
ಕಲಬುರಗಿ:ಮೇ.3: ವ್ಯಕ್ತಿಗೆ ಉಂಟಾಗುವ ವಯೋಸಹಜ ಕಾಯಿಲೆಗಳಲ್ಲಿ ಅಸ್ಥಮಾ ಕಾಯಿಲೆಯು ಪ್ರಮುಖವಾಗಿದ್ದು, ಪ್ರಸ್ತುತವಾಗಿ ಯುವ ವಯಸ್ಕರಲ್ಲಿ ಕೂಡಾ ಕಂಡುಬುರುತ್ತಿದೆ. ಕೊವಿಡ್ ಸಂದರ್ಭದಲ್ಲಿ ಅಸ್ಥಮಾ ಪೀಡಿತರು ಹೆಚ್ಚಿನ ತೊಂದರೆಯನ್ನು ಅನುಭವಿಸುವಂತಾಯಿತು. ಇದು ಧೂಳು, ಮಾಲಿನ್ಯ, ಜಂಕ್‍ಪುಡ್‍ಗಳ ಸೇವನೆ, ಅನಾರೋಗ್ಯಕರ ಜೀವನಶೈಲಿಯಿಂದ ಉಂಟಾಗುತ್ತಿದ್ದು, ಅದರ ಬಗ್ಗೆ ನಿರ್ಲಕ್ಷ್ಯವಹಿಸದೆ ಮುಂಜಾಗೃತೆ ವಹಿಸಿ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ವೈದ್ಯಾಧಿಕಾರಿ ಡಾ.ಅನುಪಮಾ ಕೇಶ್ವಾರ ಹೇಳಿದರು.
ನÀಗರದ ಶೇಖರೋಜಾದಲ್ಲಿರುವ ಶಹಬಜಾರ ‘ನಗರ ಪ್ರಾಥಮಿಕ ಆರೋಗ್ಯ’ ಕೇಂದ್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಬುಧವಾರ ಜರುಗಿದ ‘ವಿಶ್ವ ಅಸ್ಥಮಾ ದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.
ಅಸ್ಥಮಾ ಶ್ವಾಶಕೋಶಕ್ಕೆ ತೊಂದರೆಯನ್ನು ಉಂಟುಮಾಡುತ್ತದೆ. ಉಬ್ಬಸ, ದಮ್ಮು, ಕೆಮ್ಮು ಇದರ ಲಕ್ಷಣಗಳಾಗಿದ್ದು ಅದಕ್ಕೆ ಸಂಬಂಧಿಸಿದಂತೆ ಸೂಕ್ತ ಚಿಕಿತ್ಸೆ ಪಡೆಯಬೇಕು. ಇದು ವಿಶೇಷವಾಗಿ ಮಹಿಳೆಯರು, ಮಕ್ಕಳಿಗೆ ಹೆಚ್ಚು ತೊಂದರೆಯನ್ನು ಉಂಟುಮಾಡುತ್ತದೆ. ಗರ್ಭಿಣಿಯರು ವಿಶೇಷವಾದ ಕಾಳಜಿ ವಹಿಸಬೇಕು. ಆರೋಗ್ಯಕರ ಜೀವನಶೈಲಿ, ಹೆಚ್ಚು ಕೊಬ್ಬುಯುಕ್ತ ಆಹಾರದೆ ಸೇವನೆ ಮಾಡದಿರುವುದು, ಯೋಗ, ಪ್ರೋಟಿನಯುಕ್ತ ಆಹಾರ ಹೆಚ್ಚಿನ ಸೇವನೆ, ಋತಮಾನಕ್ಕೆ ತಕ್ಕಂತೆ ಆಹಾರದ ಸೇವನೆ, ಬಿಸಿನೀರು ಸೇವನೆಯಂತಹ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಅಸ್ಥಮಾ ಬರದಂತೆ ನೋಡಿಕೊಳ್ಳಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ದೇವೇಂದ್ರಪ್ಪ ಗಣಮುಖಿ, ಬಬು ಜಾಧವ, ಗಂಗಾಜ್ಯೋತಿ ಗಂಜಿ, ಮಂಗಲಾ ಚಂದಾಪುರೆ, ಅರ್ಚನಾ ಸಿಂಗೆ, ಜಗನ್ನಾಥ ಗುತ್ತೇದಾರ, ನಾಗಮ್ಮ ಚಿಂಚೋಳಿ ಸೇರಿದಂತೆ ಇನ್ನಿತರರಿದ್ದರು.