ಅಸಿಂಧುಗೊಂಡ ಮತಕ್ಕೆ ಅದೃಷ್ಟ: ಸಮಬಲದ ಹೋರಾಟದಲ್ಲಿ ಮೇಲುಗೈ ಸಾಧಿಸಿದ ಜೆಡಿಎಸ್

ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ: ಆ.01:- ತಾಲ್ಲೂಕಿನ ಕೊಪ್ಪ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶೀಲಾ ಬೆಂಬಲಿತ ಅಭ್ಯರ್ಥಿ ಅಧ್ಯಕ್ಷರಾಗಿ ಅಕ್ಕಯ್ಯಮ್ಮ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ತಾಲೂಕಿನ ಕೊಪ್ಪ ಗ್ರಾಮ ಪಂಚಾಯಿತಿ ಆವರಣದಲ್ಲಿ ಸೋಮವಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ನಡೆಯಿತು.
ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಶೀಲಾ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸಾವಿತ್ರಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಅಕ್ಕಯ್ಯಮ್ಮ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ದ್ರಾಕ್ಷಾಯಿಣಿ ನಾಮಪತ್ರ ಸಲ್ಲಿಸಿದ್ದರು.
ಪಂಚಾಯಿತಿಯಲ್ಲಿ ಒಟ್ಟು 24 ಸದಸ್ಯರ ಪೈಕಿ ಕಾಂಗ್ರೆಸ್ ಬೆಂಬಲಿತ 12 ಸದಸ್ಯರು ಹಾಗೂ ಜೆಡಿಎಸ್ ಬೆಂಬಲಿತ 12 ಸದ್ಯರಿದ್ದು, ಪಂಚಾಯಿತಿ ಅಧಿಕಾರದ ಗದ್ದುಗೆ ಹಿಡಿಯಲು ಇಬ್ಬರು ಸಮಬಲದ ಹೋರಾಟ ನಡೆಸಿದ್ದರೂ ಒಂದು ತಿರಸ್ಕೃತಗೊಂಡ ಮತ (ಕುಲಗೆಟ್ಟ ಮತ) ಹಿನ್ನೆಲೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಶೀಲಾ (12) ಮತ ಪಡೆದು ಜಯಶೀಲರಾದರೆ ಪ್ರತಿ ಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಾವಿತ್ರಿ (11) ಮತ ಪಡೆದು ಪರಾಭವಗೊಂಡರು. ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು 24 ಮತಗಳು ಚಲಾವಣೆಗೊಂಡು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಅಕ್ಕಯ್ಯಮ್ಮ 12 ಮತಗಳನ್ನು ಪಡೆದು ಜಯಶೀಲರಾದರೆ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ದ್ರಾಕ್ಷಾಯಿಣಿ 11 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ ಎಂದು ಚುನಾವಣೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಲೋಕೋಪಯೋಗಿ ಇಲಾಖೆ ಎಇಇ, ಎಂ.ಆರ್.ವೆಂಕಟೇಶ್ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಪಿಡಿಒ ಕೆ.ವಿ.ಸತೀಶ್, ಸದಸ್ಯರಾದ ಸಿ.ಎಸ್.ರೇಣುಕಾಸ್ವಾಮಿ, ಸೈಯದ್ ಸಲೀಂ, ಶೋಭಾ, ಕೆ.ಎಸ್.ಸುರೇಶ್, ಸಿಂಧೂ, ಕೆ.ಎಸ್.ಬಸವರಾಜು, ಕೆ.ಆರ್.ರಾಮಚಂದ್ರ, ಹರಿಣಿ, ಕೆ.ವಿ.ನಾರಾಯಣ, ರಾಜಪ್ಪ, ಸುಮಾ, ಸೈಯದ್ ರಿಯಾಜ್, ದ್ರಾಕ್ಷಾಯಿಣಿ, ಶಾಂತಮ್ಮ, ಶಬೀರ್ಸಾಬ್, ಮಾಲಮ್ಮ, ಜಾಫರ್ ಸಾಧಿಕ್, ಗೀತಾ, ಸಂಶುದ್ದೀನ್, ಪೂರ್ಣಿಮಾ, ಮುಖಂಡರಾದ ಗಿರೀಶ್, ಸಫುಲ್ಲಾಖಾನ್, ಅಣ್ಣಯ್ಯ, ನಂಧೀಶ್, ಚಂದ್ರಶೇಖರ್, ಮಲ್ಲಿಕಾರ್ಜುನ, ಮಹದೇವ್, ರತ್ನಮ್ಮ ಮಂಜು, ಸೇರಿದಂತೆ ಮತ್ತಿತರರು ಹಾಜರಿದ್ದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಘೋಷಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಅಭಿಮಾನಿಗಳು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು