ಅಸಹಾಜ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ: ಜನರಲ್ಲಿ ಆತಂಕ

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಸಂಖ್ಯೆ
ರಾಯಚೂರು ಏ ೧೭ :-ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಜಿಗಿಯುತ್ತಿದ್ದರು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಇನ್ನೂ ಗಂಭೀರಗೊಳ್ಳದೆ ಇರುವುದರಿಂದ ಸಾವಿನ ಸಂಖ್ಯೆ ಹೆಚ್ಚಲು ಕಾರಣವಾಗಿದೆ. ನಗರ ಸೇರಿದಂತೆ ಜಿಲ್ಲೆಯಲ್ಲಿ ಇತ್ತೀಚಿಗೆ ಸಾವಿನ ಪ್ರಕರಣಗಳಲ್ಲಿ ಹೆಚ್ಚಳ ಅನೇಕ ಅನುಮಾನಗಳಿಗೆ ದಾರಿ ಮಾಡಿದೆ.
ಒಂದೆರಡು ದಿನ ಅನಾರೋಗ್ಯ ನಂತರ ಅನಾರೋಗ್ಯ ವ್ಯಕ್ತಿಗಳ ಸಾವಿಗೀಡಾಗುವ ಘಟನೆಗಳ ಬಗ್ಗೆ ಜಿಲ್ಲಾಡಳಿತ ಗಮನ ಹರಿಸುವು ಅಗತ್ಯವಿದೆ. ನಗರ ಸೇರಿ ಜಿಲ್ಲೆಯಲ್ಲಿ ಸಾವಿನ ಪ್ರಕರಣಳಲ್ಲಿ ಏಕಾ ಏಕಿ ಹೆಚ್ಚಳದ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆ ಪರಿಶೀಲಿಸುವ ಹೊಣೆ ನಿರ್ವಹಿಸದೆ ಇರುವುದು ಕೊರೋನಾ ಅಪಾಯ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ನಗರದ ಯಾವುದೆ ವೃತ್ತಗಳಲ್ಲಿ ಅಥವಾ ಬಡಾವಣೆ ಮುಖ್ಯ ರಸ್ತೆಗಳಲ್ಲಿ ನಿಧನ ಬ್ಯಾನರ್ ಈ ಸಾವಿನ ಸಂಖ್ಯೆಗೆ ಸಾಕ್ಷಿಯಾಗಿವೆ. ಒಂದೆರಡು ದಿನ ಜ್ವರ ಮತ್ತು ಕೆಮ್ಮು ,ದಮ್ಮಿಗೆ ಜನರು ಸಾವುವಂತಾ ಅನಾಹುತ ಅಪಾಯಕಾರಿಯಾಗಿದೆ.
ದೇಶದಲ್ಲಿ ಕೊರೋನಾ ಪಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೆ ಜಿಲ್ಲೆಯಲ್ಲಿ ಇಂತಹ ಯಾವುದೆ ಪ್ರಯತ್ನಗಳು ಕಾಣುತ್ತಿಲ್ಲ ಎನ್ನುವುದು ಜನರ ಅಕ್ರೋಶವಾಗಿದೆ. ನಿನ್ನೆ ೧೦೮ ಕರೋನಾ ಪ್ರಕರಣ ಮತ್ತೆ ಜಿಲ್ಲೆಯಲ್ಲಿ ಅಪತ್ತಿನ ಗಂಟೆ ಮತ್ತೊಮ್ಮೆ ಬಾರಿಸಿದೆ. ಆದರೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಇನ್ನೂ ಎಚ್ಚೆತ್ತುಕೊಳ್ಳದೆ ಇರುವುದರಿಂದ ಪರಿಸ್ಥಿತಿ ನಿದಾನಕ್ಕೆ ಕೈ ಮೀರುವಂತ ಸ್ಥಿತಿಯತ್ತ ಸಾಗಿದೆ.
ಕೊರೋನಾ ಸೋಂಕಿತ ರೋಗಿಗಳ ಚಿಕಿತ್ಸೆಗೆ ಅತಿಮುಖ್ಯವಾದ ರೆಮ್‌ಡಿಸಿವರ್ ಔಷಧಿ ಕೊರತೆ ಪರಿಸ್ಥಿತಿ ಗಂಭೀರಕ್ಕೆ ಕಾರಣವಾಗಿದೆ. ಕೊಳೆಚೆ ಪ್ರದೇಶ ಮತ್ತು ಗ್ರಾಮಾಂತರ ಪ್ರದೇಶ ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಕೊರತೆ ಮತ್ತು ಅತಿಯಾದ ಭಯದಿಂದ ಕರೊನಾ ಪರೀಕ್ಷೆಗೆ ಮುಂದಾಗದಿರುವುದು ಸಾವಿನ ಸಂಖ್ಯೆ ಹೆಚ್ಚಲು ಕಾರಣವಾಗಿದೆ. ಕೊರೊನಾ ಪರೀಕ್ಷೆಯನ್ನು ತೀವ್ರಗೊಳಿಸುವಂತೆ ಕೇಂದ್ರ ಸರಕಾರ ಪದೇ ಪದೇ ಹೇಳುತ್ತಿದ್ದರು ಜಿಲ್ಲೆಯಲ್ಲಿ ಇಲಾಖೆಯಿಂದ ಕೊರೊನಾ ತಪಾಸಣೆ ಮಾಡುತ್ತಿಲ್ಲ. ತಪಸಾಣೆಗೆ ಬರುವ ಜನರನ್ನು ಬಿಟ್ಟರೆ ಗ್ರಾಮಾಂತರ ಪ್ರದೇಶದ ಜನರ ತಪಾಸಣೆ ಇಲಾಖೆಯಿಂದ ನಿರ್ವಹಿಸದಿರುವುದು ಸಾವಿನ ಸಂಖ್ಯೆ ಹೆಚ್ಚಲು ದಾರಿಯಾಗಿದೆ. ಕಳೆದ ಒಂದು ವಾರದಿಂದ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಏರುಗತಿ ರೋಗಿಗಳ ಚಿಕಿತ್ಸೆ ವ್ಯವಸ್ಥೆಯ ಸಮತೋಲನೆ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಜಿಲ್ಲಾಡಳಿತ ತಕ್ಷಣವೆ ರಿಮ್ಸ್ ಆಸ್ಪತ್ರೆಯೊಂದಿಗೆ ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿ ಚಿಕಿತ್ಸೆಗೆ ದರ ನಿಗದಿ ಮಾಡದಿದ್ದರೆ ಜನರು ಕೊರೊನಾ ಆತಂಕದಿಂದ ಪರದಾಡಯವಂತಾಗುತ್ತದೆ.
ಕೇವಲ ಕಡತಗಳಿಗೆ ಸೀಮಿತ ಮತ್ತು ಸಭೆ ನಿರ್ವಹಣೆಯಲ್ಲಿ ಕಾಲ ಕಳೆಯದೆ ಜನರ ರಕ್ಷಣೆಗೆ ಜಿಲ್ಲಾಡಳಿತ ರಂಗ ಪ್ರವೇಶ ಮಾಡುವ ಅಗತ್ಯವಿದೆ. ಅಸಹಾಜ ಸಾವಿನ ಪದೇಶಗಳಲ್ಲಿ ಕೊರೋನಾ ಪರೀಕ್ಷೆ ಹೆಚ್ಚಿಸುವ ಮೂಲಕ ಜನರ ಜೀವ ರಕ್ಷಣೆಗೆ ಯೋಜನೆ ರೂಪಿಸಬೇಕಾಗಿದೆ. ಒಪೆಕ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ವ್ಯವಸ್ಥೆ ಮತ್ತಷ್ಟು ತೀವ್ರಗೊಳಿಸಬೇಕು. ಕೊರೊನಾ ಹೆಸರಲ್ಲಿ ಜನರನ್ನು ಸಾಯಲು ಬಿಡುವಂತ ವ್ಯವಸ್ಥೆಯಿಂದ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಿ ಮತ್ತೆ ಬದುಕು ಅವಕಾಶ ಕಲ್ಪಿಸುವ ವ್ಯವಸ್ಥೆಯತ್ತ ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಗಮನ ಹರಿಸಿಬೇಕಿದೆ.