ಅಸ್ಕಿ ಗ್ರಾಂಪಂ ಜೆಡಿಎಸ್ ಮಡಿಲಿಗೆಅಧ್ಯಕ್ಷರಾಗಿ ರಾಜೇಶ್ವರಿ ಉಪಾಧ್ಯಕ್ಷರಾಗಿ ಯಂಕಮ್ಮ ಅವಿರೋಧ ಆಯ್ಕೆ

ತಾಳಿಕೋಟೆ:ಆ.6: ತಾಲೂಕಿನ ಅಸ್ಕಿ ಗ್ರಾಮದ ಗ್ರಾಂ ಪಂಚಾಯ್ತಿಯ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಕುರಿತು ಗುರುವಾರರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶ್ರೀಮತಿ ರಾಜೇಶ್ವರಿ ತಿಪ್ಪಣ್ಣ ಮಾದರ ಉಪಾಧ್ಯಕ್ಷರಾಗಿ ಶ್ರೀಮತಿ ಯಂಕಮ್ಮ ದೇವಿಂದ್ರ ಕಂಬಾರ ಅವರು ಅವಿರೋಧವಾಗಿ ಆಯ್ಕೆಯಾದರು.

ಪರಿಶಿಷ್ಠ ಜಾತಿಗೆ ಮಿಸಲಿಟ್ಟ ಅಧ್ಯಕ್ಷ ಸ್ಥಾನಕ್ಕೆ ರಾಜೇಶ್ವರಿ ಮಾದರ ಹಾಗೂ ಸಾಮಾನ್ಯ ಸ್ಥಾನಕ್ಕೆ ಮಿಸಲಿಟ್ಟ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಯಂಕಮ್ಮ ಕಂಬಾರ ಅವರು ಒಬ್ಬರೇ ನಾಮ ಪತ್ರ ಸಲ್ಲಿಸಿದರು. ಹೀಗಾಗಿ ಅಧ್ಯಕ್ಷರಾಗಿ ರಾಜೇಶ್ವರಿ ಮಾದರ ಉಪಾಧ್ಯಕ್ಷರಾಗಿ ಶ್ರೀಮತಿ ಯಂಕಮ್ಮ ಕಂಬಾರ ಅವರು ಅವಿರೋಧವಾಗಿ ಆಯ್ಕೆಗೊಳ್ಳಲು ಕಾರಣವಾಯಿತು.

ವಿಜಯೋತ್ಸವ

ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ(ಕು.ಸಾಲವಾಡಗಿ) ಹಾಗೂ ವಿಶ್ವನಾಥರಡ್ಡಿ ಬಿರಾದಾರ, ಮಹಾದೇವ ಮಾದರ, ಗೌಡಪ್ಪಗೌಡ ಹಳಿಮನಿ, ಸಂಗನಗೌಡ ಬಿರಾದಾರ, ಹಣಮಗೌಡ ಬಿರಾದಾರ, ಭೀಮನಗೌಡ ಚೌದ್ರಿ, ಗುರುಪಾದಪ್ಪ ಚಿ ಪಡಶೆಟ್ಟಿ, ನೇತೃತ್ವದಲ್ಲಿ ಆಯ್ಕೆಗೊಂಡ ನೂತನ ಅಧ್ಯಕ್ಷೆ ರಾಜೇಶ್ವರಿ ಮಾದರ ಹಾಗೂ ಉಪಾಧ್ಯಕ್ಷೆ ಶ್ರೀಮತಿ ಯಂಕಮ್ಮ ಕಂಬಾರ ಅವರು ಬೆಂಬಲಿಗರೊಂದಿಗೆ ಗುಲಾಲ್ ಎರಚಿ, ಪಟಾಕ್ಷೀ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಗೊಂಡ ಶ್ರೀಮತಿ ರಾಜೇಶ್ವರಿ ಮಾದರ ಉಪಾಧ್ಯಕ್ಷೆ ಶ್ರೀಮತಿ ಯಂಕಮ್ಮ ಕಂಬಾರ ಅವರಿಗೆ ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಅವರು ಸನ್ಮಾನಿಸಿ ಗೌರವಿಸಿದರು.