ಮಾನವಿ,ಜು.೦೬-
ಮಾನವಿ ಪಟ್ಟಣದ ಸಮೀಪದ ಪೋತ್ನಾಳ ಗ್ರಾಮದಲ್ಲಿ ಅಸಾಂಕ್ರಮಿಕ ರೋಗಗಳು ಘಟಕ ಮಾನವಿ ಪ್ರಾಥಮಿಕ ಆರೋಗ್ಯ ಕೇಂದ್ರ ಪೋತ್ನಾಳ. ಇವರಿಂದ ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ಹುಚ್ಚಪ್ಪ ದೇವಸ್ಥಾನದ ಹತ್ತಿರ ಕೈಗೊಳ್ಳಲಾಯಿತು.
ಕಾರ್ಯಕ್ರಮದ ಕುರಿತು ಮಾತನಾಡಿದ ಚಂದ್ರಶೇಖರ ಅಸಾಂಕ್ರಮಿಕ ರೋಗಗಳು ಇಂದಿನ ಆಹಾರ ಪದ್ಧತಿಯಿಂದ ಹಾಗೂ ಯಾಂತ್ರಿಕೃತ ಜೀವನದಿಂದ ದೇಹಕ್ಕೆ ಸರಿಯಾಗಿ ಕೆಲಸ ಇಲ್ಲದ ಕಾರಣ ಹೆಚ್ಚಾಗುತ್ತವೆ ಅದಕ್ಕಾಗಿ ದೈನಂದಿನ ಜೀವನವನ್ನು ಚಟುವಟಿಕೆಯುಕ್ತ ಜೀವನವನ್ನು ನಡೆಸಬೇಕೆಂದರು.
ನಂತರ ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ದೇಹದಲ್ಲಿ ಕೊಬ್ಬಿನಂಶ ಹೆಚ್ಚಾಗುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಒತ್ತಡದ ಜೀವನದಿಂದ ಹಾಗೂ ವಂಶಪರಂಪರೆಯಾಗಿ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಅದಕ್ಕಾಗಿ ದೇಹಕ್ಕೆ ದೈಹಿಕ ಶ್ರಮ ಬೇಕಾಗಿದೆ ತಂಬಾಕು ಸೇವನೆ ಅಸುರಕ್ಷಿತ ಜೀವನ ನಡೆಸುವುದರಿಂದ ಕ್ಯಾನ್ಸರ್ ಕಾಯಿಲೆ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಆರೋಗ್ಯಕರ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳುವ ಮೂಲಕ ಅಸಾಂಕ್ರಾಮಿಕ ಕಾಯಿಲೆಗಳಿಂದ ದೂರ ಇರಬಹುದಾಗಿದೆ
ಡಾಕ್ಟರ ದೀಪಾ ದಂತ ವೈದ್ಯರು ಹಿರಿಯ ನಾಗರಿಕರ ಬಾಯಿಯ ಆರೋಗ್ಯ ತಪಾಸಣೆ ಮಾಡಿದರು ದಂತ ಭಾಗ್ಯ ಯೋಜನೆ ಅಡಿಯಲ್ಲಿ ಹಿರಿಯ ನಾಗರಿಕರಿಗೆ ಉಚಿತವಾಗಿ ದಂತಗಳನ್ನು ಹಾಕಲಾಗುವುದು ಎಂದರು ಬಾಯಿಯ ಕ್ಯಾನ್ಸರ್ ಗರ್ಭಕೋಶದ ಕ್ಯಾನ್ಸರ್ ಹಾಗೂ ಇನ್ನು ಮುಂತಾದ ಆ ಸಾಂಕ್ರಮಿಕ ಕಾಯಿಲೆಗಳು ಬರದಂತೆ ಹಿರಿಯ ನಾಗರಿಕರು ದೈಹಿಕ ಚಟುವಟಿಕೆಯುತ್ತ ಜೀವನ ನಡೆಸಬೇಕೆಂದರು.
ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶರಣಪ್ಪ ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರಕಲಾ ಪ್ರಯೋಗ ಶಾಲಾ ತಂತ್ರಜ್ಞಾನದ ಸೋಯಲ್ ಅಂಗನವಾಡಿ ಕಾರ್ಯಕರ್ತೆ ಶಂಕ್ರಮ್ಮ ಆಶಾ ಕಾರ್ಯಕರ್ತೆ ಗೌರಮ್ಮ ಅಮರಮ್ಮ ಸಾರ್ವಜನಿಕರು ಹಾಜರಿದ್ದರು.