ಅಸೀಫ್ ಅಲಿಗೆ ಪಿಎಚ್‍ಡಿ

ಬೀದರ್ :ಆ.2: ಬೀದರ್ ತಾಲೂಕಿನ ಬಗದಲ್ ಗ್ರಾಮದ ಮೊಹ್ಮದ್ ಅಸೀಫ್ ಅಲಿ ಮೊಹ್ಮದ್ ಸರದಾರ್ ಅಲಿ ಅವರಿಗೆ ಇಂಗ್ಲಿಷ್ ಸಾಹಿತ್ಯದಲ್ಲಿ ಪಿಎಚ್‍ಡಿ ಪದವಿ ಲಭಿಸಿದೆ.

ಉತ್ತರ ಪ್ರದೇಶದ ಗಜರೌಲಾದ ವೆಂಕಟೇಶ್ವರ್ ವಿಶ್ವವಿದ್ಯಾಲಯದಿಂದ ಅಶೀಫ್ ಅಲಿ ಅವರಿಗೆ ಪಿಎಚ್‍ಡಿ ಲಭಿಸಿದೆ. ಅಸೀಫ್ ಅಲಿ ಅವರ ಸಂಶೋಧನಾ ಕೃತಿಯಾದ ‘ವಿ.ಎಸ್. ನೈಪೌಲ್ ಆಸ್ ಎ ಶಾರ್ಟ್ ಸ್ಟೋರಿ ರೈಟರ್ : ಎ ಕ್ರೀಟಿಕಲ್ ಸ್ಟಡಿ” ಸಂಶೋಧನಾ ಕೃತಿಗೆ ಪಿಎಚ್‍ಡಿ ಲಭಿಸಿದೆ. ವೆಂಕಟೇಶ್ವರ ವಿವಿಯ ಪ್ರೋಫೆಸರ್ ಡಾ.ಉಮಾಕಾಂತ್ ಎಸ್ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಕೃತಿಯನ್ನು ರಚಿಸಿದ್ದಾರೆ.

ಸಂಶೋಧನಾ ಕೃತಿ ರಚಿಸಲು ಹಾಗೂ ಪದವಿ ಲಭಿಸುವಲ್ಲಿ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಮತ್ತು ಡಾ.ಉಮಾಕಾಂತ್ ಪಾಟೀಲ್ ಅವರ ಸಹಕಾರ ಅಪಾರವಾಗಿತ್ತು ಎಂದು ಅಸೀಫ್ ಅಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.