ಅಸ್ಕಿಹಾಳದಿಂದ ಯಕ್ಲಾಸಪೂರುಗೆ ಹೋಗುವ ರಸ್ತೆ ದುರಸ್ತಿಗೆ ಆಗ್ರಹ

ರಾಯಚೂರು, ಜು.೨೬- ಅಸ್ಕಿಹಾಳ ದಿಂದ ಯಕ್ಲಾಸಪೂರು ಮತ್ತು ಅರಬಮೊಹಲ್ಲಾದಿಂದ ಯಕ್ಲಾಸಪೂರುಗೆ ಹೋಗುವ ರಸ್ತೆಯನ್ನು ದುರಸ್ತಿಗೊಳಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಅಸ್ಕಿಹಾಳ ದಿಂದ ಯಕ್ಲಾಸಪೂರುಗೆ ಹೋಗುವ ರಸ್ತೆಯು ಚಿಕ್ಕದಾಗಿದ್ದು , ಈ ರಸ್ತೆಯನ್ನು ೬೦ ಫೀಟ್ ಅಗಲೀಕರಣ ಮಾಡುವುದಕ್ಕೆ ಅನುದಾನ ಮಂಜೂರಾಗಿದ್ದು ,ಸುಮಾರು ೨ ವರ್ಷಗಳು ಗತಿಸಿದರೂ ಗುತ್ತೇದಾರರು ಈ ರಸ್ತೆಯನ್ನು ದುರಸ್ತಿ ಮಾಡದೆ,ಹಾಗೆ ಬಿಟ್ಟಿದ್ದಾರೆ.ಕಳೆದ ವರ್ಷ ಮಳೆಗಾಲದಲ್ಲಿ ರಸ್ತೆ ಕಾಮಗಾರಿ ಮಾಡುತ್ತೇನೆಂದು ಒಂದು ಬದಿಯ ರಸ್ತೆಯ ಡಾಂಬರಿಕರಣವನ್ನು ಕಿತ್ತು ಹಾಕಿದ್ದು,ಉಳಿದ ಒಂದು ಭಾಗದ ರಸ್ತೆಯನ್ನು ಹಾಗೆ ಬಿಟ್ಟಿದ್ದಾರೆ ಎಂದು ದೂರಿದರು.
ರಸ್ತೆ ದುರಸ್ತಿ ಮಾಡದೇ ಇರುವುದರಿಂದ ಈ ರಸ್ತೆಯು ತುಂಬಾ ಹಾಳಾಗಿದೆ. ಈ ರಸ್ತೆಯಲ್ಲಿ ಯಾವುದೇ ವಾಹನಗಳು ಸಂಚರಿಸಬೇಕಾದರೆ ತುಂಬಾ ತೊಂದರೆಯನ್ನು ಆಗುತ್ತಿದೆ.ಕೂಡಲೇ ಈ ರಸ್ತೆ ದುರಸ್ತಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಅರಬಮೊಹಲ್ಲಾದಿಂದ ಯಕ್ಲಾಸಪೂರುಗೆ ಹೋಗುವ ರಸ್ತೆ ಮಾಡಲು ಸುಮಾರು ೧ ಕೋಟಿ ಅನುದಾನ ಮಂಜೂರಾಗಿದ್ದರು ಕೂಡ ರಸ್ತೆ ದುರಸ್ತಿಗೆ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಚನ್ನಬಸವ ಯಕ್ಲಾಸಪೂರು,ಚಿದಾನಂದ,ಲಕ್ಷ್ಮಣ,ಶರಣಪ್ಪ ದಿನ್ನಿ,ಈರಪ್ಪ ಗಣಮೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.