ಅಸಮಧಾನ ಸಹಜ, ಮನವೊಲಿಕೆಗೆ ಪ್ರಯತ್ಮ: ಖೂಬಾ

ಬಸವಕಲ್ಯಾಣ:ಮಾ.28:ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಗೆಲ್ಲುವ ಅಭ್ಯರ್ಥಿಯ ಸಂಪೂರ್ಣ ವರದಿ ತರಿಸಿಕೊಂಡು ಹಾಗೂ ಪಕ್ಷದ ಮಾನದಂಡದ ಪ್ರಕಾರ ಮತ್ತು ಕಾರ್ಯಕರ್ತರ ಅಭಿಪ್ರಾಯ ಪಡೆದೇ ವರಿಷ್ಠರು ಶರಣು ಸಲಗರ ಅವರ ಹೆಸರು ಅಂತಿಮಗೊಳಿಸಿದ್ದಾರೆ ಎಂದು ಸಂಸದ ಭಗವಂತ ಖೂಬಾ ಹೇಳಿದರು.

ನಗರದ ಶರಣು ಸಲಗರ ಅವರ ಕಾರ್ಯಾಲಯದಲ್ಲಿ ಶನಿವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರತೀಯ ಜನತಾ ಪಕ್ಷದಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ಗಮನಿಸಿ, ಅಳೆದು, ತೂಗಿ ಪಕ್ಷ ಅಭ್ಯರ್ಥಿ ಆಯ್ಕೆ ಮಾಡುತ್ತದೆ. ಆದರೆ ಕೆಲವರು ಹಣ ಪಡೆದು ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ ಎಂದು ಬಿಂಬಿಸುತ್ತಿದ್ದಾರೆ. ಅಂತಹ ನೀಚ ಕೆಲಸ ಬಿಜೆಪಿ ಎಂದಿಗೂ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

ಪಕ್ಷ ಉಪ ಚುನಾವಣೆಗೆ ಶರಣು ಸಲಗರ ಹೆಸರು ಘೋಷಣೆ ಮಾಡಿದ ನಂತರದ ದಿನಗಳಲ್ಲಿ ಕೆಲವು ಸಣ್ಣಪುಟ್ಟ ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆಯಲ್ಲಿ ಬಿಜೆಪಿಯ ಯಾವುದೇ ಪದಾಕಾರಿಗಳು ಪಾಲ್ಗೊಂಡಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಹಿತೈಷಿಗಳು ಪ್ರತಿಭಟನೆ ಮಾಡಿದ್ದಾರೆ. ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಯಾರು ಕೂಡಾ ವಿರೋಧ ವ್ಯಕ್ತಪಡಿಸುವುದಿಲ್ಲ. ಎಲ್ಲರು ಕೂಡಿ ಸಂಭ್ರಮಾಚಾರಣೆ ಮಾಡಿದ್ದಾರೆ ಎಂದರು.

ಪಕ್ಷ ಒಬ್ಬರಿಗೆ ಟಿಕೆಟ್ ನೀಡುತ್ತದೆ ಆದರೆ ಆಕಾಂಕ್ಷಿಗಳಲ್ಲಿ ಕೊಂಚ ಅಸಮಧಾನ ಇರುತ್ತದೆ ಹೀಗಾಗಿ ಆಕಾಂಕ್ಷಿಗಳ ಮನವೊಲಿಸುವ ಕೆಲಸ ನಿರಂತರವಾಗಿ ನಡೆಸಲಾಗಿದೆ. ಎಲ್ಲರು ಕೂಡ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಮಾಜಿ ಸಿಎಂ ಎಚ್ ಡಿ. ಕುಮಾರ್ ಸ್ವಾಮಿ ತಮ್ಮ ಘನತೆಗೆ ತಕ್ಕಂತೆ ಮಾತನಾಡಿಲ್ಲ. ಅಭ್ಯರ್ಥಿ ಆಯ್ಕೆಗಾಗಿ ಭಾರತೀಯ ಜನತಾಪಕ್ಷದಿಂದ ದೊಡ್ಡ ಮಟ್ಟದ ಹಣ ಪಡೆದು ಶರಣು ಸಲಗರ್ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಹಣ ಪಡೆದು ಟಿಕೆಟ್ ಮಾರಿಕೊಳ್ಳುವ ಸಂಸ್ಕøತಿ ನಮ್ಮ ಬಿಜೆಪಿ ಪಕ್ಷದಲ್ಲಿ ಇಲ್ಲ. ಅದು ನಿಮ್ಮ ಜೆಡಿಎಸ್ ಪಕ್ಷದ ಸಂಸ್ಕೃತಿಯಾಗಿದೆ ಎನ್ನುವುದು ಜನರಿಗೆ ತಿಳಿದಿರುವ ಸಂಗತಿಯಾಗಿದೆ ಎಂದು ತಿಳಿಸಿದರು.

ಮಾಜಿ ಶಾಸಕ ಮಲ್ಲಿಕಾರ್ಜುನ ಎಸ್ ಖೂಬಾ ಅವರು ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ನಿಮಗೆ ಟಿಕೆಟ್ ಕೈತಪ್ಪಿದೆ ಅನ್ನೊ ಕಾರಣಕ್ಕೆ ಇಂತಹ ಗಂಭೀರ ಆರೋಪ ಮಾಡಬಾರದು. ಜೆಡಿಎಸ್‍ನಿಂದ ಬಿಜೆಪಿಗೆ ಬಂದು ಎರಡು ವ?ರ್À ಬಿಜೆಪಿಯಲ್ಲಿ ಇದ್ದ ನಿಮಗೆ ನಮ್ಮ ಸಂಸ್ಕೃತಿ ಗಮನಿಸಿದ್ದಿರಿ. ಹೀಗಾಗಿ ಈ ರೀತಿಯಲ್ಲಿ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡಬೇಡಿ ಎಂದರು.

ಬಸವೇಶ್ವರ ದೇವಸ್ಥಾನದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಮತ ನೀಡಬಾರದು ಎಂದು ಪ್ರಮಾಣ ಮಾಡಿಸಿದ್ದು ಪ್ರಜಾಪ್ರಭುತ್ವದ ವಿರೋಯಾಗಿದೆ. ಇಂಥವರಿಗೆ ಮತ ಹಾಕಿ ಅಥವಾ ಹಾಕಬೇಡಿ ಎನ್ನುವುದಕ್ಕೆ ಯಾರಿಗೂ ಹಕ್ಕು ಇಲ್ಲ. ಮೇ 2 ರಂದು ಪ್ರಕಟವಾಗಲಿರುವ ಫಲಿತಾಂಶ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಒಳಗಿನವರು, ಹೊರಗಿನವರು ಎನ್ನುವುದು ಸರಿಯಲ್ಲ ಇವನಾರವ, ಇವನಾರವ ಎನ್ನದೆ ಇವ ನಮ್ಮವ, ಇವ ನಮ್ಮವ ಎಂದು ವಿಶ್ವ ಗುರು ಬಸವಣ್ಣನರು ಇದೇ ಕಲ್ಯಾಣ ಭೂಮಿಯಲ್ಲಿ ಹೇಳಿದ ತತ್ವ ಜಗತ್ತಿಗೆ ಮಾದರಿಯಾಗಿದೆ ಎಂದರು.

ಕೊರೊನಾ ಸಂದರ್ಭದಲ್ಲಿ ಜನ ಸೇವೆ ಮಾಡಿದ ಶರಣು ಸಲಗರ್ ಅವರು ಸೇವೆ ಮಾಡಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶಾಸಕರಾಗಿ ಇನ್ನು ಹೆಚ್ಚಿನ ಜನ ಸೇವೆ ಮಾಡುವ ಉದ್ದೇಶದಿಂದ ಪಕ್ಷದಿಂದ ಸ್ಪರ್ಧೆ ಮಾಡುತಿದ್ದಾರೆ. ಕಾಂಗ್ರೆಸ್, ಜೆಡಿಎಸ್, ಎಂಐಎಂ ಪಕ್ಷ ಸೇರಿದಂತೆ ಯಾವುದೆ ಪಕ್ಷದಲ್ಲು ಸೂಕ್ತ ಅಭ್ಯರ್ಥಿಗಳು ಇಲ್ಲ. ಕೆಲವರು ಸ್ವತಂತ್ರವಾಗಿ ಸ್ಪರ್ಧೆ ಮಾಡುವ ಯೋಚನೆ ನಡೆಸಿದ್ದಾರ, ಅದು ಅವರಿಗೆ ಬಿಟ್ಟ ವಿಚಾರ, ಮಾರ್ಚ 30 ರಂದು ಪಕ್ಷದ ಮುಖಂಡರು, ಸಚಿವರ ಸಮ್ಮುಖದಲ್ಲಿ ಪಕ್ಷದ ಅಭ್ಯರ್ಥಿ ಶರಣು ಸಲಗರ್ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ವಿರೋಗಳು ಮಾಡುವ ಆರೋಪಗಳಿಗೆ ಪಕ್ಷದ ಯಾವುದೆ ಕಾರ್ಯಕರ್ತರು ಉತ್ತರಿಸಲು ಹೊಗದೆ ತಮ್ಮ ಬೂತ್‍ನಲ್ಲಿ ಹೆಚ್ಚಿನ ಮತಗಳನ್ನು ಹಾಕಿಸಲು ಗಮನ ಹರಿಸಬೇಕು ಎಂದು ತಿಳಿಸಿದರು.

ವಿಭಾಗೀಯ ಉಪ ಚುನಾವಣೆಯ ಸಹ ಉಸ್ತುವಾರಿ ಈಶ್ವರಸಿಂಗ್ ಠಾಕೂರ, ಅಭ್ಯರ್ಥಿ ಶರಣು ಸಲಗರ ಮಾತನಾಡಿದರು. ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ, ತಾಲೂಕು ಅಧ್ಯಕ್ಷ ಅಶೋಕ ವಕಾರೆ, ನಗರ ಘಟಕದ ಅಧ್ಯಕ್ಷ ಕೃಷ್ಣಾ ಗೋಣೆ, ರಾಜ್ಯ ಕಾರ್ಯಕಾರಣಿ ಸದಸ್ಯ ದೀಪಕ ಗಾಯಕವಾಡ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.


ಹಣ ಕೊಟ್ಟು ಟಿಕೆಟ್ ತಂದರೆ ಪತ್ನಿ ಮಕ್ಕಳನ್ನು ಮಾರಿಕೊಂಡಂತೆ: ಸಲಗರ

ಬಸವಕಲ್ಯಾಣ ಕ್ಷೇತ್ರದ ಮತದಾರರ ಅಂತರಾತ್ಮದ ಹರಕೆಯ ಫಲದಿಂದಾಗಿ ಇಂದು ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆಯ ಅಭ್ಯರ್ಥಿಯಾಗಿದ್ದೇನೆ. ನಮ್ಮ ಕುಟುಂಬದ ಸದಸ್ಯರಿಗೆ ಯಾವುದೇ ರಾಜಕೀಯ ನಂಟಿಲ್ಲ ಆದರೆ ಒಂದು ರಾಷ್ಟ್ರೀಯ ಪಕ್ಷದಿಂದ ಶಾಸಕ ಸ್ಥಾನಕ್ಕೆ ಸ್ರ್ಪಸಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದು ಶರಣು ಸಲಗರ ಹೇಳಿದರು.

ಸಲಗರ ಬಳಿ ಬಿಜೆಪಿ ಹಣ ಪಡೆದು ಟಿಕೆಟ್ ನೀಡಿದೆ ಎಂದು ಮಾಜಿ ಸಿಎಂ ಕುಮಾರ ಸ್ವಾಮಿ ಹೇಳಿದ್ದಾರೆ. ಆದರೆ ನಾನು ಯಾರಿಗೂ ದುಡ್ಡು ನೀಡಿಲ್ಲ ನಾನು ಹಣ ನೀಡಿರುವುದೇ ಆದಲ್ಲಿ ನನ್ನ ಪತ್ನಿ ಮತ್ತು ಮಕ್ಕಳನ್ನು ಮಾರಿಕೊಂಡಂತೆ ಸಮ ಎಂದು ಭಾವುಕರಾದರು.

ನಾನು ಯಾರಿಗೂ ಆಸೆ ಆಮೀಷ ತೋರಿಸುವಂತಹ ಪ್ರಯತ್ನ ಮಾಡಿಲ್ಲ. ನನ್ನ ಕೈಲಾದಷ್ಟು ಪ್ರಾಮಾಣಿ ಸೇವೆ ಬಸವಕಲ್ಯಾಣದಲ್ಲಿ ಮಾಡಿದ್ದೇನೆ. ಲಕ್ಷ-ಲಕ್ಷ ಜನರ ಆಶಿರ್ವಾದ ನನ್ನ ಮೇಲಿತ್ತು ಅದಕ್ಕಾಗಿ ಇಂದು ನಾನು ಅಭ್ಯರ್ಥಿಯಾಗಿದ್ದೇನೆ. 50 ಸಾವಿರ ಮಂತರಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದರು.