ಅಸಹಾಯಕರಿಗೆ ಊಟ ವಿತರಣೆ

ಉಡುಪಿ ಎ.2೫- ನಗರದಲ್ಲಿ ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ತೀರಾ ಅಸಹಾಯಕರಿಗೆ, ಅನಾರೋಗ್ಯ ಪೀಡಿತರಿಗೆ, ವೃದ್ದರು ಅಂಗವಿಕಲರು, ಮಾನಸಿಕ ಅಸ್ವಸ್ಥರಿಗೆ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ, ನಿವಾರ 100 ಊಟವನ್ನು ವಿತರಿಸಿದರು.

ಆದಿಉಡುಪಿ, ಪಂದುಬೆಟ್ಟು, ಕರಾವಳಿ ಬೈಪಾಸ್, ಶಿರಿಬೀಡು, ರಥಬೀದಿ, ರಾಜಾಂಗಣ ವಾಹನ ನಿಲುಗಡೆ ಸ್ಥಳ, ಕಿನ್ನಿಮುಲ್ಕಿ, ಬಲಾಯಿಪಾದೆ, ರೈಲ್ವೆ ನಿಲ್ದಾಣ, ನಗರದ ಮುಖ್ಯ ನಾಲ್ಕು ಬಸ್ಸು ನಿಲ್ದಾಣಗಳಲ್ಲಿ ಆಹಾರದ ಪೊಟ್ಟಣ ಗಳನ್ನು ವಿತರಿಸಲಾಯಿತು. ಪಾರ್ಸೆಲು ಊಟ ಪಡೆಯಲು ಹೋಟೆಲಿನಲ್ಲಿ ಅವಕಾಶವಿದ್ದರೂ ಬಹು ತೇಕ ಹೋಟೆಲುಗಳು ಮುಚ್ಚಿರುವುದರಿಂದ ನಗರ ಪ್ರದೇಶದಲ್ಲಿ ಬದುಕುವ ವಲಸೆ ಕಾರ್ಮಿಕ ವರ್ಗದವರಿಗೆ ಬಹಳಷ್ಟು ಅನಾನುಕೂಲವಾಗಿತ್ತು. ಆದಿತ್ಯವಾರ ಕೂಡ ದಿನವು ಇಂಥ ಅಸಹಾಯಕರಿಗೆ ಊಟ ವಿತರಿಸುವ ಕಾರ್ಯ ನಡೆಯಲಿದೆ ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ.