ಅಸಮರ್ಪಕ ದಾಖಲೆ 9.53ಲಕ್ಷ ನಗದು ವಶ


ಸಂಜೆವಾಣಿ ವಾರ್ತೆ
ಹೊಸಪೇಟೆ, ಏ.15: ಅಸಮರ್ಪಕ ದಾಖಲೆ ಹಾಗೂ ಸೂಕ್ತ ಹೇಳಿಕೆ ನೀಡದ ಹಿನ್ನೆಲೆಯಲ್ಲಿ ಚುನಾವಣಾ ವಿಚಕ್ಷಕದಳ ಹಾಗೆಯೇ ಪೊಲೀಸರು 9.53ಲಕ್ಷ ಮೌಲ್ಯದ ನಗದು ವಶಪಡಿಸಿಕೊಂಡರುವ ಘಟನೆ ತಾಲೂಕಿನ ಕಮಲಾಪುರದಲ್ಲಿ ಜರುಗಿದೆ.
ತಮಗೆ ತಿಳಿದುಬಂದ ಖಚಿತ ಮಾಹಿತಿಯಂತೆ ಅನುಮಾನಾಸ್ಪದವಾಗಿ ಮನೆಯಲ್ಲಿ ಸಂಗ್ರಹಿಸಿದ ನಗದು ವಶಪಡಿಸಿಕೊಂದಿದ್ದಾರೆ.
ಸಮರ್ಪಕ ದಾಖಲೆ ಇಲ್ಲದ 9 ಲಕ್ಷ 53 ಸಾವಿರ ಹಣ ಮನೆಯಲ್ಲುಟ್ಟುಕೊಂಡು ಸರಿಯಾಗಿ ಮಾಹಿತಿ ನೀಡಲು ಮುಂದಾಗದ ಹಿನ್ನೆಲೆಯಲ್ಲಿ ತಾಲೂಕಿನ ಕಮಲಾಪರದಲ್ಲಿ ಜಪ್ತಿ ಕೃಷ್ಣಮೂರ್ತಿ ಎನ್ನುವವರ ಮನಯಲ್ಲಿದ್ದ ಹಣವನ್ನು ಹಂಪಿ ಸಿಪಿಐ ಕೆ. ಶಿವರಾಜ್ ಹಾಗೂ ಫ್ಲೈಯಿಂಗ್ ಸ್ಕ್ವಾಡ್ ನ ಬೀರೇಂದ್ರ ಅವರ ತಂಡದಿಂದ ದಾಳಿ
ಚುನಾವಣಾ ಅಕ್ರಮಕ್ಕೆ ಬಳಸಲೆಂದು ಇರಿಸಿದ್ದ ಹಣವೆನ್ನುವ ಅನುಮಾನದ ಮೇಲೆ  ವಶಪಡಿಸಿಕೊಂಡ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.