
ಬೀದರ:ಎ.16:ಸಮಾಜದಲ್ಲಿರುವ ನಿರ್ಗತಕರು, ಅನಾಥರು, ಅಸಹಾಯಕರು ಹಾಗೂ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ, ಶಿಕ್ಷಣದಿಂದ ವಂಚಿತರಾದವರಿಗೆ ನೆರವಿನ ಹಸ್ತ ನೀಡುವುದೇ ನಿಜವಾದ ಮಾನವ ಧರ್ಮವಾಗಿದೆ ಎಂದು ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ ಚನ ಶೆಟ್ಟಿ ಅವರು ಅಭಿಪ್ರಾಯ ಪಟ್ಟರು.
ಅವರು ಬೀದರಿನ ಬೆಳ್ಳೂರು ಗ್ರಾಮದ ಶ್ರೀ ಸಿದ್ದಾರೂಡ ಮಠದಲ್ಲಿ ಆಯೋಜಿಸಿದ ಮಕ್ಕಳಿಗೆ ಉಚಿತವಾಗಿ ಕಾಪಿ ಪುಸ್ತಕ ಹಾಗೂ ಪೆನ್ನುಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡುತ್ತಾ, ಸೈನಿಕರಿಗೆ ಬೇಕಾದ ಆರೋಗ್ಯದ ಸೇವೆಯನ್ನು ನೀಡುವುದು ಒಂದು ಪುಣ್ಯದ ಕೆಲಸವಾಗಿದೆ. ರಾಷ್ಟ್ರಾಭಿಮಾನದೊಂದಿಗೆ ಸಾಮಾಜಿಕ ಕಳಕಳಿಯನ್ನು ಹೊಂದಿ ಇನ್ನೊಬ್ಬರಿಗೆ ಸಹಾಯ ಮಾಡುವ ಉದ್ದೇಶವನ್ನು ಇಟ್ಟುಕೊಂಡ ಶ್ರೀಮಲ್ಲಯ್ಯ ಸ್ವಾಮಿಯವರ ಕಾರ್ಯವು ಶ್ಲಾಘನೀಯವಾಗಿದೆ ಎಂದು ನುಡಿದರು.
ಖ್ಯಾತ ಮಕ್ಕಳ ರೋಗ ತಜ್ಞರಾದ ಡಾಕ್ಟರ್ ಆನಂದ್ ರಾವ್ ಅವರು ಮಾತನಾಡುತ್ತ, ಬಡತನದಿಂದಲೇ ಕಠಿಣ ಪರಿಶ್ರಮವನ್ನು ಮಾಡಿ ಯಶಸ್ಸು ಸಾಧಿಸಿರುವ ಮಲ್ಲಯ್ಯ ಸ್ವಾಮಿ ಯವರು ನಿಜಕ್ಕೂ ಅಭಿನಂದನಾರ್ಹರು ಎಂದು ನುಡಿದರು.
ಮುಖ್ಯ ಅತಿಥಿಯಾಗಿದ್ದ ವೀರಭದ್ರಪ್ಪ ಉಪ್ಪಿನ್ ರವರು ಮಾತನಾಡಿ, ಅನೇಕ ಜನರು ತಮ್ಮ ಹುಟ್ಟುಹಬ್ಬ ಹಾಗೂ ಮದುವೆ ವಾರ್ಷಿಕೋತ್ಸವವನ್ನು ಭರ್ಜರಿಯಾಗಿ ಆಚರಿಸಿಕೊಂಡು ಹಣವನ್ನು ಪೆÇೀಲು ಮಾಡುವ ಬದಲಾಗಿ ಇಂತಹ ಶಾಲೆಗಳ ಮಕ್ಕಳಿಗೆ ಉಪಯೋಗವಾಗುವಂತಹ ಸಹಾಯ ಹಸ್ತವನ್ನು ಚಾಚಿದರೆ ಸಾರ್ಥಕವಾಗುತ್ತದೆ ಎಂದು ನುಡಿದರು.
ಮುಖ್ಯ ಅತಿಥಿಗಳಾಗಿದ್ದ ಶ್ರೀ ಅರವಿಂದ ಕುಲಕರ್ಣಿ ಅವರು ಮಾತನಾಡಿ, ಬೀದರ್ ನಂತಹ ಪಟ್ಟಣದ ಬದಲಾಗಿ ಗ್ರಾಮೀಣ ಭಾಗದಲ್ಲಿರುವ ಸಿದ್ಧಾರೂಢ ಮಠದಲ್ಲಿ ಇಂತಹ ಜನೋ ಪಯೋಗಿ ಚಟುವಟಿಕೆ ಗಳನ್ನು ನಡೆಸುತ್ತಿರುವುದು ಬೇರೆ ಜನರಿಗೆ ಮಾದರಿ ಯಾಗಬೇಕು ಎಂದು ನುಡಿದರು.
ಮಠದ ಪೀಠಾಧಿಪತಿ ಮಾತಾಜಿ ಅಮೃತಾನಂದ ಮಯಿ ಯವರು ದಿವ್ಯ ಸಾನಿಧ್ಯ ವಹಿಸಿದ್ದರು. ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಡಾಕ್ಟರ್ ವೀರೇಂದ್ರ, ಮಹೇಶ್ ಮುದ್ದಾ, ಪ್ರಕಾಶ್ ಬಕಚೌಡಿ, ಕಸ್ತೂರಿ ಪಟಪಳ್ಳಿ, ಶರಣಯ್ಯ ಮಠಪತಿ, ಪ್ರಭಯ್ಯ ಸ್ವಾಮಿ, ನ್ಯಾಯವಾದಿ ಭರತ್ ಗುಮ್ಮೆ, ಕಲಾವತಿ ಶಿವರುದ್ರಯ್ಯ ಮುಂತಾದವರು ಹಾಜರಿದ್ದರು. ಇದೇ ಸಂದರ್ಭದಲ್ಲಿ ನಾಗಜ್ಯೋತಿ ಮಲ್ಲಯ್ಯ ಸ್ವಾಮಿ ಅವರ ವಿವಾಹದ 25ನೇ ವಾರ್ಷಿಕೋತ್ಸವವನ್ನು ಮಕ್ಕಳೊಂದಿಗೆ ಆಚರಿಸಿಕೊಳ್ಳಲಾಯಿತು.