ಅಸ್ಪಶ್ಯರಿಗೆ ಟಿಕೆಟ್ ನೀಡಿದರೆ ಗೆಲವು ಖಚಿತ

ದುರಗಪ್ಪ ಹೊಸಮನಿ
ಲಿಂಗಸುಗೂರು,ಜ.೦೪- ರಾಯಚೂರು ಜಿಲ್ಲೆ ಲಿಂಗಸುಗೂರು ವಿಧಾನ ಸಭಾ ಕ್ಷೇತ್ರ ಮೀಸಲು ಕ್ಷೇತ್ರವಾಗಿದ್ದರಿಂದ ಕಳೆದ ೧೫ ವರ್ಷಗಳಿಂದ ಮೂಲ ಅಸ್ಪಶ್ಯರಿಗೆ ಟಿಕೆಟ್ ವಂಚಿತಕೊಂಡು ಅಸ್ಪಶ್ಯರನ್ನು ಯಾರು ಕೇಳದಂತೆ ಕ್ಷೇತ್ರದಲ್ಲಿ ಕಂಡುಬರುತ್ತದೆ. ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು ೪೦ ಸಾವಿರ ಮತಗಳ ಮಾದಿಗ ಸಮುದಾಯ ಹೊಂದಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು ಕೂಡ ಯಾವು ಪಕ್ಷವು ಕೂಡ ಟಿಕೆಟ್ ನೀಡಲು ಮುಂದೆ ಬರುತ್ತಿಲ್ಲ ಎಂದು ಮಾದಿಗ ಸಮುದಾಯದ ಮುಖಂಡರು ಮಾತನಾಡುತ್ತಿದ್ದಾರೆ.
೨೦೨೩ರ ಚುನಾವಣೆ ಅಸ್ಪಶ್ಯರಿಗೆ ಟಿಕೆಟ್ ನೀಡದೆ ಹೋದರೆ ಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೆವೆ ಎಂದು ದಲಿತ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಕಾಂಗ್ರೆಸ್ ಟಿಕೇಟ್‌ಗಾಗಿ ಮೂಲ ಅಸ್ಪಶ್ಯರಾದ ಮಾಜಿ ಕೆಪಿಸಿಸಿ ಕಾರ್ಯದರ್ಶಿ ಎಚ್,ಬಿ ಮುರಾರಿ, ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್ ಕಾಂಗ್ರೆಸ್ ಹೈಕಮಂಡ್‌ಗೆ ಒತ್ತಾಯ ಮಾಡಿದ್ದಾರೆ. ಆದ ಕಾರಣ ಜಿಲ್ಲೆಯ ಕಾಂಗ್ರೆಸ್ ನಾಯಕರು ಸ್ಥಳಿಯ ಮೂಲ ಅಸ್ಪಶ್ಯರಿಗೆ ಟಿಕೆಟ್ ನೀಡಿದರೆ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯ ದೊರಕಿಸಿ ಕೊಟ್ಟಂತ್ತಾಗುತ್ತದೆ.
ಲಿಂಗಸುಗೂರು ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ವಲಸಿಗರ ಶಾಪ : ಮೀಸಲು ಕ್ಷೇತ್ರದಲ್ಲಿ ೨೦೦೮ರಿಂದ ವಲಸಿಗರೆ ಹೆಚ್ಚಾಗಿದ್ದು. ಕ್ಷೇತ್ರದಲ್ಲಿ ಹೈದಿನೈದು ವರ್ಷಗಳಿಂದ ಈ ಕ್ಷೇತ್ರದ ಜನರ ಬದಕು ಬದಲಾವಣೆ ಯಾಗಿಲ್ಲ, ನೀರುದ್ಯೊಗ ಸಮಸ್ಯೆ, ಬಡತನ ಸಮಸ್ಯೆಗಳ ತುಂಬಿರುವ ಕ್ಷೇತ್ರವಾಗಿದೆ, ದುಡ್ಡು ಸುರಿದು ಶಾಸಕರಾಗಿ ಕ್ಷೇತ್ರದಲ್ಲಿ ಅಭಿವೃದ್ದಿ ಕುಂಠಿತಕೊಂಡಿವೆ ಎಂದು ರಾಜಕೀಯ ಚಿಂತಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.
ವಲಸಿಗ ಶಾಸಕರಾಗಿ ಮೂರು ಅವಧಿಯಲ್ಲಿ ಮರೆದು ಮಾಯವಾದರೆ ಹೋರತು ತಮ್ಮನ್ನು ಗೆಲ್ಲಿಸದ ಮತದಾರರ ಸಮಸ್ಯೆಗಳ ಸ್ಪಂದಿಸದೆ ಬಿಜೆಪಿ, ಕಾಂಗ್ರೆಸ್ ಪಕ್ಷದ ನಾಯಕರು ಸಾರ್ವಜನಿಕವಾಗಿ ಮಧಗಜಗಳಂತೆ ವರ್ತಿಸಿದ ನಾಯಕರ ವಿರುದ್ದ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಈ ಕ್ಷೇತ್ರದ ಮಗನಾದ ಕೆಪಿಸಿಸಿ ಕಾರ್ಯದರ್ಶಿ ಎಚ್.ಬಿ ಮುರಾರಿ ಅವರು ರಾಹುಲ್ ಗಾಂಧಿ ಪ್ರೇರಣೆಯಿಂದ ಕ್ಷೇತ್ರದಲ್ಲಿ ಭಾರತ ಜೋಡೊ ಯಾತ್ರೆ ಆರಂಭ ಮಾಡಿ ಕ್ಷೇತ್ರದ ಮತದಾರರಲ್ಲಿ ಮನೆ ಮಾಡಿದ್ದಾರೆ. ಕ್ಷೇತ್ರದ ಋಣ ತೀರಿಸಲು ಒಂದು ಸಲ ಅವಕಾಶ ನೀಡಬೇಕೆಂದು ಹೈಕಮಂಡ್‌ಗೆ ಮನವಿ ಮಾಡಿದ್ದಾರೆ.
ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್ ಅವರು ಕ್ಷೇತ್ರದಲ್ಲಿ ಸಂಚಾರ ಮಾಡಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಇವರು ಕೂಡ ಟಿಕೆಟ್ ಆಕ್ಷಾಂಕ್ಷಿ ಆಗಿದ್ದು ಇವರು ಸಹ ಕಾಂಗ್ರೆಸ್ ಹೈಕಮಾಂಡ್‌ಗೆ ಮೂಲ ಅಸ್ಪಶ್ಯರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ.
ಮಾಜಿ ಸಚಿವ ಆಲ್ಕೋಡ್‌ರವರು ೨೦೦೬-೦೭ರಲ್ಲಿ ಸಮಿಶ್ರ ಸರ್ಕಾರದ ಆಡಳಿತದಲ್ಲಿ ಕ್ರೀಡಾ ಯುವಜನ ಸಚಿವರಾಗಿ ಜಿಲ್ಲೆಯ ಉಸ್ತುವಾರಿಯಾಗಿ ಜಿಲ್ಲೆಯಲ್ಲಿ ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಿ ಜನನಾಯಕರಾಗಿ ಜಿಲ್ಲೆಯ ಜನರ ನಾಡಿಮಿಡಿತ ಬಲ್ಲವರು ಇದರಿಂದ ಲಿಂಗಸುಗೂರು ಮೀಸಲು ಕ್ಷೇತ್ರದಲ್ಲಿ ಅಭಿವೃದ್ದಿ ಪರ ಚಿಂತನೆ ಮಾಡುವ ಮೂಲ ಅಸ್ಪಶ್ಯರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಬೇಕೆಂದು ಜನರ ಅಭಿಪ್ರಾಯವಾಗಿದೆ.