ಅಸಹಾಯಕ ಸ್ಥಿತಿಯಲ್ಲಿರುವ ಕುಟುಂಬಗಳಿಗೆ ವಾತ್ಸಲ್ಯ ಕಿಟ್ ನೆರವು


ಸಂಜೆವಾಣಿ ವಾರ್ತೆ
ಸಿರುಗುಪ್ಪ :ಜ,15- ನಮ್ಮೋಡನೆ ಇದ್ದು ಯಾರು ಇಲ್ಲದಂತೆ ಇರುವ ಅನಾಥರು, ಆಶ್ರಯವಂಚಿತರು,ಬಡವರಿಗೆ ವಿವಿಧ ಕಾರಣಗಳಿಂದ ಕುಟುಂಬದ ಸದಸ್ಯರನ್ನು ಕಳೆದುಕೊಂಡಂತಹ ನಾಗರಿಕರಿಗೆ ವಾತ್ಸಲ್ಯ ಕಿಟ್ ನೆರವಿಗೆ ಬರುತ್ತದೆಂದು ಧ.ಗ್ರಾ.ಯೋ.ಅಧಿಕಾರಿ ಸುಧೀರ್ ಹಂಗಳೂರು ಹೇಳಿದರು.
ನಗರದ 16ನೇ ವಾರ್ಡಿನ ಡ್ರೈವರ ಕಾಲೋನಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿಯಲ್ಲಿ ದುರ್ಬಲ ಮತ್ತು ಅಸಹಾಯಕ ಸ್ಥಿತಿಯಲ್ಲಿರುವ ಕುಟುಂಬಗಳನ್ನು ಗುರುತಿಸಿ ಶುಕ್ರವಾರ ವಿತರಿಸಿ ಮಾತನಾಡಿದರು.
 ತಾಲ್ಲೂಕಿನ 67 ಸದಸ್ಯರಿಗೆ ವಾತ್ಸಲ್ಯ ಕಾರ್ಯಕ್ರಮದ ಮೂಲಕ 47ಸಾವಿರದ ವೆಚ್ಚದಲ್ಲಿ ಚಾಪೆ, ಹೊದಿಕೆ, ಬಟ್ಟೆ, ಪಾತ್ರೆಗಳು, ಪೌಷ್ಠಿಕ ಆಹಾರವನ್ನು ಒದಗಿಸಿದ್ದು, 67ಸಾವಿರ ಮಾಸಿಕ ತಲಾ ಒಂದು ಸಾವಿರ ನಗದು ಮಾಶಾಸನ ರೂಪದಲ್ಲಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಅಸಹಾಯಕ ಸ್ಥಿತಿಯಲ್ಲಿರುವ ಮಂಜುನಾಥ, ಈರಮ್ಮ, ಸುಂಕ್ಲಮ್ಮ, ಹುಲಿಗೆಮ್ಮ, ರತ್ನಮ್ಮ, ಗಂಗಮ್ಮ, ಮಾಬೂನಿ ಇವರಿಗೆ ಬಟ್ಟೆ ಮತ್ತು ಪೌಷ್ಟಿಕ ಆಹಾರ ವಿತರಿಸಿದರು.
 ಜ್ಞಾನವಿಕಾಸ ಸಮನ್ವಯಾಧಿಕಾರಿ ನೇತ್ರಾವತಿ, ಮೇಲ್ವಿಚಾರಕರಾದ ರೂಪ, ಮಂಜುನಾಥ ಇದ್ದರು.