೋಡ ಮತ್ತು 50 ಕ್ಕೂ ಹೆಚ್ಚು ಕಲಾವಿದರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ ಸುಧಾಕರ ಎಲ್ಲಾನೋರ ಅವರು ನಡೆಸಿಕೊಟ್ಟರು