
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ ಜು. 20:: ಇತ್ತೀಚಿಗೆ ತಾಲೂಕಿನ ಬನ್ನಿಕಲ್ಲು ಗ್ರಾಮದ ಬಳಿ ವಿಷ ಭರಿತ ಕೊಳೆತ ದಾಳಿಂಬೆ ಹಣ್ಣು ತಿಂದು 90 ಕುರಿಗಳು ಅಸು ನೀಗಿದ ಹಿನ್ನೆಲೆಯಲ್ಲಿ ತಹಸಿಲ್ ಕಚೇರಿ ಬಳಿ ಪರಿಹಾರ ಒತ್ತಾಯಿಸಿ ತಾಲೂಕು ಕುರುಬ ಸಂಘದಿಂದ ಇಂದು ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಬುಡ್ಡಿ ಬಸವರಾಜ್ ಮಾತನಾಡಿ ಸರ್ಕಾರ ಜಮೀನು, ಗೋಮಾಳ, ಕೆರೆ ಹಾಗೂ ಹಳ್ಳವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿರುವುದರಿಂದ ಕುರಿಗಾಯಿಗಳು ಕುರಿ ಗಳನ್ನು ಮೇಯಿಸಲು ತೊಂದರೆಯಾಗಿದೆ ಸರ್ಕಾರ ಕೂಡಲೇ ಒತ್ತುವರಿ ಜಾಗವನ್ನು ತೆರವುಗೊಳಿಸಬೇಕು ಅಸುನೀಗಿದ ಕುರಿಗಳಿಗೆ 10 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಮುಟ್ ಗನಹಳ್ಳಿ ಕೊಟ್ರೇಶ್,, ಧರ್ಮ ದರ್ಶಿ ಬಣಕಾರ್ ಗೊಣ್ಣೆಪ್ಪ, ಮೈಲಾರಪ್ಪ, ರಾಮಲಿಂಗಪ್ಪ, ಶಿವರಾಜ್, ಸೊನ್ನದ್ ಮಹೇಶ್, ಎಚ್. ಕೆ. ರಾಮು, ಪಂಪಪತಿ, ದಾನಪ್ಪ, ಕುರಿ ಜಂಬಣ್ಣ, ದೇವೆದ್ರಪ್ಪ ಚೌತಿಗಿ ಉಮೇಶ್, ಉಲವತ್ತಿ ಕೊಟ್ರೇಶ್, ಪರುಶುರಾಮ ಇತರರಿದ್ದರು
Attachments area