ಅಸತ್ಯದಿಂದ ಸತ್ಯದತ್ತ ಹೋಗುವ ಪಯಣವೇ ಸುಂದರ ಶಾಂತ ಸ್ವರ್ಗ ಜೀವನ: ಸಿದ್ದೇಶ್ವರ ಮಹಾಸ್ವಾಮಿಗಳು

ಭಾಲ್ಕಿ :ನ.25:ಜೀವನ ಇದೊಂದು ಪ್ರವಾಹ. ವರುಷ ವರುಷಗಳ ಕಾಲ ಈ ಪ್ರವಾಹ ಹರಿಯುತ್ತಿರಬೇಕು. ಆಕಾಶದಿಂದ ಒಂದಿಷ್ಟು ನೀರು ಬೆಟ್ಟದ ಮೇಲಿಂದ ಹರಿಯಲಿಕ್ಕೆ ಪ್ರಾರಂಭವಾಯಿತು ಎಂದರೆ ಬೆಟ್ಟದಿಂದ ನಿಧಾನವಾಗಿ ಇಳಿದು ಬಯಲಿನಲ್ಲಿ ಹರಿದು ಸಾಗರವನ್ನು ಸೇರುತ್ತದೆ ಹಾಗೆಯೇ ನಮ್ಮ ಜೀವನ ಸಣ್ಣದಾಗಿ ಶುರುವಾಗಿ ಎಲ್ಲೋ ನಿಧಾನವಾಗಿ ಭೌದ್ಧಿಕ, ಭಾವನಾತ್ಮಕ, ದೈಹಿಕವಾಗಿ ಬೆಳೆದು ನೂರು ವರ್ಷಗಳ ನಂತರ ದೇವಸಾಗರ ಸೇರುತ್ತದೆ. ಈ ಹರಿಯುವಿಕೆ ಬಹಳ ಅದ್ಭುತವಾಗಿದೆ. ಇದೇ ಅನುಭವ.
ಯಾವುದೇ ನದಿ, ಹೊನಲು ಅವುಗಳ ಮುಖ ಸಮುದ್ರದತ್ತ, ಸಮುದ್ರ ಬಹಳ ವಿಸ್ತಾರ. ಅದು ಹರಿಯುವುದಿಲ್ಲ ತುಂಬಿರುವುದು ಅದನ್ನು ಅಳತೆ ಮಾಡಲಿಕ್ಕೆ ಬರುವುದಿಲ್ಲ, ಆಳ ಗೊತ್ತಾಗುವುದಿಲ್ಲ, ಅಂತಲ್ಲಿ ಹೋಗಿ ಬೆರೆಯುತ್ತದೆ, ನದಿ ಸಮುದ್ರದಲ್ಲಿ ಒಂದಾಗುವುದು ತನ್ನ ಹೆಸರು ಕಳೆದುಕೊಳ್ಳುತ್ತದೆ. ತನ್ನ ಕಾರ್ಯವನ್ನು ನಿಲ್ಲಿಸುತ್ತದೆ.
ಕೃಷ್ಣೆ ಕೃಷ್ಣೆಯಾಗಿ ಹರಿದು ತನ್ನ ತನವನ್ನು ಕಳೆದುಕೊಳ್ಳುತ್ತದೆ. ಆದರೆ ಕೃಷ್ಣೆಯೊಳಗೆ ಇರುವುದೆಲ್ಲವೂ ಸಾಗರ ಇದು ಜೀವನ. ಇದನ್ನು ನೋಡಿ ನಾವು ಹೇಗೆ ಬದುಕಬೇಕು ಎಂದು ಕಲಿಯಬೇಕು. ಇದು ಒಂದು ಪ್ರವಾಹ ಯಾವುದೋ ಒಂದು ಸಣ್ಣ ಪಟ್ಟಣದಲ್ಲಿ ಜನಿಸಿ ನೋಡುತ್ತಾ, ಕೇಳುತ್ತಾ, ಮಾತನಾಡುತ್ತಾ, ಹೇಳುತ್ತಾ ಮುಂತಾದವುಗಳಿಂದ ಅನುಭವಿಸಿ ಹರಿಯುತ್ತಾ ಸಾಗುವುದು.
ನೋಡಿ ಅನುಭವಿಸು, ಮಾಡಿ ಅನುಭವಿಸು. ನೋಡುವ ನೋಟ ನಿಂತು ಹೋದ ಮೇಲೆ ಏನು ಪ್ರಯೋಜನ, ಮಾಡುವ ಕಾರ್ಯ ನಿಂತು ಹೋದ ಮೇಲೆ ಏನು ಪ್ರಯೋಜನ ಪ್ರತಿಯೊಂದು ಅನುಭವದ ಹಿಂದೆ ಸುಖ ದುಃಖದ ಭಾವನೆಗಳು.
ಒಂದು ಸುಂದರ ರೂಪವನ್ನು ನೋಡಿದಾಗ ಮನಸ್ಸು ಸುಖಿಸಬೇಕು, ಕಣ್ಣುಗಳು ಅರಳಬೇಕು, ಕಣ್ಣಿನಿಂದ ಮನಸ್ಸಿನ ಆಳಕ್ಕೆ ಹರಿಯಬೇಕು. ಇಂತಹ ಸುಂದರ ಬದುಕು ನಮ್ಮದು. ಆ ಸೌಂದರ್ಯದ ಮಧ್ಯೆ ಸುಖದ ಸುವಾಸನೆ ಬೀರಬೇಕು ಇದು ಜೀವನ. ಎಷ್ಟು ಸುಂದರವಾಗಿ ಸರಿಯಾಗಿ ಹರಿಯಬೇಕು ಎಂದರೆ ಎಲ್ಲಿ ಎಲ್ಲಿ ಹರಿಯುತ್ತದೆಯೋ ಅದರ ಸುತ್ತಮುತ್ತ ಹಸಿರು ತುಂಬಿರಬೇಕು ಹೂವುಗಳು ಅರಳಬೇಕು ಹಣ್ಣುಗಳು ಬೆಳೆಯಬೇಕು ಹಕ್ಕಿಗಳು ಹಾಡಬೇಕು ಇದುವೇ ಜೀವನ. ಕೃಷ್ಣ ನದಿ ತನ್ನ ಉಗಮ ಸ್ಥಾನ
ಪಶ್ಚಿಮ ಘಟ್ಟದ ಮಹಾದೇವ ಪರ್ವತ ಶ್ರೇಣಿಯಲ್ಲಿ ಮಹಾಬಲೇಶ್ವ??ದ ಹತ್ತಿರ ಸಮುದ್ರ ಮಟ್ಟಕ್ಕಿಂತ 1338 ಮೀಟರ ಎತ್ತರದಲ್ಲಿ ಉಗಮವಾಗಿ ಸುಮಾರು 1392 ಕಿ.ಮಿ.ಗಳಷ್ಟು ಹರಿದು ಆಂಧ್ರಪ್ರದೇ??ದ ಹಂಸಲಾದೀವಿಯಲ್ಲಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.
ಹೇಗೆ ನದಿ ಸಣ್ಣದಾಗಿ ಹರಿದು ಸುತ್ತಮುತ್ತಲು ಹಚ್ಚಹಸಿರು ಹೂವುಗಳನ್ನು ಹಣ್ಣುಗಳನ್ನು ಸಮೃದ್ಧವಾಗಿಸುವುದು ನಾವು ಸಹ ಮಾತುಗಳಿಂದ ಸೌಂದರ್ಯ, ಕಾರ್ಯಗಳಿಂದ ಸಂಪತ್ತು ಮನಸ್ಸಿನಲ್ಲಿ ಆನಂದ ಇವುಗಳಿಂದ ಭಾವ ಸಂಪತ್ತು ಹೆಚ್ಚಾಗುವುದು ಜ್ಞಾನದ ಸುವಾಸನೆ ಅತ್ತಲಿತ್ತ ಪಸರಿಸಬೇಕು.
ದೀಪ ಬರಿ ಉರಿಯುವುದಿಲ್ಲ ಅದು ಬೆಳಕನ್ನು ನೀಡಿ ಕತ್ತಲೆಯನ್ನು ಕಳೆಯುವುದು ಹಾಗೆಯೇ ನಮ್ಮ ಜೀವನ ಬದುಕಿನ ದುಃಖದ ಕತ್ತಲೆಯನ್ನು ಸರಿಸಿ ಸುಖದ ಸುವಾಸನೆಯನ್ನು ಹರಿಸಬೇಕು.
ಸಂತರು ಶರಣರು ಇದನ್ನೇ ಹೇಳುತ್ತಾರೆ ಈ ಜಗತ್ತು ದೇವನವಿಸ್ತಾರ ದೇವನ ತೋಟ.
ಇಲ್ಲಿ ಸೂರ್ಯನ ಬೆಳಕು ಚಂದ್ರ ಬೆಳಕು ಗಾಳಿ ಎಲ್ಲವೂ ಇವೆ.
ಒಂದು ಸಣ್ಣ ಹಕ್ಕಿಗೆ ಬರುವ ವಿದ್ಯೆ ಹಾರುವುದು ಮತ್ತು ಹಾಡುವುದು. ಅದಕ್ಕೆ ಬೇರೆ ಯಾವುದೇ ವಿದ್ಯೆಯಿಲ್ಲ ಸಂಪತ್ತಿಲ್ಲ. ಅದಕ್ಕಿರುವ ಸಂಪತ್ತು ಎರಡು ರೆಕ್ಕೆಗಳು ಮಾತ್ರ. ಅದರಲ್ಲಿನ ಕಲೆಯು ಹಾಡುವುದು ಹಾರುವುದು.
ಆದರೆ ನಮಗೆ ಎಲ್ಲಾ ಕಲೆಯಿದೆ ಮಾತನಾಡುತ್ತೇವೆ, ಹತ್ತಾರು ಭಾಷೆಗಳು ಗೊತ್ತಿವೆ, ಆದರೆ ಹಾಡಲಿಕ್ಕೆ ಹಾರಲಿಕ್ಕೆ ಬರುವುದಿಲ್ಲ. ನಮಗೆ ಒಂದೇ ಒಂದು ಬರುವುದು ಅದು ಕೂಡಿಡುವುದು. ಮಾಡಿ ಮಾಡಿ ಎಲ್ಲವನ್ನು ಕೂಡಿಟ್ಟು ಅನುಭವಿಸದೆ ಸಾಯುವುದು.
“ಅಟ್ಟಿಡಲು ಉಂಟು ಉಟ್ಟಿಡಲು ಇಲ್ಲ” ಅಂದರೆ ದಿನವೆಲ್ಲಾ ಅಡುಗೆ ಮಾಡಿ ಕೆಲಸ ಮಾಡಿ ಕೂಡಿಟ್ಟು ಸಂಜೆ ಹೊತ್ತಿಗೆ ಊಟ ಮಾಡಲು ನಾವೇ ಇಲ್ಲ ಹಾಗೆ ಮಾಡಿದರೆ ಏನು ಫಲ. ಅದಕ್ಕೆ ಹಕ್ಕಿ ಹೇಳಿತು ಮನುಷ್ಯನೇ ನನಗೊಂದಿಷ್ಟು ನೋಡಿ ಕಲಿ ನಿನ್ನಲ್ಲಿ ಎಲ್ಲವೂ ಇದೆ, ನನ್ನಲ್ಲಿ ಇರುವುದೇ ಎರಡು. ನಿನ್ನ ಹೃದಯ ಹಾಡಬೇಕು ಮನಸ್ಸು ಹಾರಬೇಕು ವಿಶ್ವದಲ್ಲೆಲ್ಲ ಮನಸ್ಸು ಹರಿಯಬೇಕು.
ಸೂರ್ಯೋದಯವನ್ನು ನೋಡು ಅದರ ತಣ್ಣನೆಯ ಬೆಳಕು ಅದೇ ಅನುಭವ.
ಒಬ್ಬ ವ್ಯಕ್ತಿ ಮನೆಯೊಳಗೆ ಕುಳಿತು ಬಾಗಿಲು ಕಿಟಕಿಯನ್ನು ಮುಚ್ಚಿ ಗಾಳಿ ಬೆಳಕು ಬರದಂತೆ ಯಾರು ಡಿಸ್ಟರ್ಬ್ ಮಾಡದಂತೆ ಸೌಂದರ್ಯದ ಬಗ್ಗೆ ಸೌಂದರ್ಯದ ಗಣಿ ಎಂಬ ಪುಸ್ತಕವನ್ನು ಓದುತ್ತಿದ್ದರೆ ಏನು ಪ್ರಯೋಜನ. ಹೊರಗಿನ ಸೂರ್ಯನ ಬೆಳಗಿನ ತಂಪಾದ ಶಾಖ, ಗಾಳಿಯ ಪ್ರಫುಲ್ಲಿತ ಭಾವದ ತಂಪು ಮನಸ್ಸನ್ನು ತಂಪು ಮಾಡಲು ಇರುವಾಗ ನಾಲ್ಕು ಗೋಡೆಯ ಮಧ್ಯೆ ಕಿಟಕಿ ಬಾಗಿಲುಗಳನ್ನು ಮುಚ್ಚಿ ಓದಲು ಭಂಗವಾಗುವುದೆಂದು ಒಳಗೆ ಕೂರುವುದು ಏತಕ್ಕಾಗಿ. ನಿಸರ್ಗ ಸೌಂದರ್ಯ ಇರುವುದು ಅನುಭವಿಸಲು.
ಜೀವನ ಎಂದರೆ ನಡೆಯುವುದು ಮಾಡುವುದು. ಎಂದು ನಾವು ಈ ಜಗತ್ತಿಗೆ ಬಂದಿದ್ದೇವೆಯೋ ಅಂದೆ ನಾವು ನಡಿಯಲಿಕ್ಕೆ ಆರಂಭಿಸಬೇಕು. ಯಾವ ಕಡೆ ಎಂದರೆ ಸತ್ಯದ ಕಡೆ ನಡೆಯಬೇಕು. ಅಮೃತ ತತ್ವದ ಕಡೆ ನಡೆಯಬೇಕು ಬೆಳಕಿನತ್ತ ನಡೆಯುವುದು.
ಅಸತೋಮ ಸದ್ಗಮಯ
ತಮಸೋಮಾ ಜ್ಯೋತಿರ್ಗಮಯ
ಮೃತ್ಯೋರ್ಮ ಅಮೃತಂಗಮಯ
ಓಂ ಶಾಂತಿ ಶಾಂತಿ ಶಾಂತಿಃ.

ನಾವು ಸತ್ಯದ ಕಡೆ ನಡೆಯಬೇಕು, ಅಮೃತದ ಕಡೆ ನಡೆಯಬೇಕು.
ಅಜ್ಞಾನದಿಂದ, ನನ್ನನ್ನು ಸತ್ಯದೆಡೆಗೆ ನಡೆಸು;
ಕತ್ತಲೆಯಿಂದ, ನನ್ನನ್ನು ಬೆಳಕಿಗೆ ಕರೆದೊಯ್ಯಿರಿ;
ಸಾವಿನಿಂದ, ನನ್ನನ್ನು ಅಮರತ್ವಕ್ಕೆ ಕರೆದೊಯ್ಯಿರಿ.
ಭಗವಂತನೇ ನನ್ನನ್ನು ಸತ್ಯದತ್ತ ಕರೆದುಕೊಂಡು ಹೋಗು ಭಗವಂತನೇ ನನ್ನನ್ನು ಅಮೃತದತ್ತ ಕರೆದುಕೊಂಡು ಹೋಗು, ಭಗವಂತನೇ ನನ್ನನ್ನು ಬೆಳಕಿನತ್ತ ಕರೆದೊಯ್ಯು, ಅಸತ್ಯದಿಂದ ಸತ್ಯದತ್ತಾ ನನ್ನನ್ನು ಕರೆದೊಯ್ಯು, ಯಾವುದು ಶಾಶ್ವತ ಸುಂದರ ಸತ್ಯವೊ ಅದರತ್ತ ನನ್ನ ಗಮನವನ್ನು ನನ್ನ ಮನವನ್ನು ಹರಿಸು.
ಅಸತ್ಯದಿಂದ ಸತ್ಯದ ಹೋಗುವ ಪಯಣವೇ ಜೀವನ.
ಸತ್ಯವನ್ನು ಅರಿಯುವುದು ಅರಿಸಿಕೊಂಡು ಹೋಗುವುದು,
ನೋಡುವಲ್ಲಿ ಸತ್ಯ, ಮಾಡುವಲ್ಲಿ ಸತ್ಯ, ಕೇಳುವಲ್ಲಿ ಸತ್ಯ, ಮನುಷ್ಯ ಅಸತ್ಯದಿಂದ ಸತ್ಯದೆಡೆಗೆ ನಡೆಯುವುದೇ ಜೀವನ.
ಸತ್ಯದ ಭಾವ, ಕಲ್ಪನೆ ಸತ್ಯದತ್ತ ನಿರಂತರ ಚಲನೆಯೇ ಜೀವನ.
ಜೀವನ ಎಂದರೆ ನಡಿಗೆ, ಯಾವಕಡೆ ನಡಿಗೆ ಎಂದರೆ
ಸಾವಿನಿಂದ ಅಮೃತದತ್ತ ಸಾಗುವುದು, ಕತ್ತಲೆಯಿಂದ ಬೆಳಕಿನತ್ತ ಸಾಗುವುದು.
ನಮ್ಮ ಮಾತಿನಲ್ಲಿ ಅಮೃತ ನಮ್ಮ ಮಾರ್ಗದಲ್ಲಿ ಬೆಳಕು ಇರಬೇಕು. ಅಸತ್ಯದಿಂದ ಸತ್ಯ ಇದುವೇ ನಮ್ಮ ಜೀವನ.
ಸತ್ಯ, ಅಮೃತತ್ವ, ಬೆಳಕು ಈ ಮೂರು ನಮ್ಮ ಶ್ರೇಷ್ಠ ಸಂಪತ್ತು.
ಮೃತ್ಯೋರ್ ಎಂದರೇ ಸಾವು.
ಎಲ್ಲಾ ಕಡೆ ಬದಲಾವಣೆಯನ್ನು ಇದ್ದೇ ಇದೆ ಯಾವ ವಸ್ತು ಶಾಶ್ವತವಲ್ಲ. ಒಂದು ಸುಂದರ ಹೂವಿನ ಅಲಂಕಾರ ಮಾಡಿದರೂ ನೋಡಲಿಕ್ಕೆ ಕಣ್ಣುಗಳಿಗೆ ಆನಂದವನ್ನು ನೀಡಿದರೂ, ಅದು ನಾಳೆ ಇರುವುದಿಲ್ಲ ಹೂವುಗಳು ಬಾಡಿ ಹೋಗುತ್ತವೆ ಸೌಂದರ್ಯ ಕಡಿಮೆಯಾಗುವುದು.
ಸೌಂದರ್ಯ ಇರುವುದರೊಳಗಾಗಿ ಅನುಭವಿಸಿ ಸಾಯಬೇಕು. ಹಾಗೆಯೇ ಜೀವನ ಆರುವುದರೊಳಗಾಗಿ ಅನುಭವಿಸಬೇಕು ಅದುವೇ ಅನುಭವ.
ಅಮೃತತ್ವ : ಸತ್ಯದ ಪಯಣಕ್ಕೆ ಜೀವನ ಎನ್ನುವರು.
ಸತ್ಯೊನ್ ಪಂಥ ವಿಧಧೊ ದೇವಯಾನ.
ನಮ್ಮ ಬದುಕು ದೇವನತ್ತ ಸಾಗುವ ಪಯಣ.
ಹಿಂದೆ ಜ್ಞಾನಿಗಳು ಶಿವಪಥದಲ್ಲಿ ನಡೆದರು ಶಾಂತಿಯನ್ನು ಕಂಡುಕೊಂಡರು ಶಾಂತಿಯ ಮಾರ್ಗದಲ್ಲಿ ನಡೆದರು.
ಈ ಶಾಂತಿಯ ಪಥವನ್ನು ಅರಿತುಕೊಳ್ಳುವುದೇ ಜೀವನ.
*ಸಂಗ್ರಹ: ??? ಸಿದ್ದಲಿಂಗ ಎಸ್. ಸ್ವಾಮಿ ಉಚ್ಚ ತಾ. ಭಾಲ್ಕಿ ಜಿ. ಬೀದರ