ಅಸ್ಥಿಪಂಜರ ಪತ್ತೆ


ಮಂಗಳೂರು, ನ.೨೫- ಬರ್ಕೆ ಅರಕ್ಷಕ ಠಾಣೆಯ ವ್ಯಾಪ್ತಿಯ ಮಣ್ಣಗುಡ್ಡೆ ಬಳಿ ವ್ಯಕ್ತಿಯೊಬ್ಬರ ಅಸ್ಥಿಪಂಜರ ಶುಕ್ರವಾರ ಪತ್ತೆಯಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ.
ಬರ್ಕೆ ಅರಕ್ಷಕ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮಣ್ಣಗುಡ್ಡೆ ಹೋಟೆಲ್ ದುರ್ಗಮಹಲ್ ಮುಂಭಾಗದ ರಸ್ತೆ ಸಮೀಪದ ಪಾಲುಬಿದ್ದ ಮನೆಯ ಅಂಗಳಲದಲ್ಲಿ ಅಸ್ಥಿಪಂಜರ ಪತ್ತೆಯಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ  ಬರ್ಕೆ ಠಾಣಾ ಪೋಲಿಸರು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.