ಅಸಡ್ಡೆ ತೋರಿಸದೆ ಕೊರೊನಾ ವಿರುದ್ಧ ಹೋರಾಡಿ.

ಹರಪನಹಳ್ಳಿ,ಏ,29- ಕೋರಾನಾ ವೈರಸನ್ನು ಯಾರೊಬ್ಬರೂ ಲಘುವಾಗಿ ಪರಿಗಣಿಸಿದೇ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಪಿ.ಡಿ.ಒ ಅನ್ನಧಾನಿ ನಾಯ್ಕ್ ಹೇಳಿದರು.ತಾಲೂಕಿನ ಕೆ.ಕಲ್ಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಕೋವಿಡ್ 19 ಟಾಸ್ಕ್ ಪೋರ್ಸ ಸಮಿತಿಯ ತುರ್ತು ಸಭೆಯಲ್ಲಿ ಮಾತನಾಡಿದ ಅವರು ಕೆ.ಕಲ್ಲಹಳ್ಳಿ, ಚಿಕ್ಕಮಜ್ಜಿಗೆರೆ, ವ್ಯಾಸನತಾಂಡ ಗ್ರಾಮಗಳಲ್ಲಿ ತಲಾ ಒಂದೊಂದು ಕೊರಾನಾ ಪಾಸಿಟಿವ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಜನರು  ಜಾಗೃತಿಯಿಂದ ಇರಬೇಕು ಎಂದು ತಿಳಿಸಿದರು.ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಕೊರೊನಾ ಸೋಂಕು ಹೆಚ್ಚಾಗುವ ಭೀತಿ ಶುರುವಾಗಿದ್ದು ಯಾರೋಬ್ಬರು ಜಾಗೃತಿ ವಿಚಾರದಲ್ಲಿ ಅಸಡ್ಡೆ ತೋರಿದೆ ಕೊರೊನಾ ವಿರುದ್ಧ ಹೋರಾಡಬೇಕಿದೆ ಎಂದು ಹೇಳಿದರು.ನೀಲಗುಂದ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾರಾದ  ಪ್ರವೀಣ್ ಕುಮಾರ್  ಮಾತನಾಡಿ ಜ್ವರ ಕೆಮ್ಮು ನೆಗಡಿ ಅಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ಆಸ್ಪತ್ರೆಗೆ ಹೋಗಿ ಕೊರಾನಾ ಟೆಸ್ಟ್ ಮಾಡಿಸಿ ಮುಂಜಾಗ್ರತಾ ಕ್ರಮವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.ಯಾವುದೇ ವ್ಯಕ್ತಿಗೆ ಪಾಸಿಟಿವ್ ಬಂದರು ಯಾರು ಭಯ ಪಡುವ ಆವಶ್ಯಕತೆ ಇಲ್ಲ ಸಮಯಕ್ಕೆ ಸರಿಯಾಗಿ ವೈದ್ಯರ ಸಲಹೆಯ ಮೇರೆಗೆ ಟ್ರೀಟ್ಮೆಂಟ್ ಪಡೆದುಕೊಂಡರೆ ಗುಣಮುಖರಾಗಬಹುದೆಂದು ಎಂದು ಹೇಳಿದರು.ಪಾಸಿಟಿವ್ ಬಂದ ವ್ಯಕ್ತಿಯ ಜೊತೆ  ಪ್ರಾಥಮಿಕ  ಸಂಪರ್ಕದಲ್ಲಿದ್ದರೆ ಅಂಥವರಿಗೆ ಎಳು ದಿನದವರೆಗೂ ಲಕ್ಷಣಗಳು ಕಂಡು ಬರುವುದು ಕಡಿಮೆ  ಆದರು ಸಹ ನಿರ್ಲಕ್ಷಿಸದೆ ಟೆಸ್ಟ್ ಮಾಡಿಸಿಕೊಳ್ಳಬೇಕು  ಎಂದು ಹೇಳಿದರು.ಗ್ರಾಮ ಪಂಚಾಯತಿ ಅಧ್ಯಕ್ಷ ಮಾಳಿಗಿ ತಿಮ್ಮಪ್ಪ ಮಾತನಾಡಿ ಕೊರಾನಾ ಹರಡದಂತೆ ಎಚ್ಚರಿಕೆ ವಹಿಸಿ, ಅನವಶ್ಯಕವಾಗಿ ಯಾರು ಕೂಡ ಹೊರಗಡೆ  ಗುಂಪು ಗುಂಪಾಗಿ ಓಡಾಡಬಾರದು ಕೊರಾನಾ ತಡೆಗಾಗಿ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.ಈ ವೇಳೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ವಿರೂಪಾಕ್ಷಪ್ಪ, ಗ್ರಾಮ ಪಂಚಾಯಿತಿ ಸದಸ್ಯರು, ಹಾಗೂ ಗ್ರಾ.ಪಂ.ಕಾರ್ಯದರ್ಶಿ ಭೋಜಪ್ಪ, ಗ್ರಾಮಲೇಕಾಧಿಕಾರಿ ಕರಿಬಸಮ್ಮ,  ಆರೋಗ್ಯ ಸಹಾಯಕಿ ಜ್ಯೋತಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸಭೆಯಲ್ಲಿ ಉಪಸ್ಥಿತರಿದ್ದರು.