ಅಸ್ಟ್ರಾಜೆನಿಕಾ ಲಸಿಕೆಯಿಂದ ಅಡ್ಡ ಪರಿಣಾಮ

ಲಂಡನ್,ಏ.೩೦- ಅಸ್ಟ್ರಾಜೆನೆಕಾ ಸಂಸ್ಥೆ ಉತ್ಪಾದಿಸಿದ ಕೋವಿಡ್ ಲಸಿಕೆಯಲ್ಲಿ ಅಪರೂಪದ ಅನೇಕ ಅಡ್ಡ ಪರಿಣಾಮ ಉಂಟುಮಾಡಬಹುದು ಎಂದು ನ್ಯಾಯಾಲಯದ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ಇಂಗ್ಲೆಂಡ್‌ನ ಪ್ರಮುಖ ಪತ್ರಿಕೆ ಈ ವಿಷಯ ಹೊರಹಾಕಿದೆ
ನ್ಯಾಯಾಲಯದ ದಾಖಲೆಗಳ ಪ್ರಕಾರ, ಆಸ್ಟ್ರಾಜೆನೆಕಾ ಸಂಸ್ಥೆ ಉತ್ಪಾದನೆ ಮಾಡಿದ ಕೋವಿಡ್ ಲಸಿP ಪಡೆದ ೫೧ ಪ್ರಕರಣಗಳಲ್ಲಿ ಸಾವು ಮತ್ತು ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಿದೆ ಎನ್ನುವ ಸಂಗತಿ ಬಯಲಾಗಿದೆ.
ಅಸ್ಟ್ರಾಜೆನೆಕಾ ಸಂಸ್ಥೆ ಈ ಮಾಹಿತಿಯನ್ನು ವಿರೋಧಿಸಿದೆ. ಆದರೂ ಲಸಿಕೆ ಪಡೆದ ಮಂದಿಯಲ್ಲಿ ಅಡ್ಡ ಪರಿಣಾಮಗಳು ಹೆಚ್ಚು ಎನ್ನುವ ಸಂಗತಿ ನ್ಯಾಯಾಲಯದ ದಾಖಲೆಗಳಲ್ಲಿ ಇದೆ ಎಂದು ತಿಳಿಸಲಾಗಿದೆ.
ಫೆಬ್ರವರಿಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ ಕಾನೂನು ದಾಖಲೆಯಲ್ಲಿ, ಕೋವಿಡ್ ಲಸಿಕೆಯು “ಅಪರೂಪದ ಸಂದರ್ಭಗಳಲ್ಲಿ, ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್‌ನೊಂದಿಗೆ ಥ್ರಂಬೋಸಿಸ್ ಉಂಟುಮಾಡಬಹುದು” ಎನ್ನುವುದನ್ನು ಆಸ್ಟ್ರಾಜೆನೆಕಾ ಸಂಸ್ಥೆ ಒಪ್ಪಿಕೊಂಡಿದೆ, ಇದು ಲಸಿಕೆ ಪಡೆದ ಜನರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆಯಾಗಿದೆ. ರಕ್ತದ ಪ್ಲೇಟ್ಲೆಟ್ ಸಂಖ್ಯೆಯಲ್ಲಿ ಏರಿಳಿತವಾಗಲಿದೆ ಎನ್ನಲಾಗಿದೆ.
ಸೆರಂ ಸಂಸ್ಥೆ ನಿರಾಕರಣೆ
ಭಾರತದಲ್ಲಿ, ಲಸಿಕೆಯನ್ನು ಪುಣೆಯಲ್ಲಿರುವ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾತಯಾರಿಸಿದ ಕೋವಿಶೀಲ್ಡ್ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡಲಾಯಿತು ಈ ಬಗ್ಗೆ ಪ್ರತಿಕ್ರಿಯಿಸಲು ಸೆರಂ ಸಂಸ್ಥೆ ನಿರಾಕರಿಸಿದೆ.
ಆಸ್ಟ್ರಾಜೆನೆಕಾ ಲಸಿಕೆ ಪಡೆದಿದ್ದ ಜೇಮೀ ಸ್ಕಾಟ್, ಅವರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಮೆದುಳಿನ ಮೇಲೆ ರಕ್ತಸ್ರಾವಕ್ಕೆ ಕಾರಣವಾಗಿತ್ತು. ಜೊತೆಗೆ ಶಾಶ್ವತ ಮಿದುಳಿನ ಆರೋಗ್ಯ ಸಮಸ್ಯೆಗೂ ಕಾರಣವಾಗಿದೆ ಎನ್ನುವ ಸಂಗತಿ ಬಯಲಾಗಿದೆ.
ಅಸ್ಟ್ರಾಜೆನೆಕಾ-ಆಕ್ಸ್‌ಫರ್ಡ್ ಲಸಿಕೆಗೆ ಸಂಬಂಧಿಸಿದ ಇಂಗ್ಲೆಂಡ್‌ಣ ಆರೋಗ್ಯ ನಿಯಂತ್ರಕ ಸಂಸ್ಥೆ ಎಂಎಚ್ ಆರ್ ಎ ಅನುಮೋದನೆಯೊಂದಿಗೆ ೨೦೨೧ರ ಏಪ್ರಿಲ್‌ರಲ್ಲಿ ನವೀಕರಿಸಲಾಗಿತ್ತು. ಅದರಿಂದ ಅನೇಕ ಅಡ್ಡ ಪರಿಣಾಮ ಬೀರಿದೆ ಎಂದು ತಿಳಿಸಲಾಗಿದೆ.