ಅಸ್ತಮಾ ಯಜ್ಞ ರದ್ದು

ಲಕ್ಷ್ಮೇಶ್ವರ, ಮೇ29 ಃ ದಿ. ವೈದ್ಯ ಬಾಬುರಾವ್ ಅವರ ಸಾಮಾಜಿಕ ಕಳಕಳಿಯ ಹಾಗೂ ಪಟ್ಟಣದ ಹೆಮ್ಮೆಯ ವಿಷಯವಾಗಿದ್ದ ಪ್ರತಿವರ್ಷ ಜೂನ್ 8 ರಂದು ಅಸ್ತಮಾ ರೋಗಿಗಳಿಗೆ ನೀಡಲಾಗುತ್ತಿದ್ದ ಉಚಿತ ಮಂತ್ರೌಷಧಿ ಕಾರ್ಯಕ್ರಮವನ್ನು ಕೊರೊನಾ ಹಿನ್ನಲೆಯಲ್ಲಿ ರದ್ದು ಪಡಿಸಲಾಗಿದೆ ಎಂದು ಪಲ್ಲಣ್ಣನವರು ಕುಲಕರ್ಣಿ ಹಾಗೂ ಡಾ.ಹರೀಶ ಕುಲಕರ್ಣಿ ಹೇಳಿದ್ದಾರೆ.
ಈ ಕುರಿತು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಪಟ್ಟಣದಲ್ಲಿ ಕಳೆದ 55 ವರ್ಷಗಳಿಂದ ಅಸ್ತಮಾ ರೋಗಿಗಳಿಗೆ ಉಚಿತವಾಗಿ ಮಂತ್ರೌಷಧಿಯನ್ನು ವಿತರಿಸುವ ಮೂಲಕ ಲಕ್ಷ್ಮೇಶ್ವರದ ಹೆಸರಿನ ಕೀರ್ತಿಯನ್ನು ದೇಶದ ಉದ್ದಗಲಕ್ಕೂ ಹಬ್ಬುವಂತೆ ಮಾಡಿದ್ದ ದಿ.ಡಾ.ವೈದ್ಯಬಾಬುರಾವ್ ಕುಲಕರ್ಣಿ ಇವರ ಅನುಪಸ್ಥಿತಿಯಲ್ಲಿ 55 ನೇ ವರ್ಷದ ಅಸ್ತಮಾ ಯಜ್ಞ ಯಶಸ್ವಿಯಾಗಿ ಜರುಗಿತ್ತು. ಆದರೆ ಕಳೆದ ಬಾರಿಯಂತೆ ಈ ಬಾರಿಯೂ ಎಲ್ಲೇಡೆ ಕೊರೊನಾ ಭೀತಿ ಇರುವದರಿಂದ ಹತ್ತಾರು ಸಾವಿರ ಜನರು ಸೇರುವ 57 ನೇ ವರ್ಷದ ಉಚಿತ ಔಷಧಿ ವಿತರಣೆಯ ಈ ಕಾರ್ಯಕ್ರಮವನ್ನು ರದ್ದು ಪಡಿಸಲಾಗಿದೆ ಎಂದು ಹೇಳಿದರು.
ದಿ.ವೈದ್ಯ ಬಾಬುರಾವ್ ಕುಲಕರ್ಣಿ ಅವರು ನಡೆಸಿಕೊಂಡು ಬರುತ್ತಿರುವ ಈ ಅಸ್ತಮಾಯಜ್ಞ ನಿರಂತರವಾಗಿ ನಡೆಯುವಂತೆ ಮಾಡುವದಕ್ಕಾಗಿ ಅವರ ಶಿಷ್ಯವೃಂದ ಸಿದ್ದತೆ ಮಾಡಿಕೊಂಡಿತ್ತು. ಆದರೆ ಬೇರೆ, ಬೇರೆ ರಾಜ್ಯ ಜಿಲ್ಲೆಗಳಿಂದ ಸಾವಿರಾರು ಜನರು ಸೇರುವದರಿಂದ ಕರೋನಾ ಭೀತಿ ಹರಡುವ ಸಂಭವ ಇರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರದ್ದು ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.